
ಮುಂಬೈ(ಅ.28): ಬಾಲಿವುಡ್ ನಟ ಸಲ್ಮಾನ್ ಖಾನ್ ಆಯೋಜಿಸಿಕೊಡುವ ರಿಯಾಲಿಟಿ ಶೋ ಹಿಂದಿ ಬಿಗ್'ಬಾಸ್'ನ 11ನೇ ಆವೃತ್ತಿ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗಿತ್ತಿದೆ. ಈಗ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ ಕಾರಣ ಇಬ್ಬರು ಸ್ಪರ್ಧಿಗಳಿಬ್ಬರ ಮೇಲೆ ಎಫ್'ಐ'ಆರ್ ದಾಖಲಾಗಿದೆ.
ಅರ್ಶಿ ಖಾನ್ ಎಂಬ ಸ್ಪರ್ಧಿ ತಮ್ಮ ಖಾಸಗಿ ಬದುಕಿನಲ್ಲಿ ನಡೆದಂತಹ 'ಪುಣೆ-ಗೋವಾ' ವಿಚಾರಕ್ಕೆ ಸಂಬಂಧಪಟ್ಟಂತೆ ಅದೇ ಮನೆಯಲ್ಲಿ ಸ್ಪರ್ಧಿಗಳಾಗಿರುವ ಪ್ರಿಯಾಂಕ್ ಶರ್ಮಾ ಹಾಗೂ ಸಪ್ನಾ ಚೌಧರಿ ಎಂಬುವವರ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರ ನಡುವೆಯೂ ಎಫ್'ಐಆರ್ ದಾಖಲಾಗಿದೆ.
ಪ್ರಿಯಾಂಕ್ ಶರ್ಮಾ ಹಾಗೂ ಸಪ್ನಾ ಚೌಧರಿ ಅವರು 2016 ಅಕ್ಟೋಬರ್'ನಲ್ಲಿ ತಮ್ಮ ಜೀವನದಲ್ಲಿ ನಡೆದ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಇದು ಸಂಭಾಷಣೆಗೆ ಕತ್ತರಿ ಹಾಕದೆ ಟಿವಿಯಲ್ಲಿ ಕೂಡ ಪ್ರಸಾರ ಮಾಡಲಾಗಿದೆ. ಈ ಮಾತುಗಳಿಂದ ಅಪಮಾನದ ಜೊತೆ ನನ್ನ ಮನಸ್ಸಿಗೆ ನೋವುಂಟಾಗಿದ್ದು, ನನ್ನ ಪೋಷಕರು ಸಹ ನನ್ನ ವಿರುದ್ಧ ಕೋಪಗೊಂಡಿದ್ದಾರೆ. ಈ ಕಾರಣದಿಂದಾಗಿ ಇಬ್ಬರು ಸ್ಪರ್ಧಿಗಳು ಹಾಗೂ ವಾಹಿನಿಯ ವಿರುದ್ಧವೂ ದೂರು ದಾಖಲಿಸಿರುವುದಾಗಿ ಅರ್ಶಿ ತಿಳಿಸಿದ್ದಾರೆ.
ವೇಶ್ಯಾವಾಟಿಕೆ ಮಾತುಗಳು ?
2016 ಅಕ್ಟೋಬರ್'ನಲ್ಲಿ ಅರ್ಶಿ ಖಾನ್ ಪುಣೆಯಲ್ಲಿ ಹಾಗೂ ಗೋವಾದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು. ಇದಕ್ಕಾಗಿ ತಮ್ಮ ಏಜಂಟನ್ನು ಸಂಪರ್ಕಿಸಿದ್ದರು. ಈ ಎರಡೂ ಸಂದರ್ಭಗಳಲ್ಲಿಯೂ ಅರ್ಶಿ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು. ಈ ವಿಷಯವನ್ನು ಪ್ರಿಯಾಂಕ್ ಶರ್ಮಾ ಹಾಗೂ ಸಪ್ನಾ ಚೌಧರಿ ಅವರು ಬಿಗ್'ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ. ಇದು ಟಿವಿಯಲ್ಲಿ ಟಿಆರ್'ಪಿ'ಗಾಗಿ ಎಡಿಟ್ ಮಾಡದೆ ಪ್ರಸಾರ ಮಾಡಲಾಗಿದ್ದು ಆದರೆ ಮಾತುಗಳಲ್ಲಿ ಯಾವುದೇ ಸತ್ಯಂಶವಿಲ್ಲ. ಅನಾವಶ್ಯಕವಾಗಿ ನನ್ನ ಮಾನವನ್ನು ಹರಾಜು ಹಾಕಲಾಗಿದೆ' ಎಂಬುದು ಆರ್ಶಿ'ಯವರ ಆರೋಪ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.