
ಬೆಂಗಳೂರು (ಮೇ. 16): ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದಲ್ಲಿ ಸುನೀಲ್ ಶೆಟ್ಟಿ. ಇದು ಅಧಿಕೃತ. ಮೇ.೧೭ರಿಂದ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಚಿತ್ರೀಕರಣ ಆರಂಭವಾಗಲಿದೆ. ವಿಲನ್ ಪಾತ್ರಕ್ಕೆ ಕಬೀರ್ ದುಹಾನ್ ಸಿಂಗ್ ಇದ್ದಾರೆ. ನಾಯಕಿ ಪಾತ್ರಕ್ಕೆ ಆಕಾಂಕ್ಷ ಸಿಂಗ್ ಬಂದಿದ್ದಾರೆ.
ಈಗಿನ ದೊಡ್ಡ ಸುದ್ದಿ ಏನೆಂದರೆ ಸುನೀಲ್ ಶೆಟ್ಟಿ ಇದೇ ಮೊದಲ ಬಾರಿಗೆ ಪೈಲ್ವಾನ್ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಬೆಳವಣಿಗೆಗೆ ಕಾರಣ ಸುದೀಪ್ ಮತ್ತು ಸುನೀಲ್ ಶೆಟ್ಟಿ ಮಧ್ಯೆ ಇರುವ ಸ್ನೇಹ. ಆ ಸ್ನೇಹಕ್ಕೆ ಕಾರಣವೇ ಕ್ರಿಕೆಟ್. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಿಂದಾಗಿ ಸುದೀಪ್ ಸಲ್ಮಾನ್ ಖಾನ್ ಸಹೋದರರು ಸೇರಿದಂತೆ ಸುನೀಲ್ ಶೆಟ್ಟಿ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಈ ಬಾಂಧವ್ಯವೇ ಸುನೀಲ್ ಶೆಟ್ಟಿ ಅವರನ್ನು ಕನ್ನಡಕ್ಕೆ ಕರೆದು ತಂದಿದೆ.
ಸುನೀಲ್ ಶೆಟ್ಟಿ ಈ ಹಿಂದೆಯೇ ಕನ್ನಡ ಚಿತ್ರವೊಂದರಲ್ಲಿ ನಟಿಸಬೇಕಿತ್ತು. ಆದರೆ ಅದು ಕಾರಣಾಂತ ರಗಳಿಂದ ನಿಂತು ಹೋಗಿತ್ತು. ಈಗ ‘ಪೈಲ್ವಾನ್’ ಚಿತ್ರದಿಂದಾಗಿ ಮಂಗಳೂರು ಮೂಲದ ಕಲಾವಿದ ಕನ್ನಡ ಚಿತ್ರರಂಗಕ್ಕೆ ಬರುವಂತಾಗಿದೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.