ಸ್ಯಾಂಡಲ್‌ವುಡ್ ನಟಿಯೊಂದಿಗೆ ಬಿಗ್‌ಬಾಸ್ ಸ್ಪರ್ಧಿ ಮದುವೆ!

Published : Dec 10, 2018, 02:09 PM IST
ಸ್ಯಾಂಡಲ್‌ವುಡ್ ನಟಿಯೊಂದಿಗೆ ಬಿಗ್‌ಬಾಸ್ ಸ್ಪರ್ಧಿ ಮದುವೆ!

ಸಾರಾಂಶ

ಬಿಗ್‌ಬಾಸ್ -3ರ ಸ್ಪರ್ಧಿ, ಈ ಕ್ರಿಕೆಟರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಈ ನಟಿಯೊಂದಿಗೆ ಮುಂದಿನ ತಿಂಗಳು ಮದುವೆಯಂತೆ. ಯಾರು ಆ ಅದೃಷ್ಟವಂತೆ?

 

ಬಿಗ್‌ಬಾಸ್-3ರ ಸ್ಪರ್ಧಿ ಅಯ್ಯಪ್ಪ, ಕ್ರಿಕೆಟಿಗನಾಗಿ ಹಾಗೂ ಸ್ಯಾಂಡಲ್‌ವುಡ್ ನಟಿ ಪ್ರೇಮಾ ತಮ್ಮನೆಂದು ಹೆಸರು ಮಾಡಿದವರು. ಅಲ್ಲದೇ ಬಿಗ್‌ ಬಾಸ್ ಮನೆಯಲ್ಲಿ ಪೂಜಾ ಗಾಂಧಿ ಹಾಗೂ ಗೌತಮಿಯೊಂದಿಗೆ ಆತ್ಮೀಯರಾಗಿದ್ದು ಆಗಾಗ ಸುದ್ದಿಯಾಗುತ್ತಿದ್ದರು.

ಇದೀಗ ಇವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅದೂ 'ಪಾನಿಪುರಿ' ಚಿತ್ರದಲ್ಲಿ ನಟಿಸಿದ ಅನು ಪೋವಮ್ಮ ಅವರೊಂದಿಗೆ ಜನವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ ಅಯ್ಯಪ್ಪ.

ಒಂದೆರಡು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದು, ಈ ಜೋಡಿ 2016ರಲ್ಲಿ ಭೇಟಿಯಾಗಿದ್ದು. ಸ್ನೇಹ ಪ್ರೀತಿಗೆ ತಿರುಗಿ, ಜನವರಿಯಲ್ಲಿ ಮದುವೆ ಆಗುತ್ತಿದ್ದಾರೆ.

ಅನು ಪೂವಮ್ಮ ಮೂಲತಃ ಕೊಡಗಿನವರಾಗಿದ್ದು, ಕಳೆದ ಮೇನಲ್ಲಿಯೇ ಈ ಜೋಡಿಯು ಕೊಡವ ಸಂಪ್ರದಾಯದಂತೆ ಬೆಂಗಳೂರಿನ ಕೊಡವ ಸಮಾಜದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಜನವರಿ 19 ಹಾಗು 20ರಂದು ನಡೆಯುವ ಮದುವೆಯೂ ಕೊಡವ ಸಂಪ್ರದಾಯದಂತೆಯೇ ನೆರವೇರಲಿದೆ.

 

ಕರ್ವ, ಪಾನಿಪುರಿ, ಕಥಾ ವಿಚಿತ್ರ, ಲೈಫ್ ಸೂಪರ್ ಚಿತ್ರದಲ್ಲಿ ಅನು ನಟಿಸಿದ್ದು, ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುವ 'ಮುದ್ದು ಲಕ್ಷ್ಮಿ' ಧಾರಾವಾಯಿಯಲ್ಲಿ ಖಳ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಮೂಲತಃ ಕ್ರಿಕೆಟರ್ ಆಗಿರುವ ಅಯ್ಯಪ್ಪ, ಅಂಡರ್ 20 ತಂಡಕ್ಕೆ ಕೋಚ್ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!