
ಈಗಾಗಲೇ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ನೋಡಿ ಆನಂದಿಸಿರುವವರಿಗೂ ಸಂಪೂರ್ಣ ಹೊಸ ಅನುಭವ ನೀಡಲು ಚಾನಲ್ ಸಜ್ಜಾಗಿದೆ. ಚಿತ್ರ ಪ್ರಸಾರದ ನಡುವೆ ಸ್ವತಃ ಯಶ್ ಅವರೇ ನಿಮ್ಮೊಂದಿಗೆ ಮಾತಾಡುತ್ತಾರೆ. ಸಿನಿಮಾ ಕುರಿತ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಯಶ್ ಮಾತ್ರ ಅಲ್ಲ, ಚಿತ್ರತಂಡದ ಅನೇಕರು ಸಿನಿಮಾ ಕುರಿತು ಮಾತಾಡಲಿದ್ದಾರೆ. ಜತೆಗೆ ಅಪರೂಪದ ಮೇಕಿಂಗ್ ದೃಶ್ಯಗಳನ್ನು ನೀವು ನೋಡಬಹುದು.
ಇವೆಲ್ಲಾ ಸೇರಿ ಸಿನಿಮಾ ನೋಡುವ ಮಜ ಡಬಲ್ ಆಗಲಿದೆ. ಈಗಾಗಲೇ ಕಲರ್ಸ್ ಕನ್ನಡ ಚಾನಲ್‌ನಲ್ಲಿ ಮೂಡಿ ಬರ್ತಾ ಇರೋ ವಿನೂತನ ರೀತಿಯ ಪ್ರೋಮೋಗಳು ಜನರ ಮನ ಸೆಳೆದಿವೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಚಾಪ್ಟರ್ ಬರೆದ ಮಹೋನ್ನತ ಚಿತ್ರ ‘ಕೆಜಿಎಫ್’, ನಿರ್ದೇಶಕ ಪ್ರಶಾಂತ್ ನೀಲ್ ಅವರ ಮಹಾ ಕನಸು. ಅದನ್ನ ನಿಮ್ಮ ಮನೆಯ ಹಜಾರದಲ್ಲಿ ಕೂತು, ಕೈಲಿ ಒಂದಷ್ಟುಕುರಕಲು ತಿಂಡಿಯ ಬಟ್ಟಲು ಹಿಡಿದುಕೊಂಡು ನೋಡೋ ಸುಖಾನೇ ಬೇರೆ. ಮುಂಬೈ, ಕೆಜಿಎಫ್, ನರಾಚಿಗಳ ಚಿನ್ನದ ಧೂಳಿನಲ್ಲಿ ಕಳೆದುಹೋಗಲು ನೀವ್ ರೆಡಿನಾ? ಹಾಗಾದ್ರೆ ನಾಳೆ ಸಂಜೆ ಏಳು ಗಂಟೆಗೆ ಕಲರ್ಸ್ ಕನ್ನಡ ಚಾನಲ್ ಒತ್ತೋದನ್ನ ಮರೀಬೇಡಿ.
ದೊಡ್ಡ ದೊಡ್ಡ ಕನ್ನಡ ಸಿನಿಮಾಗಳು ಈ ವರ್ಷ ಕಲರ್ಸ್ ಕನ್ನಡದಲ್ಲಿ ಬರೋದಕ್ಕಿವೆ. ‘ಕೆಜಿಎಫ್’ನಿಂದ ಮನರಂಜನೆಯ ಈ ಚಾಪ್ಟರ್ ಶುರುವಾಗುತ್ತಿರುವುದಕ್ಕೆ ವೈಯಕ್ತಿಕವಾಗಿ ಹೆಮ್ಮೆಯಿದೆ. ನಮ್ಮ ಮುಂದಿನ ಬದಲಾವಣೆ ‘ಬೆಲ್ ಬಾಟಮ್’- ಪರಮೇಶ್ವರ ಗುಂಡ್ಕಲ್, ಕಲರ್ಸ್ ಕನ್ನಡ ವಾಹಿನಿಗಳ ಬ್ಯುಸಿನೆಸ್ ಹೆಡ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.