
'ಅನುಕ್ತಾ' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ದಾಸ ಕನ್ನಡ ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಮೋಸ ಹಾಗೂ ಭಾಷಾ ಸಮಸ್ಯೆಗಳ ಬಗ್ಗೆಯೂ ಗಂಭೀರವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ಇದೇ ವೇದಿಕೆ ಮೇಲೆ ತನ್ನ ನೆಚ್ಚಿನ ನಟಿಯ ಬಗ್ಗೆ ಬಾಯಿ ಬಿಟ್ಟಿದ್ದಾರೆ.
2001ರಲ್ಲಿ 'ಮಿಸ್ಟರ್ ಹರಿಶ್ವಂದ್ರ'ದಲ್ಲಿ ಸಿನಿಮಾದಲ್ಲಿ ಈಕೆಯೊಂದಿಗೆ ನಟಿಸಿದ ಅನುಭವವನ್ನು ಅವರು ಹಂಚಿಕೊಂಡಿದ್ದು, ವರ್ಷ 38 ಆದರೂ ಸೌಂದರ್ಯವನ್ನು ಕಾಪಾಡಿಕೊಂಡಿರುವುದಕ್ಕೆ ಮನ ಸೋತಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು?
ಬೇರೆ ಯಾರೂ ಅಲ್ಲ. ಅನು ಪ್ರಭಾಕರ್ ಮುಖರ್ಜಿ.
ಹೌದು! ಈಗಾಗಲೇ ಹೆಣ್ಣು ಮಗುವಿನ ತಾಯಿಯಾಗಿರುವ ಅನು ಪ್ರಭಾಕರ್, ದಾಸನ ನೆಚ್ಚಿನ ನಟಿಯಂತೆ. ಆಗ ಹೇಗಿದ್ದರೋ, ಈಗಲೂ ಹಾಗೆಯೇ ಇದ್ದಾರೆ. ಅಲ್ಲಿಂದ ಇಲ್ಲಿ ತನಕ ವಯಸ್ಸಾಗದಂತೆ ಫಿಟ್‌ನೆಸ್ ಮೆಂಟೈನ್ ಮಾಡಿದ್ದಾರೆ. ಆದರೆ, ನಮಗೆ ಮಾತ್ರ ವಯಸ್ಸಾಗಿದೆ...' ಎಂದು ನವಿರಾಗಿ ಅನು ಸೌಂದರ್ಯವನ್ನು ಶ್ಲಾಘಿಸಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.