2016ರ ಕನ್ನಡದ ನಂ.1 ಹೀರೋ ಯಾರು ಗೊತ್ತೆ ? : ಈ ವರದಿ ಓದಿ ನೀವೆ ನಿರ್ಧರಿಸಿ

Published : Nov 17, 2016, 02:21 PM ISTUpdated : Apr 11, 2018, 12:44 PM IST
2016ರ ಕನ್ನಡದ ನಂ.1 ಹೀರೋ ಯಾರು ಗೊತ್ತೆ ? : ಈ ವರದಿ ಓದಿ ನೀವೆ ನಿರ್ಧರಿಸಿ

ಸಾರಾಂಶ

ಕನ್ನಡ ಚಿತ್ರರಂಗ ಮತ್ತೊಂದು ವರ್ಷ ಪೂರ್ಣಗೊಳಿಸುತ್ತಿದೆ. ಜನವರಿಯಿಂದ ನವೆಂಬರ್'ವರೆಗೆ ಆದ ಚಿತ್ರ ನಿರ್ಮಾಣದ ಸಂಖ್ಯೆ 100 ಗಡಿ ದಾಟಿದೆ. ಅದು ಈಗ ಸುಮಾರು 150 ಹತ್ತಿರಕ್ಕೆ ಬಂದು ತಲುಪುತ್ತಿದೆ. ಬರೋ ಡಿಸೆಂಬರ್ ಹೊತ್ತಿದೆ 150 ನ್ನೂ ಮೀರ ಬಹುದು.

ಕನ್ನಡ ಚಿತ್ರರಂಗದ ನಂಬರ್-1 ಹೀರೋ ಯಾರು..? ಇದು ಸದಾ ಕಾಲ ಕೇಳೀ ಬರೋ ಪ್ರಶ್ನೆ. ಎಲ್ಲ ರಂಗದಲ್ಲಿದಂತೆ ಕನ್ನಡ ಚಿತ್ರರಂಗದಲ್ಲೂ ಸೋಲು ಗೆಲುವು ಇರೋದೇ. ಆದರೂ, ಆಯಾ ಚಿತ್ರದ ಗೆಲುವು ಮತ್ತು ಸೋಲು ನಾಯಕನ ಪಟ್ಟವನ್ನು ನಿರ್ಧರಿಸುತ್ತದೆ.

ಕನ್ನಡ ಚಿತ್ರರಂಗ ಮತ್ತೊಂದು ವರ್ಷ ಪೂರ್ಣಗೊಳಿಸುತ್ತಿದೆ. ಜನವರಿಯಿಂದ ನವೆಂಬರ್'ವರೆಗೆ ಆದ ಚಿತ್ರ ನಿರ್ಮಾಣದ ಸಂಖ್ಯೆ 100 ಗಡಿ ದಾಟಿದೆ. ಅದು ಈಗ ಸುಮಾರು 150 ಹತ್ತಿರಕ್ಕೆ ಬಂದು ತಲುಪುತ್ತಿದೆ. ಬರೋ ಡಿಸೆಂಬರ್ ಹೊತ್ತಿದೆ 150 ನ್ನೂ ಮೀರ ಬಹುದು.

ಶಿವಲಿಂಗ ಜನ ಮೆಚ್ಚುಗೆಯ ಜೊತೆ 100 ದಿನ ಓಡಿದ  ಡಿಫರೆಂಟ್ ಸಿನಿಮಾ
ಶಿವರಾಜ್ ಕುಮಾರ್ ಈ ವರ್ಷದ ಹಿಟ್ ಹೀರೋ ಅನ್ಬಹುದೇನೋ. ಕಾರಣ, ಶಿವರಾಜ್ ಕುಮಾರ್ ಅಭಿನಯಿಸಿದ ಶಿವಲಿಂಗ 2016 ಸೂಪರ್ ಸಿನಿಮಾ. ಜನ ಕೂಡ ಮೆಚ್ಚಿ ಗೆಲ್ಲಿಸಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಗೆ ಪ್ರಶಂಸೆಗಳೂ ಬಂದವು. ಸಂತೆಯಲ್ಲಿ ನಿಂತ ಕಬೀರ ಚಿತ್ರವನ್ನ ಅದ್ಯಾಕೋ ಜನ ಸ್ವೀಕರಿಸಲಿಲ್ಲ.

ಕೋಟಿಗೊಬ್ಬ -2 ಸಖತ್ ಸಿನಿಮಾ,ಕೃಷ್ಣನ ಅವತಾರಕ್ಕೂ ಸಿಕ್ಕದೆ ಭಾರೀ ಪ್ರಶಂಸೆ
ಸುದೀಪ್ ಈ ವರ್ಷ ಎರಡು ಒಳ್ಳೆ ಸಿನಿಮಾ ಕೊಟ್ಟಿದ್ದಾರೆ. ಕೋಟಿಗೊಬ್ಬ-2 ಅದ್ಭುತ ಚಿತ್ರ. ಜನ ಚಿತ್ರವನ್ನು ಸ್ವೀಕರಿಸಿದ್ದಾರೆ. ನಿರ್ಮಾಪಕರೂ ಗೆಲುವಿನ ನಗೆ ಬೀರಿದ್ದಾರೆ. ಮುಕುಂದ-ಮುರಾರಿ ಚಿತ್ರವೂ ಗೆಲುವಿನ ಪತಾಕಿ ಹಾರಿಸ್ತಿದೆ. ಮುರಾರಿಯಾಗಿ ಈ ಚಿತ್ರದಲ್ಲಿ ಸುದೀಪ್ ಜನರ ಹೃದಯ ಕದ್ದಿದ್ದಾರೆ.

ಹೊಸಬರೇ ಈ ಸಲದ ಹೀರೋಸ್
2016 ರಲ್ಲಿ  ಹೊಸಬರೇ ಹೊಸ ಕಿಚ್ಚು ಹಚ್ಚಿದ್ದಾರೆ. ತಿಥಿ ಚಿತ್ರ ಆ ಸಾಲಿನ ಅತ್ಯದ್ಭುತ ಸಿನಿಮಾ. ಕನ್ನಡದ ಕೀರ್ತಿಯನ್ನ ವಿದೇಶದಲ್ಲೂ ಹಾರಿಸಿದ ಕೀರ್ತಿ ಈ ಚಿತ್ರಕ್ಕೆ ಸಲ್ಲಬೇಕು.ಗೋಧಿ ಬಣ್ಣ ಸಾಧಾರಣ ಮೈಕಟ್ಟು ಕ್ಲಾಸ್ ಸಿನಿಮಾ. ಎಲ್ಲರ ನೆಚ್ಚಿನ ಚಿತ್ರವೂ ಹೌದು. ರಾಮಾ ರಾಮಾ ರೇ ಇದು ಕೂಡ ಜನ ಮೆಚ್ಚುಗೆ ಗಳಿಸುತ್ತಲೇ ಸಾಗುತ್ತಿದೆ.

ನವರಸ ನಾಯಕನ ಹೊಸ ಪಯಣ
ನವರಸ ನಾಯಕ ಜಗ್ಗೇಶ್ ನಟನೆಯ ನೀರ್ ದೋಸೆ ಮಾಡಿದ ಮೋಡಿ ಬೇರೆನೇ. ಅದರ ನಿರೂಪನಾ ಶೈಲಿನೂ ವಿಭಿನ್ನ. ಜನ ಕೂಡ ಈ ಚಿತ್ರವನ್ನ ಒಪ್ಪಿದರು. ನಕ್ಕರು. ಬದುಕಿನ ನೀತಿ ಪಾಠವನ್ನೂ  ಮೆಚ್ಚಿದರು.

ಪವರ್ ಪುನೀತ್ ದೊಡ್ಮನೆ ದೊಡ್ಡ ಖದರ್
ಕನ್ನಡದಲ್ಲಿ ಸ್ಟಾರ್​ಗಳ ಸಂಖ್ಯೆ ದೊಡ್ಡದಿದೆ. ಅವರ ಸಿನಿಮಾಗಳ ಖದರೂ ಬೇಜಾನ್ ಇರ್ತದೆ.ಚಕ್ರವ್ಯೂಹದಲ್ಲಿ ಪುನೀತ್ ಮೋಡಿ ಮಾಡಿದರು. ದೊಡ್ಮನೆ ಹುಡ್ಗ ಚಿತ್ರದಲ್ಲೂ ಮುಂದುವರೆದಿದೆ  ಜನರ ಪ್ರೀತಿ. ದರ್ಶನ್ ಅಭಿನಯದ ವಿರಾಟ್ ಚಿತ್ರ ಬಂತು ಹೋಯ್ತು. ಆದರೆ,  ಜಗ್ಗುದಾದ ಮೂಲಕ ದರ್ಶನ್ ಜನರಿಗೆ ಹೊಸ ಫೀಲ್ ಕೊಟ್ಟರು. ಬಿಗ್ ಬಜೆಟ್'ನ ನಾಗರಹಾವು ಚಿತ್ರದಲ್ಲಿ ದರ್ಶನ್ ವಿಶೇಷ ಹಾಡಲ್ಲಿ ಕಾಣಿಸಿಕೊಂಡರು. ಕಲ್ಪನಾ -2 ಚಿತ್ರದಲ್ಲಿ ಉಪ್ಪಿ ಭಯಾನಕ ಕಿಕ್ಕೇ ಕೊಟ್ಟರು. ಮುಕುಂದ-ಮುರಾರಿಯಲ್ಲಿ ಮುಕುಂದ ನಾಗಿ ದೇವರನ್ನೇ ಪ್ರಶ್ನಿಸಿದರು. ಕನ್ನಡದ ‘ಮಾಸ್ಟರ್ ಪೀಸ್’ ಹೀರೋ ಯಶ್, 2016 ರಲ್ಲಿ ಒಂದೇ ಚಿತ್ರ ಮಾಡಿದ್ದು. ಅದು ಸಂತು ಸ್ಟೈಟ್ ಫಾರ್ವರ್ಡ್. ಚಿತ್ರ ಹಿಟ್ ಅಂತ ಚಿತ್ರ ತಂಡ ಹೇಳಿಕೊಂಡಿದೆ. ವಿಮರ್ಶೆ ಮಾತ್ರ ವ್ಯತಿರಿಕ್ತವಾಗಿವೆ.

ಗೋಲ್ಡನ್ ಸ್ಟಾರ್ 2016 ರಲ್ಲಿ 3 ಸಿನಿಮಾಗಳಲ್ಲಿ ನಟನೆ
ಗೋಲ್ಡನ್ ಸ್ಟಾರ್ ಗಣೇಶ್ 2016 ರಲ್ಲಿ  ಮೂರು ಡಿಫರಂಟ್ ಸಿನಿಮಾ ಮಾಡಿದರು. ಸ್ಟೈಲ್ ಕಿಂಗ್ ಚಿತ್ರದಲ್ಲಿ ಗಣಿ ಎರಡು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ್ರು. ಜೂಮ್ ಚಿತ್ರದಲ್ಲಿ ಗಣಿ ಖದರೇ ಬೇರೆ. ಮುಂಗಾರು ಮಳೆ-2 ಮಾಡಿದ ಸದ್ದು ಜೋರಾಗಿತ್ತು. ಜನ ಕೂಡ ಚಿತ್ರವನ್ನ ಒಂದ್  ಹಂತಕ್ಕೆ ಸ್ವೀಕರಿಸಿದರು.ಆದರೆ ಚಿತ್ರದ ವಿಮರ್ಶೆ ಹೇಳಿಕೊಳ್ಳುವಂತಿರಲಿಲ್ಲ.

ಜನರಿಂದಲೇ ಬೆಳದು ನಿಂತ ಸ್ಟಾರ್​ಗಳು ಪ್ರತಿ ವರ್ಷ ಹೊಸದನ್ನೇ ಕೊಡೋಕೆ ಮುಂದಾಗುತ್ತಾರೆ. ಈ ವರ್ಷವೂ ಅಂತಹ ಪ್ರಯತ್ನಗಳನ್ನ ಕನ್ನಡದ ಸೂಪರ್ ಸ್ಟಾರ್​​ಗಳು ಮಾಡಿದ್ದಾರೆ. ಜನ ಕೂಡ ಅವುಗಳನ್ನ ತಮಗೆ ಹೇಗೆ ಸರಿ ಅನಿಸುತ್ತದೆಯೋ ಹಾಗೆ ಸ್ವೀಕರಿಸಿದ್ದಾರೆ. ಗೆಲುವನ್ನೂ ಕೊಟ್ಟಿದ್ದಾರೆ. ಸೋಲನ್ನೂ ನೀಡಿದ್ದಾರೆ.

 

ವರದಿ: ರೇವನ್ ಪಿ.ಜೇವೂರ್, ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

"ಅದು ಭಯಾನಕ, ನೋವಿನ ಕ್ಷಣವಾಗಿತ್ತು": ಕಾರು ಅಪಘಾತದ ಬಗ್ಗೆ ಮೌನ ಮುರಿದ 'ದಿಲ್‌ಬರ್' ಬೆಡಗಿ ನೋರಾ ಫತೇಹಿ
BBK 12: ಪಿತ್ತ ನೆತ್ತಿಗೇರಿತು; ಇದು ಸರಿಯಲ್ಲ ಎಂದು ಅಶ್ವಿನಿ ಗೌಡಗೆ ವಾರ್ನಿಂಗ್‌ ಕೊಟ್ಟ Kiccha Sudeep