ಮುಂಬೈ: ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆಗಳು ವಿವಾದ ಆಗೋದು ಹೊಸದೇನೂ ಅಲ್ಲ. ಆದರೆ ಈ ಬಾರಿ ಅವರು ನೇರವಾಗಿ ಫಿಟ್‌ನೆಸ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೆಚ್ಚು ಪ್ರೊಟೀನ್ ಶೇಕ್ ಕುಡಿಯುವುದರಿಂದ ಮನುಷ್ಯರು ಬುದ್ಧಿಹೀನರಾಗುತ್ತಾರೆ ಮತ್ತು ಮೆದಳಿನ ಕಾರ್ಯಕ್ಷಮತೆ ಮಂದಗತಿಯಾಗುತ್ತದೆ ಎಂದು ಕಂಗನಾ ಹೇಳಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪ್ರೊಟೀನ್ ಡಯಟ್ ಬಗ್ಗೆ ಕಂಗನಾ ಮಾಡಿರುವ ಈ ಕಾಮೆಂಟ್‌ನಿಂದಾಗಿ ಜಿಮ್‌ಗೆ ಹೋಗುವವರು ಮತ್ತು ಫಿಟ್‌ನೆಸ್ ಪ್ರಿಯರು ಗೊಂದಲಕ್ಕೀಡಾಗಿದ್ದಾರೆ. ಹಾಗಾದರೆ ಕಂಗನಾ ಹೇಳಿದಂತೆ ಪ್ರೊಟೀನ್ ನಿಜವಾಗಿಯೂ ಮನುಷ್ಯನ ಐಕ್ಯೂ (IQ) ಕಡಿಮೆ ಮಾಡುತ್ತದೆಯೇ? ಆರೋಗ್ಯ ತಜ್ಞರು ಮತ್ತು ವೈಜ್ಞಾನಿಕ ಸಂಶೋಧನೆಗಳು ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಹೆಚ್ಚು ಪ್ರೊಟೀನ್ ಸೇವಿಸುವುದರಿಂದ ಮನುಷ್ಯನ ಬುದ್ಧಿವಂತಿಕೆ ಅಥವಾ ಐಕ್ಯೂ ಕಡಿಮೆಯಾಗುತ್ತದೆ ಅಥವಾ ಮೆದುಳು ಶಾಶ್ವತವಾಗಿ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದು ಕೇವಲ ಒಂದು ಅಪೋಹವಷ್ಟೇ. ಆದರೆ ತಪ್ಪಾದ ಆಹಾರ ಪದ್ಧತಿಯಿಂದಾಗಿ ತಾತ್ಕಾಲಿಕವಾಗಿ ಮೆದುಳು ಮಂದವಾದಂತೆ ಅಥವಾ ಸುಸ್ತಾದಂತೆ ಭಾಸವಾಗುವುದು ನಿಜ. ಈ ತಾತ್ಕಾಲಿಕ ಪರಿಸ್ಥಿತಿಯನ್ನು ಕಂಡು ಅನೇಕರು ಐಕ್ಯೂ ಕಡಿಮೆಯಾಗುತ್ತಿದೆ ಎಂದು ತಪ್ಪಾಗಿ ಭಾವಿಸುತ್ತಾರೆ.
ಪ್ರೊಟೀನ್ ಸೇವಿಸುವಾಗ ಮಾಡುವ ಕೆಲವು ಸಣ್ಣ ತಪ್ಪುಗಳು ಮೆದುಳಿನ ಕಾರ್ಯಕ್ಷಮತೆ ಮಂದವಾಗಲು ಕಾರಣವಾಗುತ್ತವೆ.
ಮೆದುಳಿಗೆ ಪ್ರೊಟೀನ್ ಅಗತ್ಯ: ಪ್ರೊಟೀನ್‌ನಲ್ಲಿರುವ ಅಮೈನೋ ಆಮ್ಲಗಳು ಡೋಪಮೈನ್ ಮತ್ತು ಸಿರೊಟೋನಿನ್‌ನಂತಹ ಮೆದುಳಿಗೆ ಅಗತ್ಯವಾದ ನ್ಯೂರೋ ಟ್ರಾನ್ಸ್‌ಮಿಟರ್‌ಗಳ ತಯಾರಿಕೆಗೆ ಅಡಿಪಾಯವಾಗಿವೆ. ಪ್ರೊಟೀನ್ ಕೊರತೆಯಾದರೆ ಮಾನಸಿಕ ಸ್ಥಿತಿ ಮತ್ತು ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸುರಕ್ಷಿತ ಪ್ರಮಾಣ: ಒಬ್ಬ ಆರೋಗ್ಯವಂತ ವ್ಯಕ್ತಿಯು ತನ್ನ ದೇಹದ ತೂಕದ ಪ್ರತಿ ಕೆಜಿಗೆ 2.2 ಗ್ರಾಂನಿಂದ 3.0 ಗ್ರಾಂ ವರೆಗೆ ಪ್ರತಿದಿನ ಪ್ರೊಟೀನ್ ಸೇವಿಸಬಹುದು ಎಂದು ಕ್ಲಿನಿಕಲ್ ಅಧ್ಯಯನಗಳು ತಿಳಿಸಿವೆ.
ಕಿಡ್ನಿ ಆರೋಗ್ಯ: ಮೊದಲೇ ಕಿಡ್ನಿ ಸಮಸ್ಯೆ ಇರುವವರಿಗೆ ಮಾತ್ರ ಅಧಿಕ ಪ್ರೊಟೀನ್ ಹಾನಿಕಾರಕ. ಸಾಮಾನ್ಯ ವ್ಯಕ್ತಿಗೆ ಇದರಿಂದ ಯಾವುದೇ ತೊಂದರೆಯಿಲ್ಲ.
ಕಂಗನಾ ರಣಾವತ್ ಹೇಳಿದಂತೆ ಪ್ರೊಟೀನ್‌ನಿಂದ ಮೇಧಾಶಕ್ತಿ ಕುಂದುವುದಿಲ್ಲ. ಆದರೆ ಸಮತೋಲಿತ ಡಯಟ್ ಇಲ್ಲದಿದ್ದರೆ ತಾತ್ಕಾಲಿಕ ಆಲಸ್ಯ ಉಂಟಾಗಬಹುದು ಅಷ್ಟೇ. ಆದ್ದರಿಂದ ಪ್ರೊಟೀನ್ ಶೇಕ್ ಸೇವಿಸುವವರು ಅದರೊಂದಿಗೆ ಸರಿಯಾದ ಪ್ರಮಾಣದ ನೀರು ಮತ್ತು ಕಾರ್ಬೋಹೈಡ್ರೇಟ್ ಸೇವಿಸಿದರೆ ಮೆದುಳು ಮತ್ತು ದೇಹ ಎರಡೂ ಚುರುಕಾಗಿರುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.