
ಮೊನ್ನೆ ಮೊನ್ನೆ ಕರೀನಾ ಕಪೂರ್ ಶಾರ್ಟ್ ಬಟ್ಟೆ ಧರಿಸಿ ಪಾರ್ಟಿಗೆ ಬಂದಿದ್ದು ಸೋಷಲ್ ಮಿಡಿಯಾಗಳಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು. ಕೆಲವರು ಕರೀನ ಈಗ ಒಂದು ಮಗುವಿನ ತಾಯಿ. ಹಾಗಾಗಿ ಈ ರೀತಿಯ ಬಟ್ಟೆ ತೊಡುವುದು ಎಷ್ಟು ಸೂಕ್ತ ಎಂದು ಪ್ರಶ್ನೆ ಮಾಡಿದ್ದರು. ಇಂತಹ ವಿಚಾರಗಳಿಗೆಲ್ಲಾ ಕರೀನಾ ಸೊಪ್ಪು ಹಾಕಿದವರೇ ಅಲ್ಲ. ಆದರೆ ಇದನ್ನು ಹೀಗೇ ಬಿಡಬಾರದು ಎನ್ನುವ ಕಾರಣಕ್ಕೆ ತಮ್ಮ ಉಡುಗೆ ತೊಡುಗೆ ಬಗ್ಗೆ ಮಾತನಾಡಿದ್ದಾರೆ.
‘ತಾಯಿಯಾದ ತಕ್ಷಣಕ್ಕೆ ಇದೇ ರೀತಿಯ ಬಟ್ಟೆ ತೊಡಬೇಕು ಎಂದೇನು ಇಲ್ಲ. ಅದು ನನಗೆ ಇಷ್ಟವೂ ಇಲ್ಲ. ನಮಗೆ ಕಂಫರ್ಟ್ ಅನ್ನಿಸುವ ಬಟ್ಟೆಯನ್ನು ನಾವು ತೊಡಬೇಕು. ಇನ್ನೊಬ್ಬರ ಇಷ್ಟ ಕಷ್ಟ ನಮಗ್ಯಾಕೆ. ನನ್ನ ತಾಯಿ ಈಗಲೂ ಜೀನ್ಸ್ ತೊಡುತ್ತಾರೆ. ಅದು ಅವರ ಇಷ್ಟ. ಮಹಿಳೆಯರಿಗೆ ಬಟ್ಟೆಯ ಬಗ್ಗೆ ಹೆಚ್ಚು ಮೋಹ ಇರುತ್ತೆ. ಮದುವೆಯಾಯಿತು, ಮಕ್ಕಳಾಯಿತು ಎಂದ ಮಾತ್ರಕ್ಕೆ ಆಸೆಗಳೆಲ್ಲವನ್ನೂ ಬಲಿಕೊಡಬೇಕಾಗಿಲ್ಲ’ ಎಂದು ಹೇಳಿ ನಾನು ಇರುವುದು ಹೀಗೆ.
ಅವರವರ ಇಷ್ಟಕ್ಕೆ ಬಟ್ಟೆ ಹಾಕುವುದಕ್ಕೆ ನನ್ನ ಸಹಮತ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಕಂಡ ಹಲವಾರು ಮಹಿಳೆಯರು ಶಹಬ್ಬಾಸ್ ಕರೀನಾ ಎಂದು ಸಪೋಟ್ ಮಾಡಿದ್ದಾರೆ. ಈಗ ಬಾಲಿವುಡ್‌ನಲ್ಲಿ ಕರೀನಾ ಆಡಿರುವ ಇಷ್ಟದ ಬಟ್ಟೆ ಮಾತು ಸಖತ್ ಇಂಪಾರ್ಟೆನ್ಸ್ ಪಡೆದುಕೊಂಡಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.