
ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳಲ್ಲಿ ಬರುವ ಇಂಟಿಮೇಟ್ ಸೀನ್‌ಗಳನ್ನು ನೋಡಿದಾಗ, ಇವುಗಳನ್ನು ನಿಜವಾಗಿಯೂ ಶೂಟ್ ಮಾಡ್ತಾರಾ ಅನ್ನೋ ಡೌಟ್ ಎಲ್ಲರಿಗೂ ಬರುತ್ತೆ. ಇಂಥಾ ಸೀನ್‌ಗಳನ್ನು ಹೇಗೆ ಮಾಡ್ತಾರೆ ಅನ್ನೋದರ ಬಗ್ಗೆ ಹಾಲಿವುಡ್ ನಟಿ ಸಾರಾ ಶಾಹಿ ಒಂದು ಅಚ್ಚರಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ, ವೆಬ್ ಸೀರೀಸ್‌ಗಳಲ್ಲಿ ಹೀರೋ-ಹೀರೋಯಿನ್ ನಡುವೆ ಬರುವ ಇಂಟಿಮೇಟ್ ಸೀನ್‌ಗಳು ತೆರೆಯ ಮೇಲೆ ತುಂಬಾ ನ್ಯಾಚುರಲ್ ಆಗಿ ಕಾಣಿಸುತ್ತವೆ.
ನಟ-ನಟಿಯರು ನಿಜವಾಗಿಯೂ ಅಷ್ಟು ಹತ್ತಿರವಿದ್ದಾರೇನೋ ಅನ್ನೋ ಫೀಲ್ ಕೊಡುತ್ತವೆ. ಆದರೆ ಕ್ಯಾಮೆರಾ ಮುಂದೆ ಇಂಥಾ ಸೀನ್‌ಗಳನ್ನು ಶೂಟ್ ಮಾಡೋದು ಅಷ್ಟು ಸುಲಭವಲ್ಲ. ಕಲಾವಿದರ ವೈಯಕ್ತಿಕ ಮಿತಿ, ಕಂಫರ್ಟ್ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ವಿಶೇಷ ತಂತ್ರಗಳನ್ನು ಬಳಸುತ್ತಾರೆ. ಅಂಥದ್ದೇ ಒಂದು ಇಂಟರೆಸ್ಟಿಂಗ್ ಟ್ರಿಕ್ ಬಗ್ಗೆ ಹಾಲಿವುಡ್ ನಟಿ ಸಾರಾ ಶಾಹಿ ಹೇಳಿದ್ದಾರೆ. ಬೋಲ್ಡ್ ಸೀನ್‌ಗಳನ್ನು ಮಾಡುವಾಗ ನಟ-ನಟಿಯರ ನಡುವೆ ಗಾಳಿ ತೆಗೆದ ಒಂದು ಸಣ್ಣ ಯೋಗಾ ಬಾಲ್ ಇಡುತ್ತಾರಂತೆ.
ಇದು ಕೇಳಲು ಆಶ್ಚರ್ಯ ಎನಿಸಿದರೂ, ಕಲಾವಿದರ ನಡುವೆ ನೇರವಾದ ದೈಹಿಕ ಸ್ಪರ್ಶ ಆಗದಿರಲು ಈ ಟ್ರಿಕ್ ಫಾಲೋ ಮಾಡ್ತಾರೆ. ಸೀನ್‌ನಲ್ಲಿ ಇಬ್ಬರೂ ತುಂಬಾ ಹತ್ತಿರವಿರುವಂತೆ ಕಾಣಬೇಕು. ಆದರೆ ಕ್ಯಾಮೆರಾಗೆ ಕಾಣಿಸದಂತೆ ಅವರ ನಡುವೆ ಮೆತ್ತಗಿರುವ ಯೋಗಾ ಬಾಲ್ ಇಡುತ್ತಾರೆ. ಇದರಿಂದ ಯಾರಿಗೂ ಮುಜುಗರ ಆಗುವುದಿಲ್ಲ. ಹೀರೋ ಸ್ಪರ್ಶದ ಬದಲಿಗೆ ತನಗೆ ಆ ಬಾಲ್ ಸ್ಪರ್ಶವೇ ಆಗುತ್ತಿರುತ್ತದೆ ಎಂದು ಸಾರಾ ಶಾಹಿ ಹೇಳಿದ್ದಾರೆ.
ಈ ರೀತಿಯ ತಂತ್ರಗಳು ಕಲಾವಿದರ ವೈಯಕ್ತಿಕ ಮಿತಿ ಮತ್ತು ಕಂಫರ್ಟ್ ಅನ್ನು ಗೌರವಿಸಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಇಂಥಾ ಸೀನ್‌ಗಳಲ್ಲಿ ನಟ-ನಟಿಯರಿಗೆ ಯಾವುದೇ ಮುಜುಗರ ಆಗಬಾರದು ಎಂದು ಶೂಟಿಂಗ್‌ಗೂ ಮುನ್ನವೇ ಸೀನ್‌ನ ಮೂಮೆಂಟ್ಸ್, ಕ್ಯಾಮೆರಾ ಆಂಗಲ್ಸ್ ಮತ್ತು ಮಿತಿಗಳ ಬಗ್ಗೆ ಸ್ಪಷ್ಟವಾಗಿ ಚರ್ಚೆ ಮಾಡುತ್ತಾರೆ.
ಇತ್ತೀಚೆಗೆ ಸಿನಿಮಾ ಮತ್ತು ಟೆಲಿವಿಷನ್ ರಂಗದಲ್ಲಿ ಇಂಥಾ ಸೀನ್‌ಗಳನ್ನು ಶೂಟ್ ಮಾಡುವಾಗ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೆಲವು ಪ್ರೊಡಕ್ಷನ್ ಸಂಸ್ಥೆಗಳು ಇದಕ್ಕಾಗಿಯೇ 'ಇಂಟಿಮಸಿ ಕೋ-ಆರ್ಡಿನೇಟರ್ಸ್' ಅನ್ನು ನೇಮಿಸಿಕೊಳ್ಳುತ್ತವೆ. ಕಲಾವಿದರು ಎಷ್ಟು ಕಂಫರ್ಟ್ ಆಗಿದ್ದಾರೆ, ದೈಹಿಕ ಸ್ಪರ್ಶಕ್ಕೆ ಒಪ್ಪಿಗೆ ಇದೆಯಾ ಎಂಬುದನ್ನು ಮೊದಲೇ ಮಾತನಾಡಿಕೊಳ್ಳುತ್ತಾರೆ. ತೆರೆಯ ಮೇಲೆ ಕೆಲವು ಸೆಕೆಂಡುಗಳ ಕಾಲ ಬರುವ ಸೀನ್ ಹಿಂದೆ ಇಷ್ಟೆಲ್ಲಾ ಎಚ್ಚರಿಕೆ ಇರುತ್ತದೆ ಅನ್ನೋದು ಸಾಮಾನ್ಯ ವೀಕ್ಷಕರಿಗೆ ಗೊತ್ತಿರುವುದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.