
ಟೈಮ್ ಟ್ರಾವೆಲಿಂಗ್ ಕಥೆಯನ್ನು ಹೊಂದಿರುವ ಸಿನಿಮಾಗಳು ಹಲವರಿಗೆ ಇಷ್ಟ ಆಗುತ್ತದೆ. ಇಂತಹ ಸಬ್ಜೆಕ್ಟ್ ಹೊಂದಿರುವ ಸಿನಿಮಾಗಳು ಪ್ರೇಕ್ಷಕರಿಗೆ ಬಹಳ ಬೇಗ ಇಷ್ಟವಾಗುತ್ತದೆ. ಕನ್ನಡದಲ್ಲಿ ಬ್ಲಿಂಕ್, ಮರ್ಫಿ, ಬನಾರಸ್, ತುರ್ತು ನಿರ್ಗಮನ ಸೇರಿದಂತೆ ಹಲವು ಸಿನಿಮಾಗಳು ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದ್ದವು. ಇಂತಹದ್ದೇ ಒಂದು ಅಂಡರ್ ರೇಟೆಟ್ ಸಿನಿಮಾ ಕುರಿತಂತೆ ನಾವು ನಿಮಗೆ ಹೇಳುತ್ತಿದ್ದೇವೆ.
ಹೌದು, ಇಬ್ಬರು ಬೇರೆ ಬೇರೆ ಕಾಲದಲ್ಲಿರುವ ಯುವಕ, ಯುವತಿ ನಡುವೆ ಪ್ರೇಮಾ ಕಥೆ ಸಿನಿಮಾ ಇದಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿರುವ ಹೀರೋ, ಹೀರೋಯಿನ್‌ಗೆ ಒಂದೇ ಮೊಬೈಲ್ ನಂಬರ್ ಇರುತ್ತದೆ? ಅಲ್ಲಿಂದಲೇ ಇವರಿಬ್ಬರ ಪ್ರೀತಿ ಶುರುವಾದಂತೆ ನಿರ್ದೇಶಕರು ತೋರಿಸಿದರೂ, ಆ ಬಳಿಕ ಕಥೆಯಲ್ಲಿ ಬರುವ ತಿರುವುಗಳು ಮುಂದೇನಾಗುತ್ತೆ ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತದೆ. ನಿರ್ದೇಶಕರು ತಾವು ಅಂದುಕೊಂಡತೆ ಸಿನಿಮಾವನ್ನು ಪ್ರೇಕ್ಷಕರು ಎದುರು ತರಲು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ಅಂದಹಾಗೇ ನಾವು ಹೇಳುತ್ತಿರುವ ಸಿನಿಮಾ ಹೆಸರು 'ಅದ್ಭುತಂ'. ಬಾಲ ಕಲಾವಿದನಾಗಿ ತೆಲುಗು ಇಂಡ್ರಸ್ಟಿಗೆ ಎಂಟ್ರಿಕೊಟ್ಟು, ಸದ್ಯ ವಿಶ್ವಾಸರ್ಹ ನಾಯಕ ನಟನಾಗಿ ಹೆಸರು ಪಡೆದುಕೊಳ್ಳುತ್ತಿರುವ ತೇಜ್ ಸಜ್ಜಾ ಈ ಸಿನಿಮಾ ನಾಯಕ. ಈ ಸಿನಿಮಾದಲ್ಲಿ ಹಿರೋಯಿನ್ ಆಗಿ, ಟಾಲಿವುಡ್ ಸ್ಟಾರ್ ಹೀರೋ ರಾಜಶೇಖರ್ ಅವರ ಮಗಳು ಶಿವಾನಿ ಕಾಣಿಸಿಕೊಂಡಿದ್ದಾರೆ. 2021ರಲ್ಲಿ ಈ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾದರೂ, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಆದರೆ ಓಟಿಟಿಯಲ್ಲಿ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಟಾರ್ ನಿರ್ದೇಶಕ ಈ ಸಿನಿಮಾಗೆ ಕಥೆಯನ್ನು ನೀಡಿದ್ದು, ನಾಯಕನಟ ಹಾಗೂ ನಾಯಕಿ ಬೇರೆ ಬೇರೆ ಪ್ರದೇಶದಲ್ಲಿ ಇರುತ್ತಾರೆ. ಆದರೆ ಇಬ್ಬರಿಗೂ ಒಂದೇ ನಂಬರ್ ಸಿಗುತ್ತದೆ. ಅಲ್ಲಿಂದ ಇಬ್ಬರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಯ್ತು ಅಂತ ತಿಳಿದುಕೊಳ್ಳಲು ನೀವು ಸಿನಿಮಾ ನೋಡಲೇಬೇಕು. ಜಿಯೋ ಹಾಟ್ ಸ್ಟಾರ್‌ನಲ್ಲಿ ಈ ಸಿನಿಮಾ ಲಭ್ಯವಾಗಿದೆ. ನಿಮ್ಮ ಬಳಿ ಜಿಯೋ ಹಾಟ್ ಸ್ಟಾರ್ ಸಬ್ಸ್ಕ್ರಿಪ್ಷನ್ ಇಲ್ಲ ಎಂದಾದರೆ, ನೀವು ಯೂಟ್ಯೂಬ್‌ನಲ್ಲೂ ಈ ಸಿನಿಮಾವನ್ನು ನೋಡಬಹದು. ತೇಜ್ ಸಜ್ಜಾ ಸಿನಿಮಾ ಅಂತ ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದರೆ ನಿಮಗೆ ಸಿನಿಮಾ ಸಿಗುತ್ತದೆ. ಯಾವುದೇ ಖರ್ಚಿಲ್ಲದೇ ಉಚಿತವಾಗಿ ಯೂಟ್ಯೂಬ್ನಲ್ಲಿ ಕುಟುಂಬದೊಂದಿಗೆ ಕುಳಿತು ನೀವು ಸಿನಿಮಾ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.