
ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಾಕ್ಸ್ ಆಫೀಸ್ ಕ್ರೇಜ್‌ಗೆ ವಯಸ್ಸಿನ ಮಿತಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಾಮಾನ್ಯವಾಗಿ ಮಲಯಾಳಂ ನೆಲದಲ್ಲಿ ತಮಿಳು ನಟರ ಪೈಕಿ ದಳಪತಿ ವಿಜಯ್ ಅವರಿಗೆ ಅತಿ ಹೆಚ್ಚು ಮಾರುಕಟ್ಟೆ ಹಾಗೂ ಅಭಿಮಾನಿಗಳಿದ್ದಾರೆ ಎನ್ನಲಾಗುತ್ತದೆ. ಆದರೆ, ಇದೀಗ ರಜನಿಕಾಂತ್ ಅಬ್ಬರಕ್ಕೆ ಕೇರಳದ ಬಾಕ್ಸ್ ಆಫೀಸ್ ಇತಿಹಾಸವೇ ಬದಲಾಗಿದೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ 'ಜೈಲರ್ 2' (Jailer 2) ಸಿನಿಮಾ, ಬಿಡುಗಡೆಯಾದ ಕೇವಲ 7 ದಿನಗಳಲ್ಲೇ ಮಲಯಾಳಂ ನೆಲದಲ್ಲಿ ಸಾರ್ವಕಾಲಿಕ ದಾಖಲೆಗಳನ್ನು ಮುರಿದು ನಂ.1 ಸ್ಥಾನಕ್ಕೆ ಜಿಗಿದಿದೆ!
ದಕ್ಷಿಣ ಭಾರತದ ಪ್ರಮುಖ ಬಾಕ್ಸ್ ಆಫೀಸ್ ಟ್ರ್ಯಾಕರ್ ‘South Indian BoxOffice’ ನೀಡಿರುವ ಅಧಿಕೃತ ವರದಿಯ ಪ್ರಕಾರ, 'ಜೈಲರ್ 2' ಸಿನಿಮಾ ಕೇರಳದಲ್ಲಿ ಕೇವಲ 7 ದಿನಗಳಲ್ಲಿ ಬರೋಬ್ಬರಿ ₹60.5 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದಕ್ಕೂ ಮುನ್ನ ದಳಪತಿ ವಿಜಯ್ ಅಭಿನಯದ 'ಲಿಯೋ' ಚಿತ್ರ ಗಳಿಸಿದ್ದ ₹60 ಕೋಟಿ ಕಲೆಕ್ಷನ್ ಅತ್ಯಧಿಕವಾಗಿತ್ತು. ಈಗ ಆ ದಾಖಲೆಯನ್ನು ರಜನಿಕಾಂತ್ ಕೇವಲ ಒಂದೇ ವಾರದಲ್ಲಿ ಪುಡಿಪುಡಿ ಮಾಡಿ ಅಗ್ರಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರದ ನಾಗಾಲೋಟ ನೋಡಿದರೆ ಕೇರಳದಲ್ಲಿ ₹100 ಕೋಟಿ ಕ್ಲಬ್ ಸೇರಿದ ಮೊದಲ ತಮಿಳು ಚಿತ್ರ ಎಂಬ ಐತಿಹಾಸಿಕ ಮೈಲಿಗಲ್ಲನ್ನು ‘ಜೈಲರ್ 2’ ಮುಟ್ಟುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ವಿಶೇಷವೆಂದರೆ, ಕೇರಳದ ಟಾಪ್ 5 ತಮಿಳು ಸಿನಿಮಾಗಳ ಪಟ್ಟಿಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರದ್ದೇ 3 ಸಿನಿಮಾಗಳಿವೆ ('ಜೈಲರ್ 2', 'ಜೈಲರ್' ಮೊದಲ ಭಾಗ ಹಾಗೂ 'ಕೂಲಿ'). ಇನ್ನು ಕಮಲ್ ಹಾಸನ್ ಅವರ 'ವಿಕ್ರಮ್' 4ನೇ ಸ್ಥಾನದಲ್ಲಿದೆ.
ದಳಪತಿ ವಿಜಯ್‌ಗೆ ಕೇರಳ ಭದ್ರಕೋಟೆ ಎನ್ನಲಾಗುತ್ತಿದ್ದ ಕಾಲದಲ್ಲಿ, ತಲೈವಾ ರಜನಿಕಾಂತ್ ತಮ್ಮ ಮಾಸ್ ಕಂಟೆಂಟ್ ಮೂಲಕ ಇಡೀ ಕೇರಳ ಚಿತ್ರಮಂದಿರಗಳನ್ನು ಆವರಿಸಿಕೊಂಡಿದ್ದು ಸಿನಿರಂಗವನ್ನು ದಂಗುಬಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.