600 ರೂ. ಸೀರೆಯಲ್ಲಿ ಮಿಂಚಿದ ಕಂಗನಾರ ಹ್ಯಾಂಡ್‌ಬ್ಯಾಗ್‌ ಹಿಡಿದು ಜಗ್ಗಿದ್ರು!

Published : Aug 20, 2019, 11:34 PM ISTUpdated : Aug 20, 2019, 11:50 PM IST
600 ರೂ. ಸೀರೆಯಲ್ಲಿ ಮಿಂಚಿದ ಕಂಗನಾರ ಹ್ಯಾಂಡ್‌ಬ್ಯಾಗ್‌ ಹಿಡಿದು ಜಗ್ಗಿದ್ರು!

ಸಾರಾಂಶ

ನೇರ ನುಡಿಗೆ ಹೆಸರಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ಫ್ಯಾಷನ್ ಟ್ರೆಂಡ್ ವಿಷಯಕ್ಕೆ ಸುದ್ದಿ ಮಾಡಿದ್ದಾರೆ. ಕಂಗನಾ ಸಹೋದರಿ ಮಾಡಿರುವ ಟ್ವೀಟ್ ಸುದ್ದಿಗೆ ಕಾರಣವಾಗಗಿದೆ. ಆದರೆ ಇದು ಇಲ್ಲಿಗೆ ನಿಲ್ಲುವುದಿಲ್ಲ.. ನೆಟ್ಟಿಗರು ಅವರ ಹ್ಯಾಂಡ್ ಬ್ಯಾಗ್ ಬಗ್ಗೆ ಟ್ರೋಲ್ ಮಾಡಿದ್ದಾರೆ.

ಮುಂಬೈ[ಆ. 20] ಈ ಸೀರೆಯ ದರ ಎಷ್ಟು? ಊಹಿಸಿ ಬಹುಮಾನ ಗೆಲ್ಲಿ ಎಂಬ ಶೋ ಒಂದು ಹಿಂದೆ  ಪ್ರಸಾರವಾಗುತ್ತಿತ್ತು. ಅರೆ ಕಂಗನಾಗೂ ಈ ಸೀರೆ ಶೋಗೂ ಎಂಥ ಸಂಬಂಧ ಅಂದ್ರಾ ಇಲ್ಲಿದೆ ನೋಡಿ ಸುದ್ದಿ..

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸೀರೆಯುಟ್ಟು ವಿಮಾನ ನಿಲ್ದಾಣದಲ್ಲಿ ತೆರಳುತ್ತಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ಅದಕ್ಕೆ ಕಾರಣ ಸೀರೆಯ ಬೆಲೆ. ಹೌದು ಅವರು ಧರಿಸಿದ್ದ ಸೀರೆಯ ಬೆ 600 ರೂ. ! 

ಕಂಗನಾ ಸೀರೆ ತೊಟ್ಟಿರುವ ಪೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಕಂಗನಾ ಸೋದರಿ ರಂಗೋಲಿ ಅಪ್ ಲೋಡ್ ಮಾಡಿದ್ದಾರೆ. ಕಂಗನಾ ಕೋಲ್ಕತ್ತಾದಲ್ಲಿ 600 ರೂ. ನೀಡಿ ಈ ಸೀರೆಯನ್ನು ಖರೀದಿಸಿದ್ದರು. ಇದೇ ಸೀರೆಯನ್ನು ಧರಿಸಿ ಜೈಪುರದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಸೀರೆ ದೊರೆತಿದೆ ಅಂದ್ರೆ ನಂಬಲು ಸಾಧ್ಯವಿಲ್ಲ. ಕಾರ್ಮಿಕರ ಶ್ರಮಕ್ಕೆ ಇನ್ನು ಹೆಚ್ಚಿನ ಬೆಲೆ ಸಿಗಬೇಕು ಎಂಬ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂತರಾಷ್ಟ್ರೀಯ ಬ್ರ್ಯಾಂಡ್ ಬದಲು ದೇಶಿ ಬಟ್ಟೆಗಳನ್ನುಕೊಂಡು ಧರಿಸಿ ಇದರಿಂದ ಕಾರ್ಮಿಕರ ಜೀವನಮಟ್ಟ ಸಹ ಸುಧಾರಣೆ ಆಗುತ್ತದೆ ಎಂದು ರಂಗೋಲಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸೀರೆ 600 ರೂ. ಸರಿ ಆದರೆ ಕಂಗನಾ ಹಾಕಿಕೊಂಡಿರುವ ಹ್ಯಾಂಡ್ ಬ್ಯಾಗ್ ದರ ಎಷ್ಟು? ಪಾದರಕ್ಷೆ ಎಷ್ಟಕ್ಕೆ ಬಾಳುತ್ತದೆ ಎಂದು ಮುಂತಾಗಿ ಕಾಲೆಳೆದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?
ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?