
ಬೆಂಗಳೂರು[ಜ.06] ಆದಾಯ ತೆರಿಗೆ ಇಲಾಖೆ ಸ್ಯಾಂಡಲ್‌ವುಡ್‌ಗೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ಚಿತ್ರ ನಿರ್ಮಾಣ ಸೇರಿದಂತೆ ಇತರೆ ಕೆಲಸದಲ್ಲಿ ಹೂಡಿಕೆ ಮಾಡುವ ಅಷ್ಟೂ ವಿಚಾರನ್ನು ತಿಳಿಸಬೇಕು. ಯಾವುದನ್ನು ಮುಚ್ಚಿಡಬಾರದು ಎಂದು ಸಂದೇಶ ರವಾನಿಸಿದೆ.
180 ಅಧಿಕಾರಿಗಳು ನಟ ಯಶ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ವಿಜಯ್ ಕಿರಂಗಂದೂರು ಮನೆ ಮೇಲೆ ದಾಳಿ ಮಾಡಿ 3 ದಿನ ತಪಾಸಣೆ ನಡೆಸಿದ್ದರು.
3 ತಿಂಗಳ ಹಿಂದಿನಿಂದಲೆ ಮಾಹಿತಿ ಕಲೆ ಹಾಕಿದ್ದರು: ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಚಿತ್ರಗಳು ನಿರ್ಮಾಣವಾಗುತ್ತಿದ್ದುದ್ದು ಸಹಜವಾಗಿಯೇ ಆದಾಯ ತೆರಿಗೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು. ಈ ಬಗ್ಗೆ ನಿರಂತರವಾಗಿ ಮಾಹಿತಿ ಕಲೆ ಹಾಕಿ ಅಂತಿಮವಾಗಿ ಹೊಸ ವರ್ಷದ ವೇಳೆಗೆ ಶಾಕ್ ನೀಡಲಾಯಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.