
ಮುಂಬೈ(ಅ. 26): ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿಯೂ ದೊಡ್ಡ ಸದ್ದು ಮಾಡುತ್ತಿದೆ. ಈ ಸೀಸನ್'ನಲ್ಲಿ ಸೆಲೆಬ್ರಿಟಿಗಳು ಹಾಗೂ ಸಾಮಾನ್ಯರನ್ನು ಸರಿಸಮಾನವಾಗಿ ವೇದಿಕೆಗೆ ಕರೆತರಲಾಗಿದೆ. ಮೊದಲ ವಾರದಂದು ಸಾಮಾನ್ಯರ ಗುಂಪಿನಲ್ಲಿ ಬಂದ ಪ್ರಿಯಾಂಕಾ ಜಗ್ಗಾ ಎಂಬ ಹುಡುಗಿಯೆ ಆಟಾಟೋಪವೇ ಹೆಚ್ಚಾಗಿತ್ತು. ಪ್ಯಾಂಟ್'ನೊಳಗೆ ಮೂತ್ರ ಮಾಡಿ ಅದನ್ನು ಒಗೆಯಲು ವಿಜೆ ಬಾನಿ ಅವರಿಗೆ ಆದೇಶ ಮಾಡುವ ಮೂಲಕ ಪ್ರಿಯಾಂಕಾ ದೊಡ್ಡ ಸುದ್ದಿಯಾಗಿದ್ದಳು. ಈ ವಾರ ಎಲಿಮಿನೇಟ್ ಆಗಿರುವ ಪ್ರಿಯಾಂಕಾ ಜಗ್ಗ ಎಂಬ ಹುಡುಗಿಯು ಬಿಗ್'ಬಾಸ್ ಮನೆಗೆ ಪ್ರವೇಶಿಸುವ ವೇಳೆ ತಾನು ಮಾರ್ಕೆಟಿಂಗ್ ಕನ್ಸಲ್ಟೆಂಟ್ ಎಂದು ಹೇಳಿಕೊಂಡು ಬಂದಿದ್ದಳು. ಆದರೆ, ಆಕೆ ಹೇಳಿದ್ದು ಸುಳ್ಳು ಎಂದು ಆಕೆಯ ಮಾಜಿ ಬಾಯ್'ಫ್ರೆಂಡ್ ಡಿಜೆ ಗೌತಮ್ ಅರೋರಾ ಹೇಳಿರುವುದು ಇಂಡಿಯಾಟುಡೇ ವೆಬ್'ಸೈಟ್'ನಲ್ಲಿ ಪ್ರಕಟವಾಗಿದೆ.
ಪ್ರಿಯಾಂಕಾ ಜಗ್ಗಳ ಬಗ್ಗೆ ಗೌತಮ್ ಅರೋರಾ ಹೇಳಿದ್ದೇನು?
* ಪ್ರಿಯಾಂಕಾ ಕಳೆದ 3 ವರ್ಷಗಳಿಂದ ತನ್ನ ಪತಿ ಟಿಮೋಥಿ ಮೂಯ್ಸೆ ಅವರಿಂದ ಬೇರೆಯಾಗಿದ್ದಾಳೆ. ಮಕ್ಕಳನ್ನು ಇವಳ ಬಳಿ ಬಿಟ್ಟು ಗಂಡ ವಿದೇಶಕ್ಕೆ ಹೋಗಿ ನೆಲಸಿದ್ದಾನೆ.
* ಗೌತಮ್ ಮತ್ತು ಪ್ರಿಯಾಂಕಾ ಜಗ್ಗ ಮೊದಲು ಭೇಟಿಯಾಗಿದ್ದ 2015ರಲ್ಲಿ ದ್ವಾರಕಾದ ಅಸಾಮ್ ಕ್ಲಬ್'ನಲ್ಲಂತೆ. 4-5 ತಿಂಗಳ ಕಾಲ ಡೇಟಿಂಗ್ ಮಾಡಿದ ಬಳಿಕ ಪ್ರಿಯಾಂಕಾಳ ಲಕ್ಷುರಿ ಜೀವನಶೈಲಿ ಕಂಡು ಭಯಗೊಂಡು ಆಕೆಯಿಂದ ದೂರ ಸರಿದಿದ್ದಾನೆ ಗೌತಮ್.
* ಹಣಕ್ಕೋಸ್ಕರ ಪ್ರಿಯಾಂಕಾ ಏನು ಬೇಕಾದರೂ ಮಾಡುತ್ತಾಳೆ ಎಂಬುದು ನಟ ಗೌತಮ್ ಅರೋರಾ ಆರೋಪ.
* ಪ್ರಿಯಾಂಕಾ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಎಂಬುದು ಸುಳ್ಳು. ಆಕೆ ಈವೆಂಟ್ ಆಯೋಜಕಳಾಗಿ ಕೆಲಸ ಮಾಡುತ್ತಿದ್ದಾಳಂತೆ.
* ಪ್ರಿಯಾಂಕಾಗೆ ಸಿನಿಮಾ ಕ್ಷೇತ್ರದಲ್ಲಿ ಯಾವುದೇ ಕಾಂಟ್ಯಾಕ್ಟ್ ಇಲ್ಲ. ಬಿಗ್ ಬಾಸ್ ಆಡಿಶನ್'ನಲ್ಲಿ ಭಾಗವಹಿಸಲು ಆಕೆಗೆ ನೆರವಾಗಿದ್ದು ಇದೇ ಗೌತಮ್ ಅರೋರಾ ಮಾತ್ರ.
(ಗೌತಮ್ ಅರೋರಾ ತಿಳಿಸಿದ್ದಾರೆನ್ನಲಾದ ಮೇಲ್ಕಂಡ ವಿವರಗಳು ಸಂಪೂರ್ಣ ಸತ್ಯವೆಂಬುದಕ್ಕೆ ನಿಖರ ಆಧಾರಗಳಿಲ್ಲವೆಂದು ಇಂಡಿಯಾಟುಡೇ ವೆಬ್'ಸೈಟ್ ಸ್ಪಷ್ಟಪಡಿಸಿದೆ.)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.