
ಈ ಮಲೆಮಹದೇಶ್ವರ ಬೆಟ್ಟದ ಸಮೀಪದ ಎರಡು ಸರ್ಕಾರಿ ಶಾಲೆಗಳಿಗೆ 7 ಲಕ್ಷ ರೂ ಮೌಲ್ಯದ ಸಲಕರಣೆ ನೆರವು ನೀಡುವ ಸಲುವಾಗಿ 3 ದಿನಗಳ ಬೈಕ್ ಪ್ರವಾಸ ಹಮ್ಮಿಕೊಂಡಿದೆ. ಅವರ ಈ ಸಾಮಾಜಿಕ ಕಾಳಜಿಗೆ ನಿರ್ದೇಶಕ ಬಿಎಸ್ ಲಿಂಗದೇವರು ಚಿತ್ರತಂಡ ಸಾಥ್ ನೀಡಿದೆ. ಈ ಪ್ರವಾಸಕ್ಕೆ ಅವರ ಚಿತ್ರದ ನಾಯಕ ನಟ ರಿಷಿ ಮತ್ತು ನಾಯಕಿ ರಾಶಿ ಚಾಲನೆ ನೀಡಿದ್ದಾರೆ.
40 ಜನರ ತಂಡ ಪ್ರವಾಸ ಹೋಗುತ್ತಿದೆ. ಈ ತಂಡದ ಯಾತ್ರೆಗೆ ಡಿ.7ರ ಮುಂಜಾನೆ ಬೆಂಗಳೂರಿನ ವಿಜಯನಗರದಲ್ಲಿ ಲಿಂಗದೇವರು, ರಿಷಿ, ರಾಶಿ ಹಾಜರಿದ್ದು ಶುಭ ಕೋರಿದರು. ಈ ತಂಡದ ಹೊಸ ಸಿನಿಮಾದ ನಿರ್ಮಾಪಕರು ಕೂಡ ಈ ಒಳ್ಳೆಯ ಕೆಲಸದಲ್ಲಿ ಜೊತೆಯಾಗಿದ್ದಾರೆ.
ಇಂಟರೆಸ್ಟಿಂಗ್ ಅಂದ್ರೆ ಲಿಂಗದೇವರು ಅವರ ಹೊಸ ಸಿನಿಮಾ ಕೂಡ ಹುಡುಕಾಟದ ಕುರಿತ ಚಿತ್ರ ಎನ್ನಲಾಗಿದೆ. ಈ ಕುರಿತು ಲಿಂಗದೇವರು, ‘ಇತ್ತೀಚೆಗೆ ನಾನೊಬ್ಬ ಪ್ರವಾಸಿಗ ಆಗದೆ, ಪ್ರಯಾಣಿಕ ಆಗಬೇಕು ಅಂತೆನಿಸುತ್ತಿದೆ. ಆ ಹಿನ್ನೆಲೆಯಲ್ಲೇ ನನ್ನ ಮುಂದಿನ ಸಿನಿಮಾ ಕೂಡ. ಹಾಗಾಗಿ ಇವತ್ತು ನನ್ನ ಸ್ನೇಹಿತರೆಲ್ಲಾ ಸೇರಿ ಪ್ರಯಾಣದ ಜತೆಗೆ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ದೃಷ್ಟಿಯಿಂದ ಈ ಪಯಣ ಶುರು ಮಾಡಿದ್ದಾರೆ’ ಎನ್ನುತ್ತಾರೆ. ಎಲ್‌ಜಿ ಬಳಗದ ಸದಸ್ಯ ಸೋಮಶೇಖರ್, ‘58 ಜನ ಎಲ್‌ಜಿ ಬಳಗದಲ್ಲಿದ್ದೇವೆ. ಈ ಸಲ ಮಲೆ ಮಹದೇಶ್ವರ ಪ್ರದೇಶದ ಹಿಂದುಳಿದ ಭಾಗದ ಎರಡು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮತ್ತು ಸೋಲಾರ ಸೌಲಭ್ಯಗಳನ್ನು ನೀಡಲು ಹೊರಟಿದ್ದೇವೆ. ಲಿಂಗದೇವರು ತಂಡ ಸಾಥ್ ನೀಡಿದ್ದು ಖುಷಿ ತಂದಿದೆ’ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.