ಚಿರಾಗ್ ಪಾಸ್ವಾನ್ ಜೊತೆ ಲವ್ವಾ? ಗಾಸಿಪ್‌ಗೆ ಕೊನೆಗೂ ತೆರೆ ಎಳೆದ ನಟಿ ಕಂಗನಾ ರನೌತ್!

Published : Apr 16, 2026, 07:31 PM IST
kangana ranaut

ಸಾರಾಂಶ

ನಟಿ ಹಾಗೂ ಸಂಸದೆ ಕಂಗನಾ ರನೌತ್, ಲೋಕ ಜನಶಕ್ತಿ ಪಕ್ಷದ ನಾಯಕ ಮತ್ತು ಸಂಸದ ಚಿರಾಗ್ ಪಾಸ್ವಾನ್ ಜೊತೆ ಪ್ರೀತಿಯಲ್ಲಿದ್ದಾರಾ? ಈ ಪ್ರಶ್ನೆಗೆ ಕಂಗನಾ ಈಗ ಉತ್ತರ ನೀಡಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ..

ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಸಿಪ್‌ಗೆ ನಟಿ ಕಂಗನಾ ರನೌತ್ ಸ್ಪಷ್ಟನೆ ನೀಡಿದ್ದಾರೆ. ಚಿರಾಗ್ ನನ್ನ ಒಳ್ಳೆಯ ಸ್ನೇಹಿತ ಅಷ್ಟೇ, ಹತ್ತು ವರ್ಷಗಳ ಹಿಂದೆ 'ಮಿಲೇ ನಾ ಮಿಲೇ ಹಮ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು ಎಂದು ಹೇಳಿದ್ದಾರೆ.

ನಟಿ ಹಾಗೂ ಸಂಸದೆ ಕಂಗನಾ ರನೌತ್, ಲೋಕ ಜನಶಕ್ತಿ ಪಕ್ಷದ ನಾಯಕ ಮತ್ತು ಸಂಸದ ಚಿರಾಗ್ ಪಾಸ್ವಾನ್ ಜೊತೆ ಪ್ರೀತಿಯಲ್ಲಿದ್ದಾರಾ? ಈ ಪ್ರಶ್ನೆಗೆ ಕಂಗನಾ ಈಗ ಉತ್ತರ ನೀಡಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ ಅವರು ಸ್ಪಷ್ಟನೆ ನೀಡುವ ಮೂಲಕ ಫುಲ್‌ಸ್ಟಾಪ್ ಇಟ್ಟಿದ್ದಾರೆ.

ಇತ್ತೀಚೆಗೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ನಂತರ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿತ್ತು. ಈ ಎಲ್ಲಾ ಗಾಸಿಪ್‌ಗಳಿಗೆ ಕಂಗನಾ ಈಗ ತೆರೆ ಎಳೆದಿದ್ದಾರೆ. ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಚಿರಾಗ್ ಪಾಸ್ವಾನ್ ತನ್ನ ಆತ್ಮೀಯ ಸ್ನೇಹಿತ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ. ತಮ್ಮಿಬ್ಬರ ನಡುವೆ ಪ್ರೀತಿ ಇದೆ ಅನ್ನೋ ಎಲ್ಲಾ ಊಹಾಪೋಹಗಳನ್ನು ಅವರು ತಳ್ಳಿಹಾಕಿದ್ದಾರೆ.

ಪರಸ್ಪರ ಚೆನ್ನಾಗಿ ಗೊತ್ತು

"ಚಿರಾಗ್ ನನ್ನ ಕ್ಲೋಸ್ ಫ್ರೆಂಡ್. ನಮ್ಮಿಬ್ಬರ ನಡುವೆ ಪ್ರೀತಿ-ಗೀತಿ ಏನೂ ಇಲ್ಲ. ನಮಗೆ ಪರಸ್ಪರ ಚೆನ್ನಾಗಿ ಗೊತ್ತು. ಹತ್ತು ವರ್ಷಗಳ ಹಿಂದೆ ಒಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು," ಎಂದು ಕಂಗನಾ ಹೇಳಿದ್ದಾರೆ. ಇಷ್ಟು ವರ್ಷವಾದರೂ ನಮ್ಮ ಸ್ನೇಹ ಹಾಗೆಯೇ ಇದೆ ಅಂತಾನೂ ಅವರು ತಿಳಿಸಿದ್ದಾರೆ. "ಒಂದು ವೇಳೆ ನನಗೆ ಪ್ರೀತಿ ಬೇಕು ಅಂತ ಅನಿಸಿದ್ದರೆ, ಅದು ಆಗಿರುತ್ತಿತ್ತು," ಅಂತಾನೂ ಕಂಗನಾ ಹೇಳಿದ್ದಾರೆ.

2011ರಲ್ಲಿ ತೆರೆಕಂಡ 'ಮಿಲೇ ನಾ ಮಿಲೇ ಹಮ್' ಅನ್ನೋ ರೊಮ್ಯಾಂಟಿಕ್ ಡ್ರಾಮಾ ಸಿನಿಮಾದಲ್ಲಿ ಕಂಗನಾ ಮತ್ತು ಚಿರಾಗ್ ಪಾಸ್ವಾನ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ತನ್ವೀರ್ ಖಾನ್ ನಿರ್ದೇಶನದ ಈ ಚಿತ್ರದ ಮೂಲಕವೇ ಚಿರಾಗ್ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾದಲ್ಲಿ ನೀರು ಬಾಜ್ವಾ ಮತ್ತು ಸಾಗರಿಕಾ ಘಾಟ್ಗೆ ಕೂಡ ನಟಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್‌, ದಂಡ ಕಟ್ಟಿ ಎಂದ ಮದ್ರಾಸ್‌ ಹೈಕೋರ್ಟ್‌