
ಬೆಂಗಳೂರು(ಮೇ 29): ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಳ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಜನಿಕಾಂತ್ ಜೊತೆಗೆ ಬಾಲಿವುಡ್ ನಟ ನಾನಾ ಪಾಟೇಕರ್, ಹುಮಾ ಖುರೇಶಿ ಸೇರಿದಂತೆ ಹಲವು ತಾರಗಣಗಳನ್ನ ಹೊಂದಿರುವ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನ ಇಮ್ಮಡಿಗೊಳಿಸಿದೆ. ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತ್ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಹಿಂದುಳಿದ ವರ್ಗದ ನಾಯಕನಾಗಿ ಕಾಣಿಸಿಕೊಂಡಿರುವ ರಜನಿಕಾಂತ್‌ಗೆ ಈ ಚಿತ್ರ ಹೊಸ ತಿರುವು ನೀಡಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈಗಾಗಲೇ ರಾಜಕೀಯಕ್ಕೆ ಲಗ್ಗೆ ಇಟ್ಟಿರುವ ರಜನಿಕಾಂತ್ ಭವಿಷ್ಯಕ್ಕೂ ಈ ಚಿತ್ರ ಸಹಕಾರಿಯಾಗಲಿದೆ. ಪಾ.ರಂಜಿತ್ ನಿರ್ದೇಶನದ ಒಂದೂವರೆ ನಿಮಿಷದ ಕಾಳ ಚಿತ್ರದ ಟ್ರೈಲರ್ ಅಭಿಮಾನಿಗಳ ಮನಸ್ಸು ಗೆದ್ದಿದೆ. ಜೂನ್ 7 ರಂದು ದೇಶ ವಿದೇಶಗಳಲ್ಲಿ ಕಾಳ ಚಿತ್ರ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.