
- ಪತ್ನಿ ರಾಧಿಕಾ ಪಂಡಿತ್ ಅವರನ್ನು ಹೀಗೆ ಮುಕ್ತ ಕಂಠದಿಂದ ಹಾಡಿ ಹೊಗಳಿದ್ದು ಯಶ್. ಅದು ‘ಆದಿ ಲಕ್ಷ್ಮಿ ಪುರಾಣ’ ಚಿತ್ರದ ಆಡಿಯೋ ಲಾಂಚ್ ಸಂದರ್ಭದಲ್ಲಿ.
ಆಡಿಯೋ ಲಾಂಚ್‌ಗೆ ಯಶ್ ಅತಿಥಿ..
ಮದುವೆಯ ನಂತರ ರಾಧಿಕಾ ಪಂಡಿತ್ ಇದೇ ಮೊದಲು ನಾಯಕಿ ಆಗಿ ಅಭಿನಯಿಸಿದ ಚಿತ್ರ ‘ಆದಿ ಲಕ್ಷ್ಮಿ ಪುರಾಣ’. ಇದರ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. ಯಶ್ ಆ ದಿನದ ಮುಖ್ಯಅತಿಥಿ. ಆ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಚಿತ್ರದ ನಾಯಕ ನಟ ನಿರೂಪ್ ಭಂಡಾರಿ.
ಯಶ್ ನಂಬರ್‌ನ ಹಿಂಗ್ ಸೇವ್ ಮಾಡಿ ಶಾಕ್ ಕೊಟ್ಟ ರಾಧಿಕಾ!
ಸಿನಿಮಾ ವಿಚಾರಕ್ಕೆ ರಾಧಿಕಾ ಸ್ವತಂತ್ರರು..
‘ನಟಿಯರು ಮದುವೆಯಾದರೆ ಭವಿಷ್ಯದಲ್ಲಿ ಸಿನಿಮಾ ಮಾಡುತ್ತಾರೋ, ಇಲ್ಲವೋ ಎನ್ನುವ ಅನುಮಾನ ಇದ್ದೇ ಇರುತ್ತೆ. ಇದಕ್ಕೆ ಹಲವು ಕಾರಣಗಳಿರುತ್ತವೆ. ಮುಂದೆ ಕೌಟುಂಬಿಕ ಜೀವನಕ್ಕೆ ಹೆಚ್ಚು ಒತ್ತು ನೀಡಬೇಕಾಗುತ್ತದೆ, ಹಾಗೆಯೇ ಅದು ಅವರ ಮನೆಯವರಿಗೂ ಇಷ್ಟಇರುತ್ತೋ ಇಲ್ಲವೋ ಎನ್ನುವ ಮಾತುಗಳೂ ಸಹಜ. ಆದರೆ ರಾಧಿಕಾ ಅವರ ಸಿನಿ ಪಯಣಕ್ಕೆ ನಾನಾಗಲಿ, ಮನೆಯವರಾಗಲಿ ಅಡ್ಡಿ ಆಗುವ ಪ್ರಶ್ನೆಯೇ ಇಲ್ಲ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಅವರು ಸಂಪೂರ್ಣ ಸ್ವತಂತ್ರರು. ಎಂತಹ ಕತೆ ಆಯ್ಕೆ ಮಾಡಿಕೊಳ್ಳಬೇಕು, ಯಾವ ರೀತಿಯ ಪಾತ್ರದಲ್ಲಿ ಅಭಿನಯಿಸಬೇಕು ಎನ್ನುವುದು ಅವರಿಗೂ ಗೊತ್ತಿದೆ’ ಎಂದರು ಯಶ್. ರಾಧಿಕಾ ಅವರ ಟ್ಯಾಲೆಂಟ್ ಜತೆಗೆ ತಮ್ಮ ಸಿನಿ ಬದುಕಿಗೂ ಅವರ ಸಹಕಾರ ಹೇಗಿದೆ ಎನ್ನುವುದನ್ನು ಯಶ್ ಅಲ್ಲಿ ಬಿಚ್ಚಿಟ್ಟರು.
ರಾಧಿಕಾ ತುಂಬಾ ಟ್ಯಾಲೆಂಟೆಡ್ ನಟಿ...
‘ರಾಧಿಕಾ ತುಂಬಾ ಟ್ಯಾಲೆಂಟೆಡ್ ನಟಿ. ಅವರ ಈತನಕದ ಸಿನಿ ಜರ್ನಿಯೇ ಅದಕ್ಕೆ ಸಾಕ್ಷಿ. ನನ್ನ ಸಿನಿಮಾಗಳ ಕತೆ ಕೇಳುವಾಗ ಅವರು ಜತೆಗಿರುತ್ತಾರೆ. ಅವರ ಸಿನಿಮಾದ ಕತೆ ಕೇಳುವಾಗ ನಾನೂ ಜತೆಗಿರುತ್ತೇನೆ. ಈ ಚಿತ್ರ(ಆದಿ ಲಕ್ಷ್ಮಿ ಪುರಾಣ)ವನ್ನು ರಾಧಿಕಾ ಒಪ್ಪಿಕೊಳ್ಳುವ ಮುನ್ನ ಮೊದಲು ಕತೆ ಕೇಳಿದ್ದೇ ನಾನು. ಕತೆ ತುಂಬಾ ಚೆನ್ನಾಗಿತ್ತು. ಇಬ್ಬರು ಒಂದು ಸಾರಿ ಕತೆ ಕೇಳಿದ ನಂತರ ನಾನೇ ಅದನ್ನು ರಾಕ್‌ಲೈನ್ ಸರ್ ಗಮನಕ್ಕೆ ತಂದೆ. ಅವರು ತಕ್ಷಣವೇ ಆಯ್ತು ಸಿನಿಮಾ ಮಾಡೋಣ ಅಂದರು. ಹಾಗೆ ಶುರುವಾಗಿದ್ದು ಈ ಚಿತ್ರ’ ಎನ್ನುತ್ತಾ ‘ಆದಿಲಕ್ಷ್ಮಿ ಪುರಾಣ’ ಶುರುವಾಗಿದ್ದ ದಿನಗಳನ್ನು ಮೆಲುಕು ಹಾಕಿದರು.
ನಿರೂಪ್ ಭಂಡಾರಿ ಅದ್ಭುತ ನಟ
ನಿರೂಪ್ ಮತ್ತು ಅನೂಪ್ ತುಂಬಾ ಅಪರೂಪದ ಪ್ರತಿಭೆ. ಫಸ್ಟ್ ಟೈಮ್ ‘ರಂಗಿತರಂಗ’ ಚಿತ್ರದ ಟ್ರೇಲರ್ ನೋಡಿದ್ದ ಸಂದರ್ಭದಲ್ಲಿ ‘ಯಾರೋ ಹೊಸಬರು ಎಷ್ಟುಚೆನ್ನಾಗಿ ಸಿನಿಮಾ ಮಾಡಿದ್ದಾರೆ’ ಎನ್ನುವ ಕುತೂಹಲದೊಂದಿಗೆ ಇಬ್ಬರು ಸಹೋದರರನ್ನು ಭೇಟಿ ಮಾಡಿ ಮಾತನಾಡಿದ್ದೆ. ಆ ನಂತರ ಸಿನಿಮಾ ಬಂತು. ಸಿನಿಮಾ ನೋಡಿದೆ. ತುಂಬಾ ಖುಷಿ ಆಯಿತು. ಸಿನಿಮಾ ಸಕ್ಸಸ್ ಆಗಿ ದೊಡ್ಡ ಹೆಸರು ಪಡೆದರು. ಅಲ್ಲಿಂದ ನಿರೂಪ್ ಮತ್ತು ಅನೂಪ್ ನಿರಂತರ ಸಂಪರ್ಕದಲ್ಲಿದ್ದಾರೆ. ಹಾಗಾಗಿಯೇ ‘ಆದಿ ಲಕ್ಷ್ಮಿ ಪುರಾಣ’ ಚಿತ್ರಕ್ಕೆ ನಿರೂಪ್ ನಾಯಕ ಎಂದಾಗ ಖುಷಿ ಆಗಿತ್ತು. ಸಿನಿಮಾದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆನ್ನುವ ವಿಶ್ವಾಸವೂ ಇದೆ. ಸಿನಿಮಾ ಗೆಲ್ಲಲಿ, ಕಲಾವಿದರು ಸೇರಿ ನಿರ್ಮಾಪಕರಿಗೂ ಖುಷಿ ಸಿಗಲಿ’ ಎಂದರು ಯಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.