
ಕಾಲಿವುಡ್ ಸ್ಟಾರ್ ನಟ, ರಜನಿಕಾಂತ್ ಮಾಜಿ ಅಳಿಯ ಮತ್ತೊಂದ್ ಮದುವೆ ಸಿದ್ದವಾದ್ರಾ? ಹೌದು ಅಂತಿವೆ ಕಾಲಿವುಡ್ ಮೂಲಗಳು. ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ಮಾಡ್ತಾ ಇದ್ದ ಧನುಷ್, ಪ್ರೇಮಿಗಳ ದಿನವೇ ಮರಾಠಿ ಚೆಲುವೆ ಜೊತೆ ಸಪ್ತಪದಿ ತುಳಿಯಲಿದ್ದಾರಂತೆ.
ಯೆಸ್ ಸಿನಿ ದುನಿಯಾದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇರೋ ಸುದ್ದಿ ಇದು. ಕಾಲಿವುಡ್ ಸ್ಟಾರ್ ನಟ, ರಜನಿಕಾಂತ್ ಮಾಜಿ ಅಳಿಮಯ್ಯ ಮತ್ತೊಂದು ಮದುವೆಗೆ ಸಜ್ಜಾಗಿದ್ದಾರೆ. ಇಷ್ಟು ದಿನ ನಟಿ ಮೃಣಾಲ್ ಠಾಕೂರ್ ಜೊತೆ ಧನುಷ್ ಡೇಟಿಂಗ್ ಮಾಡ್ತಾ ಇದ್ದಾರೆ ಅಂತ ಗಾಸಿಪ್ ಹರಿದಾಡ್ತಾ ಇತ್ತು. ಈಗ ಈ ಜೋಡಿ ಪ್ರೇಮಿಗಳ ದಿನ ಮದುವೆ ಆಗೋಕೆ ಸಿದ್ದವಾಗಿದ್ದಾರಂತೆ.
ತಮಿಳಿನ ಪ್ರತಿಭಾನ್ವಿತ ನಟ ಧನುಷ್ , ರಜನಿಕಾಂತ್ ಪುತ್ರಿ ಐಶ್ವರ್ಯರನ್ನ 2004ರಲ್ಲಿ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರು ಮುದ್ದಿನ ಮಕ್ಕಳ ಜೊತೆಗೆ ಎರಡು ದಶಕ ಅನ್ಯೋನ್ಯವಾಗಿ ಸಂಸಾರ ಮಾಡಿದ್ದ ಈ ಜೋಡಿ 2022ರಲ್ಲಿ ವಿಚ್ಛೇದನ ಪಡೆಯೋದಕ್ಕೆ ಮುಂದಾಗಿದ್ರು.
ರಜನಿಕಾಂತ್ ತಮ್ಮ ಪುತ್ರಿಯ ಸಂಸಾರ ಸರಿಪಡಿಸೋಕೆ ನಾನಾ ಕಸರತ್ತು ಮಾಡಿದ್ರು. ಆದ್ರೆ ಧನುಷ್-ಐಶ್ವರ್ಯರನ್ನ ಒಂದು ಮಾಡೋದಕ್ಕೆ ಆಗಲೇ ಇಲ್ಲ. 2024ರಲ್ಲಿ ಈ ಇಬ್ಬರು ಅಧಿಕೃತವಾಗಿ ವಿಚ್ಛೇದನ ಪಡೆದಿದ್ರು.
ಹೌದು ವಿಚ್ಛೇದನದ ಬಳಿಕ ಧನುಷ್ ಹೆಸರು ಮರಾಠಿ ಚೆಲುವೆ ಮೃಣಾಲ್ ಜೊತೆ ಕೇಳಿ ಬರೋದಕ್ಕೆ ಶುರುವಾಗಿತ್ತು. ಕಳೆದ ವರ್ಷ ಮುಂಬೈನಲ್ಲಿ ಮೃಣಾಲ್ ಬರ್ತ್ಡೇ ಪಾರ್ಟಿನಲ್ಲಿ ಧನುಷ್ ಪ್ರತ್ಯಕ್ಷ ಆಗಿದ್ರು. ಆ ಬಳಿಕ ಅನೇಕ ಸಾರಿ ಇಬ್ಬರೂ ಕದ್ದು ಮುಚ್ಚಿ ಕೈ ಕೈ ಹಿಡಿದು ಓಡಾಡಿದ್ರು. ಮೂಲತಃ ಮಹಾರಾಷ್ಟ್ರ ಮೂಲದ ಮೃಣಾಲ್ ಆರಂಭದಲ್ಲಿ ಮರಾಠಿ ಮತ್ತು ಹಿಂದಿ ಸಿನಿರಂಗದಲ್ಲಿ ಸಕ್ರಿಯರಾಗಿದ್ರು. ಹಾಯ್ ನಾನಾ ಸಿನಿಮಾದಿಂದ ಮೃಣಾಲ್ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ತನ್ನ ಹೆಸರು ದಾಖಲಾಗುವಂತೆ ಮಾಡಿದ್ರು.
ಸದ್ಯ ಒಂದಿಷ್ಟು ಬಾಲಿವುಡ್ ಸಿನಿಮಾಗಳ ಜೊತೆಗೆ ಅಲ್ಲು ಅರ್ಜುನ್ ನಟನೆಯ ಹೊಸ ಚಿತ್ರದಲ್ಲೂ ಮೃಣಾಲ್ ನಟಿಸ್ತಾ ಇದ್ದಾರೆ. ಇಂಥಾ ಮೃಣಾಲ್ ಈಗ ಸೌತ್ ಹೀರೋ ಜೊತೆ ಸಪ್ತಪದಿ ತುಳಿಯೋದಕ್ಕೆ ಸಜ್ಜಾಗಿದ್ದಾರೆ.
ಧನುಷ್ ಆಗಲಿ, ಮೃಣಾಲ್ ಆಗಲಿ ತಮ್ಮ ಮದುವೆ ಕುರಿತ ಸುದ್ದಿ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ರೆ ಮೂಲಗಳ ಪ್ರಕಾರ ಫೆಬ್ರುವರಿ 14ಕ್ಕೆ ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಪಲ್ ಆಗಿ ಮದುವೆ ನಡೆಯಲಿದೆ ಅಂತ ಸುದ್ದಿಯಾಗಿದೆ.
ಅತ್ತ ಮಾಜಿ ಪತಿ ವಿವಾಹಕ್ಕೆ ಸಜ್ಜಾದ್ರೆ, ಇತ್ತ ಐಶ್ವರ್ಯ ಮಕ್ಕಳ ಜೊತೆ ಸೂಪರ್ ಸ್ಟಾರ್ ರಜನಿ ಬಂಗಲೆಯಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಸೆಲೆಬ್ರೇಟ್ ಮಾಡಿದ್ದಾರೆ. ರಜನಿಕಾಂತ್ ತಮ್ಮ ಇಬ್ಬರು ಮಕ್ಕಳು, ಮೊಮ್ಮಕ್ಕಳ ಜೊತೆಗೆ ಮನೆಯಲ್ಲಿ ಸಂಭ್ರಮದಿಂದ ಪೊಂಗಲ್ ಸೆಲೆಬ್ರೇಟ್ ಮಾಡಿದ್ದಾರೆ.
ಒಟ್ಟಾರೆ ಧನುಷ್, ಐಶ್ವರ್ಯ ಇಬ್ಬರ ಪಥ ಬದಲಾಗಿದೆ. ಇಬ್ಬರೂ ಅವರವರ ಬದುಕನ್ನ ಅವರಿಷ್ಟದಂತೆ ಬದುಕ್ತಾ ಇದ್ದಾರೆ. ಇತ್ತ ಧನುಷ್ ಅಂತೂ ಯುವನಟಿ ಮೃಣಾಲ್ ಜೊತೆ ಹೊಸಬದುಕನ್ನ ಆರಂಭಿಸೋಕೆ ಸಜ್ಜಾಗಿದ್ದಾರೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.