ಬಿಗ್ ಬಾಸ್ ಮನೆಗೆ ’‘ತಾಯಿಗೆ ತಕ್ಕ ಮಗ’ ಟೀಂ ಎಂಟ್ರಿ ಕೊಟ್ಟಿತ್ತು. ನಿರ್ದೇಶಕ ಶಶಾಂಕ್, ನಾಯಕ ನಟ ಅಜಯ್ ರಾವ್ ಮತ್ತು ನಾಯಕಿ ಆಶಿಕಾ ರಂಗನಾಥ್ ಸಿನಿಮಾದ ಯಶಸ್ಸು ಹಂಚಿಕೊಂಡರು.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್ ಗೆ ಭರ್ಜರಿ ಸ್ವಾಗತ ಸಿಕ್ಕಿತು. ನಂತರ ಬಿಗ್ ಬಾಸ್ ಒಡ್ಡಿದ ಟಾಸ್ಕ್ ಆಶಿಕಾ ನಿರೂಪಣೆಯಲ್ಲಿ ನಡೆಯಿತು. ಆಶಿಕಾ ಬಿಗ್ ಸ್ಪರ್ಧಿಗಳ ಜತೆ ಕುಣಿದು ಕುಪ್ಪಳಿಸಿದರು. ವಿವಿಧ ಹಾಡುಗಳಿಗೆ ಸ್ಪರ್ಧಿಗಳು ಒಬ್ಬೊಬ್ಬರನ್ನೇ ಕರೆದು ನೃತ್ಯ ಮಾಡಿದರು.
ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳೂ ಕ್ರಿಯಾಶೀಲರಾಗಿದ್ದಾರೆ. ಆ್ಯಂಡಿ ನನಗೆ ಇಂಪ್ರೆಸ್ ಮಾಡಲು ನೋಡಿದರು. ಆದರೆ ರೈತ ಶಶಿ ಒಳ್ಳೆಯ ನೃತ್ಯ ಮಾಡಿ ನನ್ನನ್ನು ಇಂಪ್ರೆಸ್ ಮಾಡಿದರು ಎಂದು ಆಶಿಕಾ ರಂಗನಾಥ್ ಹೇಳಿದರು.
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಮಳೆ
ಅಜಯ್ ರಾವ್ ಹೀರೋ ಇನ್ ಗಳಿಗೆ ಜಾಕೆಟ್ ಬಿಚ್ಚಿಕೊಡುತ್ತಾರೆ.. ಅಜಯ್ ಅವರ ಕೃಷ್ಣ ಲೀಲೆ ನೋಡಿಯೇ ಅವರನ್ನು ಸ್ಯಾಂಡಲ್ ವುಡ್ ಕೃಷ್ಣ ಮಾಡಿದ್ದು... ಈ ರೀತಿ ಹಲವಾರು ವಿಚಾರಗಳನ್ನು ಇಟ್ಟುಕೊಂಡು ಸುದೀಪ್ ಸಿನಿಮಾ ತಂಡದ ಕಾಲೆಳೆದರು. ಶನಿವಾರ ಮನೆಯಿಂದ ಹೊರಬಂದ ಸಲಿಂಗಿ ಆ್ಯಡಂ ಪಾಶಾ ಸುದೀಪ್ ರೊಂದಿಗೆ ಮನೆ ಒಳಗಿನ ಘಟನಾವಳಿಗಳನ್ನು ಶೇರ್ ಮಾಡಿಕೊಂಡರು.
How was today’s Bigboss episode ?? MUA & styling : myself ☺️
A post shared by Ashika Rangnath (@ashika_rangnath) on Nov 18, 2018 at 7:28am PST