
ಬೆಂಗಳೂರು (ಮಾ. 27): ‘ಸೋಲುಗಳು ಮತ್ತು ಕಠಿಣ ಸಂದರ್ಭಗಳೇ ನನ್ನ ಪಾಲಿನ ದೊಡ್ಡ ಟೀಚರ್‌ಗಳು. ಪ್ರತಿ ಯೊಮ್ಮೆ ಸೋತಾಗಲೂ ಇನ್ನಷ್ಟು ಉತ್ಸಾಹದಿಂದ ಮರು ಪ್ರಯತ್ನದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಆಗ ದಕ್ಕಿಸಿಕೊಂಡ ಗೆಲುವು ತುಂಬಾ ಖುಷಿ ನೀಡುತ್ತಿತ್ತು. ನಾನು ಸದಾ ಕಾಲ ಎಲ್ಲ ರಿಂದಲೂ ಪಾಠ ಕಲಿಯಲು ಬಯಸುತ್ತೇನೆ. ಹಾಗಾಗಿಯೇ ಓದಿಗಿಂತ ಜನರಿಂದ, ಅನುಭವಗಳಿಂದ ಕಲಿತ ಪಾಠ ದೊಡ್ಡದು. ಇದೆಲ್ಲವನ್ನೂ ನಾನು ದಾಖಲಿಸಬೇಕು ಎಂದುಕೊಂಡಿದ್ದೇನೆ’ ಎಂದು ಕತ್ರಿನಾ ಕೈಫ್ ಹೇಳಿಕೊಳ್ಳುತ್ತಿದ್ದಂತೆಯೇ ಅಲ್ಲಿದ್ದವರೆಲ್ಲರ ಮನದಲ್ಲಿ ತಮ್ಮ ಜೀವನವನ್ನೇ ಆಧರಿಸಿ ಕತ್ರಿನಾ ಚಿತ್ರ ನಿರ್ಮಾಣ ಮಾಡುತ್ತಾರಾ ಎನ್ನುವ ಪ್ರಶ್ನೆ ಎದ್ದಿತು.
ಆದರೆ ಹೇಳಿಕೆಯ ಬೆನ್ನ ಹಿಂದೆಯೇ ಮಾತು ಮುಂದುವರೆಸಿದ ಕತ್ರಿನಾ ‘ನಾನು ಪಟ್ಟ ಕಷ್ಟ-ಸುಖ, ಎದುರಿಸಿದ ಸವಾಲುಗಳು, ಸೋಲು-ಗೆಲುವು, ಬಾಲಿವುಡ್ ಅನ್ನು ನಾನು ಕಂಡ ರೀತಿಗಳನ್ನೆಲ್ಲಾ ಒಟ್ಟಾಗಿಸಿ ಒಂದು ಪುಸ್ತಕ ಬರೆಯುವ ನಿರ್ಧಾರ ಮಾಡಿದ್ದೇನೆ. ಅದು ಸದ್ಯದಲ್ಲಿಯೇ ಆರಂಭವಾಗಲಿದೆ’ ಎಂದು ಹೇಳಿದರು. ಚಿತ್ರಗಳಲ್ಲಿಯೇ ಬ್ಯುಸಿಯಾಗಿರುವ ಕತ್ರಿನಾ ಪುಸ್ತಕ ಬರೆಯುತ್ತಿರುವುದರಿಂದ ಅವರೇ ಹೇಳಿಕೊಂಡಿರುವ ರೀತಿ ಇದೊಂದು ಸಾಧನೆಯ ಕಥನವಾಗಲಿದೆ. ಅಲ್ಲದೇ ಬಾಲಿವುಡ್‌ನಲ್ಲಿ ಕತ್ರಿನಾ ನಟಿಸಿದ ಸಹನಟರ ಒಡನಾಟ, ಮರೆಯಲಾಗದ ವಿಶೇಷ ಸಂದರ್ಭಗಳೆಲ್ಲವನ್ನೂ ದಾಖಲು ಮಾಡಲಿದ್ದಾರೆ. ಇದರಿಂದ ಕತ್ರಿನಾ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದೆ. ಇದರ ಜೊತೆಗೆ ಸಿನಿಮಾ ಪ್ರಿಯರಿಗೂ
ಇದೊಂದು ಸ್ಫೂರ್ತಿ ಕತೆಯಾಗಲಿದೆ. ಕತ್ರಿನಾ ಅಂದುಕೊಂಡ ಹಾಗೆ ಬರೆಯಲು ಮುಂದಾದರೆ ಮುಂದಿನ ವರ್ಷದ ಕೊನೆಯಲ್ಲಿ ಓದುಗರ ಕೈ ಸೇರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.