
ಕನ್ನಡದ ಕೋಟ್ಯಾಧಿಪತಿ. ಕನ್ನಡ ಕಿರುತೆರೆಯ ದೊಡ್ಡ ಸಂಚಲನ. ಕೆಲವು ವರ್ಷಗಳ ಹಿಂದೆ ಪ್ರತಿ ರಾತ್ರಿ 8 ಕ್ಕೆ ಸಹಜ ನಗುವಿನೊಂದಿಗೆ ಅಪ್ಪು ಹಾಜರ್. ಸಖತ್ ಮಾತಿನಿಂದ ಆಗ್ತಿತ್ತು ಕೋಟ್ಯಾಧಿಪತಿ ಎಲ್ಲರಿಗು ಇಷ್ಟ.ಅಪ್ಪು ಪ್ರಶ್ನೆ ಕೇಳೋ ರೀತಿನೇ ವಿಭಿನ್ನ.ಆ ವಿಶೇಷತೆಗೆ ಮನ ಸೋಲದವರೇ ಇಲ್ಲ.ಪ್ರಶ್ನೆ ಕೇಳ್ತಾ ಕೇಳ್ತಾನೇ ಮನರಂಜಿಸುತಿದದ್ದು ಅಪ್ಪು ಟ್ಯಾಲೆಂಟ್. ಇಷ್ಟೇ ಅಲ್ಲ, ಸ್ಟಾರ್'ಗಳೂ ಈ ಷೋಕ್ಕೆ ಬಂದು ಹೋದವರೇ. ಸ್ಯಾಂಡಲ್ ವುಡ್ ಕ್ವೀನ್ ರಮ್ಯ,ಪ್ರಭುದೇವಾ ಹೀಗೆ ಹಲವರು ಅಪ್ಪು ಪ್ರಶ್ನೆಗೆ ಉತ್ತರ ಕೊಟ್ಟಿದ್ದರು.
ಸಾರ್ವಜನಿಕರು ಕೂಡ ಮಾಹಿತಿ ಮನರಂಜನೆ ಎರಡೂ ಸಿಗುತ್ತೆ ಅಂತ ಟಿ.ವಿ.ಮುಂದೇನೆ ಕುಳಿತುಕೊಳ್ಳುತ್ತಿದ್ದರು. ಅಷ್ಟೊಂದು ಖ್ಯಾತಿ ಗಳಿಸಿತ್ತು ಕನ್ನಡದ ಕೋಟ್ಯಾಧಿಪತಿ ಮತ್ತೆ ಶುರು ಆಗೋ ಸುದ್ದಿ ಹರಿದಾಡುತ್ತಿದೆ.ಪವರ್ ಪುನೀತ್ ಬೇರೊಂದು ಚಾನೆಲ್ ನಲ್ಲಿ ಮತ್ತೊಂದು ಕಾರ್ಯಕ್ರಮ ಮಾಡ್ತಿದ್ದಾರೆ. ಆ ಸುದ್ದಿ ಈಗಾಗಲೇ ಖಚಿತಗೊಂಡಿದೆ. ಆದರೆ ಕನ್ನಡದ ಕೋಟ್ಯಾಧಿಪತಿಗೆ ಮತ್ತೊಬ್ಬ ಸ್ಟಾರ್ ಹೆಸರು ಕೇಳಿ ಬರ್ತಿದೆ.
ರಾಕಿಂಗ್ ಸ್ಟಾರ್ ಹೆಸರು
ರಾಕಿಂಗ್ ಸ್ಟಾರ್ ಯಶ್ ಈ ಷೋ ಹೋಸ್ಟ್ ಮಾಡ್ತಾರಾ..? ಗೊತ್ತಿಲ್ಲ. ಆ ಚಾನೆಲ್ ಪುನೀತ್'ರನ್ನ ಅಪ್ರೋಚ್ ಮಾಡಿದ್ದು ಆಯ್ತು. ಅದು ಸಾಧ್ಯವಿಲ್ಲ ಅನ್ನೋ ಮಾಹಿತಿಯೊಂದಿಗೆ ಹೊರ ಬಂದಿದ್ದು ಆಯ್ತು. ಅದಕ್ಕೋ ಏನೋ. ಯಶ್ ಹೆಸರು ಕೇಳಿ ಬರ್ತಿದೆ. ಆದರೆ, ಯಶ್ ಈ ಷೋ ಮಾಡ್ತಾರೋ ಇಲ್ಲವೋ. ಸುದ್ದಿ ದಟ್ಟವಾಗಿದೆ. ಆದರೆ,ಮೂಲಗಳ ಪ್ರಕಾರ ಕನ್ನಡದ ಕೋಟ್ಯಾಧಿಪತಿ ಆರಂಭಿಸೋ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿಯೇ ಇದೆ. ಅಷ್ಟರಲ್ಲಿಯೇ ಕನ್ನಡದ ಕೋಟ್ಯಾಧಿಪತಿ ಹೋಸ್ಟ್ ಯಾರ್ ಎಂಬ ಸುದ್ದಿ ವೆಬ್'ಸೈಟ್ ಗಳಲ್ಲಿ ಹರಿದಾಡುತ್ತಿದೆ.ಆದರೆ, ಯಾವುದು ಇನ್ನೂ ಫೈನಲ್ ಆಗಿಯೇ ಇಲ್ಲ. ಇಲ್ಲಿ ಉಪ್ಪಿ ಹೆಸರು ಕೇಳಿ ಬಂದಿದ್ದೂ ಇದೆ. ಅಧಿಕೃತ ಮಾಹಿತಿ ಇನೂ ಹೊರ ಬಿದ್ದಿಲ್ಲ. ಉತ್ತರ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.