ಹಾರ್ಟ್ ಡಿಸೀಸ್ ಇರುವ ಮಕ್ಕಳ ನೆರವಿಗೆ ಮುಂದಾದ ಅಲಿಯಾ ಭಟ್

Published : Oct 03, 2019, 12:38 PM IST
ಹಾರ್ಟ್ ಡಿಸೀಸ್ ಇರುವ ಮಕ್ಕಳ ನೆರವಿಗೆ ಮುಂದಾದ ಅಲಿಯಾ ಭಟ್

ಸಾರಾಂಶ

ಹಾರ್ಟ್ ಡಿಸೀಸ್ ಇರುವ ಮಕ್ಕಳ ನೆರವಿಗೆ ಮುಂದಾದ ಅಲಿಯಾ ಭಟ್ | 'Art for the Heart' ಎನ್ನುವ ಪೇಯಿಂಟಿಂಗ್ ಎಕ್ಸಿಬಿಶನ್ ಅನಾವರಣ | ಮಕ್ಕಳಿಗಾಗಿ ಫಂಡ್ ಕಲೆಕ್ಟ್ ಮಾಡಲು ಅಲಿಯಾ ಮುಂದಾಗಿದ್ದಾರೆ 

ಬಾಲಿವುಡ್ ನಟಿ ಅಲಿಯಾ ಭಟ್ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಪೇಯಿಂಟಿಂಗ್ ಎಕ್ಸಿಬಿಷನ್ ಆಯೋಜಿಸಿದ್ದು ಅದಕ್ಕಾಗಿ ಫಂಡ್ ಸಂಗ್ರಹ ಮಾಡುವುದಕ್ಕೆ ಬೆಂಬಲ ನೀಡಿದ್ದಾರೆ.  

"ಯುವಕರಿಗಿಂತ ಮಕ್ಕಳೇ ಹೆಚ್ಚು ಸಕಾರಾತ್ಮಕವಾಗಿರುತ್ತಾರೆ. ಅವರ ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆಗಳೇ ಇರುವುದಿಲ್ಲ. ಹಾಗಾಗಿ ಅವರು ಬೇಗ ಗುಣಮುಖರಾಗುತ್ತಾರೆ" ಎಂದು ಅಲಿಯಾ ಭಟ್ ಹೇಳಿದ್ದಾರೆ. ಮುಂಬೈನ ಬಾಯಿ ಜರ್ಬಾಯಿ ವಾಡಿಯಾ ಆಸ್ಪತ್ರೆಯಲ್ಲಿ ಎಕ್ಸಿಬಿಶನ್ ಅನಾವರಣಗೊಳಿಸಿ ಮಾತನಾಡಿದರು. 

 

ನಾನು ಜರ್ಬಾಯಿ ವಾಡಿಯಾ ಆಸ್ಪತ್ರೆ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ಭೇಟಿ ನೀಡಿದೆ. ಈ ಮಕ್ಕಳಿಗಾಗಿ 'Art for the Heart' ಎನ್ನುವ ಪೇಯಿಂಟಿಂಗ್ ಎಕ್ಸಿಬಿಶನ್ ನನ್ನುಆಯೋಜಿಸಲಾಗಿದೆ. ಇದರಿಂದ ಸಂಗ್ರಹವಾದ ಹಣವನ್ನು ಶಿಶುಗಳ ಹಾರ್ಟ್ ಸರ್ಜರಿಗಾಗಿ ಬಳಸಿಕೊಳ್ಳಲಾಗುತ್ತಿದೆ ’ ಎಂದು ಅಲಿಯಾ ಭಟ್ ಹೇಳಿದ್ದಾರೆ. 

ಇತ್ತೀಚಿಗೆ IIFA 2019 ಅವಾರ್ಡ್ ನಲ್ಲಿ ಅಲಿಯಾ ಭಟ್ ಗೆ ರಾಜಿ ಸಿನಿಮಾಗಾಗಿ Best Actress ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಮೋಸ್ಟ್ ಇನ್ಸ್ಪೈರಿಂಗ್ ಏಷಿಯನ್ ವುಮೆನ್ ಪೀಪಲ್ ಚಾಯ್ಸ್ ಅವಾರ್ಡ್ 2019 ಗೆ ನಾಮಿನೇಟ್ ಕೂಡಾ ಆಗಿದ್ದಾರೆ. 

ಅಲಿಯಾ ಭಟ್ ಸದ್ಯ ರಣಬೀರ್ ಕಪೂರ್ ಜೊತೆ ಬ್ರಹ್ಮಸೂತ್ರ ದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಮಿತಾಬಚ್ಚನ್, ಅಕ್ಕಿನೇನಿ ನಾಗಾರ್ಜುನ್ ಕೂಡಾ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!
ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!