
ಮೊನ್ನೆ ಬಾಲಿವುಡ್ ಪಡಸಾಲೆಯಲ್ಲಿ ಇಂಟರೆಸ್ಟಿಂಗ್ ಸಂಗತಿಯೊಂದು ನಡೆದಿದೆ. ಒಂದೇ ಕಡೆ ಶಾರುಕ್ ಖಾನ್‌ರೊಂದಿಗೆ ಕಾಜೋಲ್, ಅಲಿಯಾ ಭಟ್, ಶ್ರೀದೇವಿ, ರಾಣಿ ಮುಖರ್ಜಿ, ಕತ್ರಿನಾ ಕೈಫ್ ಜೊತೆಯಾಗಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಈ ಕ್ಷಣದ ಖುಷಿಯನ್ನು ಖುದ್ದು ಶಾರೂಕ್ ಖಾನ್ ಹಂಚಿಕೊಂಡಿದ್ದು, ನೀವೆಲ್ಲರೂ ನನ್ನ ಜೊತೆಗಿದ್ದು ತೋರಿಸದ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ವಿಷಯ ಇಷ್ಟಕ್ಕೆ ಮುಗಿದಿದ್ದರೆ ಅಂತಹ ವಿಶೇಷವೇನೂ ಇಲ್ಲ ಎಂದು ಹೇಳಿ ಮುಂದೆ ಸಾಗಬಹುದಾಗಿತ್ತು. ಆದರೆ ನೈಜ ಸಂಗತಿ ಏನಪ್ಪಾ ಎಂದರೆ, ಇವರೆಲ್ಲರೂ ಒಟ್ಟಿಗೆ ಸೇರಿದ್ದಕ್ಕೆ ಕಾರಣ ಆನಂದ್ ಎಲ್. ರೈ ಅವರ ಮುಂದಿನ ಚಿತ್ರದ ಹಾಡೊಂದರ ಚಿತ್ರೀಕರಣಕ್ಕೆ. ಅಂದಹಾಗೆ ಇವರೆಲ್ಲರೂ ಈ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಅನುಷ್ಕಾ ಶರ್ಮಾ ಕೂಡ ಈ
ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ಮಾತ್ರ ಈ ಸಂದರ್ಭದಲ್ಲಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕಾದರೂ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಅವರನ್ನು ಒಟ್ಟಿಗೆ ನೋಡಬಹುದು ಅನ್ನೋ ಆಸೆ ಅಭಿಮಾನಿಗಳಿಗಿತ್ತು. ಆದರೆ ಅದು ನೆರವೇರಿಲ್ಲ. ಆದರೆ ಈ ಸಂದರ್ಭದಲ್ಲಿ ಕಾಜೋಲ್ ಮತ್ತು ರಾಣಿ ಮುಖರ್ಜಿ ಇಬ್ಬರೂ ಶಾರೂಕ್ ಜೊತೆ ಸೆಲ್ಫೀ ತೆಗೆದುಕೊಂಡಿದ್ದು, ಈ ಸೆಲ್ಫೀ ವೈರಲ್ ಆಗಿದೆ
--
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.