ಚಿತ್ರ ವಿಮರ್ಶೆ: I Love You

By Web Desk  |  First Published Jun 14, 2019, 4:12 PM IST

ಉಪೇಂದ್ರ, ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಚಿತ್ರ I Love You ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 


ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯು ಸಿನಿಮಾ ಬಿಡುಗಡೆ ಆಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಚಿತ್ರ ತೆರೆಗೆ ಬಂದಿದ್ದು ಉಪ್ಪಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆರ್ ಚಂದ್ರು ಡಿಫ್ರೆಂಟ್ ಜಾನರ್ ಲವ್ ಸ್ಟೋರಿಗೆ ಆಕ್ಷನ್ ಕಟ್ ಹೇಳಿದ್ದು ಸೋನು ಮುಗ್ದ ಅಭಿನಯ ಹಾಗೂ ರಚಿತಾ ರಾಮ್ ಬೋಲ್ಡ್ ಲುಕ್ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿದೆ.

ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!

Tap to resize

Latest Videos

ಐ ಲವ್ ಯು ಪಕ್ಕಾ ಉಪ್ಪಿ ಸ್ಟೈಲ್ ಸಿನಿಮಾ. ಉಪ್ಪಿ ಮತ್ತೆ ಪ್ರೇಮ ಪಾಠ ಮಾಡಿದ್ದಾರೆ.  ಐ ಲವ್ ಯು ಚಿತ್ರ ನೋಡಿದವ್ರಿಗೆ ರಿಯಲ್ ಸ್ಟಾರ್ ನ ’ಎ’ ಹಾಗೂ ‘ಉಪೇಂದ್ರ’ ಚಿತ್ರ ನೆನಪಾಗುತ್ತೆ. ಇನ್ನು ಚಿತ್ರದಲ್ಲಿ ಕ್ಯಾಮೆರಾ ವರ್ಕ್ ಹಾಗೂ ಸ್ಕ್ರೀನ್ ಪ್ಲೇ ನೋಡುಗರಿಗೆ ಇಷ್ಟವಾಗುತ್ತೆ. ಆಡಿಯೋ ಈ ಹಿಂದೆಯೇ ಹಿಟ್ ಆಗಿದ್ದು ರಚಿತಾ ಅಭಿನಯದ ‘ಮಾತನಾಡಿ ಮಾಯವಾದೇ...’ ಸಾಂಗ್ ಪಡ್ಡೆ ಹುಡುಗರ ನಿದ್ದೆ ಕದಿಯುತ್ತೆ. 

ಐ ಲವ್ ಯು ಸಿನಿಮಾ ಬಗ್ಗೆ ಹುಟ್ಟಿಕೊಂಡಿದ್ದ ನಿರೀಕ್ಷೆಗಳಿಗೆ ತೆರೆ ಬಿದ್ದಿದ್ದು ಉಪ್ಪಿ ಸ್ಟೈಲ್ ಆಫ್ ಆಕ್ಟಿಂಗ್ ಮತ್ತು ಮ್ಯಾನರಿಸಂ ತೆರೆ ಮೇಲೆ ವರ್ಕ್ ಆಗಿದೆ. ಒಟ್ಟಾರೆ ಐ ಲವ್ ಯು ಸಿನಿಮಾ ನೋಡಿದವ್ರೆಲ್ಲರೂ ಉಪ್ಪಿ ಇಸ್ ಬ್ಯಾಕ್ ಅಂತಿದ್ದಾರೆ. 


 

click me!