ಅಕ್ಷತಾ-ರಾಕೇಶ್ ಮಧ್ಯೆ ಕಬಾಬ್ ಮೇ ಹಡ್ಡಿ ಆದ್ರಾ ನಿವೇದಿತಾ?

Published : Dec 18, 2018, 12:59 PM ISTUpdated : Dec 18, 2018, 03:33 PM IST
ಅಕ್ಷತಾ-ರಾಕೇಶ್ ಮಧ್ಯೆ ಕಬಾಬ್ ಮೇ ಹಡ್ಡಿ ಆದ್ರಾ ನಿವೇದಿತಾ?

ಸಾರಾಂಶ

ಬಿಗ್‌ಬಾಸ್ ಸೀಸನ್ 6 ಈಗಾಗಲೇ 56 ದಿನಗಳನ್ನು ಪೂರೈಸಿದೆ. ಕಳೆದ ಸೀಸನ್‌ನ ಆ್ಯಕ್ಟಿವ್ ಆ್ಯಂಡ್ ಫೇಮಸ್ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಪ್ರವೇಶಿಸಿದ ನಂತರ ಮತ್ತಷ್ಟು ಕಲರ್‌ಫುಲ್ ಆಗುವ ಲಕ್ಷಣ ಕಾಣುತ್ತಿದೆ. ಏನೇನಾಗಿದೆ?

 

ವೈಲ್ಡ್ ಕಾರ್ಡ್ ಎಂಟ್ರಿ ಆರಂಭವಾದ ಮೇಲೆ ಕಲರ್‌‌ಫುಲ್ ಹೌಸ್ ಆಯ್ತು ಸೀಸನ್ 9ರ ಬಿಗ್ ಬಾಸ್ ಮನೆ. ಇದೀಗ ಮನೆ ಪೂರ್ತಿ ಎನರ್ಜೆಟಿಕ್ ಆಗಿದ್ದು, ಹಾಡಿನ ಮೂಲಕವೇ ದಿನವನ್ನು ಎಂಜಾಯ್ ಮಾಡಲಾಗುತ್ತಿದೆ. ಮನೆಯಲ್ಲಿ ಏನೇ ನಡೆದರೂ ಕಳೆದ ಸೀಸನ್ ಸ್ಪರ್ಧಿ ನಿವೇದಿತಾ ಗೌಡ ಮಾತ್ರ ಜಿಮ್‌ನಲ್ಲಿ ಫುಲ್ ಬ್ಯುಸಿ ಆಗಿರ್ತಾರೆ.

ಅರ್ಧ ದಾರಿ ಸವೆಸಿದ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆರಂಭವಾಗಿದೆ. ಏನಪ್ಪಾ ಮಾಡುವುದು ಎಂದು ಚಿಂತಿತರಾದ ಮನೆ ಮಂದಿಗೆ ನಾಮಿನೇಷನ್ ಭಯವೂ ಶುರುವಾಗಿದೆ. ಈ ವಾರದ ಕ್ಯಾಪ್ಟನ್ ರಾಕೇಶ್ ಆದ ಕಾರಣ ಅಕ್ಷತಾ ಟೇಕನ್ ಫಾರ್ ಗ್ರ್ಯಾಂಟೆಡ್ ಆದ್ರು ಎನ್ನುತ್ತಿದ್ದಾರೆ ಮಂದಿ.

ತಪ್ಪಾದ ಗೆಸ್, ಅಪ್‌ಸೆಟ್ ಆದ್ರು ಅಕ್ಷತಾ... ರಾಕೇಶ್‌ಗೆ Bigg Boss ನೀಡಿದ ವಿಶೇಷ ಅಧಿಕಾರದಲ್ಲಿ 'ನಾನು ಸೇಫ್' ಎಂದು ಕೊಂಡಿದ್ದರು ಅಕ್ಷತಾ. ಆದರೆ, ತಾನಿರುವುದು ಭ್ರಮೆಯಲ್ಲಿ ಎನ್ನುವುದು ಗೊತ್ತಾಗುತ್ತಿದ್ದಂತೆ, ಕಣ್ಣಾಲಿಗಳು ತುಂಬಿ ಬಂದಿವೆ. ಕ್ಯಾಪ್ಟನ್ ಆದವರು ನಾಮಿನೇಟ್ ಆಗುವ ಸ್ಪರ್ಧಿಗಳನ್ನು ವಾರ ಕಾಲ ಸೇಫ್ ಮಾಡುವ ಪವರ್ ಹೊಂದಿರುತ್ತಾರೆ. ಇದನ್ನು ಅನೌನ್ಸ್ ಮಾಡುತ್ತಿದ್ದಂತೆ ಅಕ್ಷತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

 

ಆದರೆ, ಉಲ್ಟಾ ಆಗಿದೆ ಅವರ ಗೆಸ್. ತುಸು ಕಾಲ ಯೋಚಿಸಿದ ರಾಕೇಶ್, ಒಗ್ಗರಣೆ ಡಬ್ಬಿ ಮುರುಳಿ ಹೆಸರನ್ನು ಘೋಷಿಸಿದ್ದಾರೆ. ಆಗಲೇ ಅಲ್ಲೊಂದು ಬೆಂಕಿಯ ಕಿಡಿ ಹೊತ್ತಿ ಕೊಂಡಿದೆ.

ಅಕ್ಷತಾ ನಾಮಿನೇಷನ್ ವೇಳೆ ಕವಿತಾ ಗೌಡಳನ್ನು ಆಯ್ಕೆ ಮಾಡಿದ್ದರು. ಆಮೇಲೆ ಒಂಟಿ ಭಾವ ಕಾಡುತ್ತಿದ್ದಂತೆ, ತಮ್ಮ ಕಾರ್ಯವನ್ನು ಡಿಫೆಂಡ್ ಮಾಡಿಕೊಂಡು ಜಯಶ್ರೀಯವರೊಂದಿಗೆ ಕಾಲ ಕಳೆಯಲು ಆರಂಭಿಸಿದ್ದರು. ಇದೀಗ ಮತ್ತೊಮ್ಮೆ ಇವರು ಪೂರ್ತಿ ಒಂಟಿಯಾಗುವಂತೆ ಕಾಣುತ್ತಿದ್ದಾರೆ.

ಇವರೇ ಆ ಮೂವರು: ಈ ನಡುವೆಯೇ Bigg Boss'ಇವರೇ ಆ ಮೂವರು' ಟಾಸ್ಕ್ ನೀಡಿದೆ. ಅದರಲ್ಲಿ ಒಬ್ಬರು ಚೀಟಿ ಎತ್ತಿ ಅದರಲ್ಲಿ ಒಂದ ಪದಕ್ಕೆ ಮೂವರ ಹೆಸರು ಹೇಳಬೇಕು. ಈ ಸಮಯವನ್ನು ಬಳಸಿಕೊಂಡ ಅಕ್ಷತಾ, ನಿವೇದಿತಾ ಗೌಡ ಬಗ್ಗೆ ಇದ್ದ ಕೆಟ್ಟ ಅಭಿಪ್ರಾಯ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ 'ನಾನು ಆಕೆಯನ್ನು ಲಾಸ್ಟ್ ಸೀಸನ್‌ನಲ್ಲಿಯೇ ನೋಡಿದ್ದೇನೆ. ಆಕೆ ಏನೂ ಮಾಡುವುದಿಲ್ಲ, ವೇಸ್ಟ್ ಬಾಡಿ. ಆಕೆಯೊಂದಿಗೆ ನಾನು ಟೀಂ ಮಾಡಿಕೊಂಡು ಆಡಲು ಇಷ್ಟವಿಲ್ಲ' ಎಂದು ಎಲ್ಲರ ಎದುರೇ ಹೇಳಿದ್ದಾರೆ.

ನೀಡಿದ ಟಾಸ್ಕನ್ನು ತಪ್ಪಾಗಿ ಅರ್ಥೈಸಿಕೊಂಡರುವುದಾಗಿ ಅಕ್ಷತಾ ತಪ್ಪನ್ನು ಎತ್ತ ತೋರಿಸಿದ್ದಾರೆ ರಾಕೇಶ್. ಒಟ್ಟಿನಲ್ಲಿ ಎಲ್ಲ ರೀತಿಯಲ್ಲಿಯೂ ರಾಕೇಶ್ ತಿರುಗಿ ಬಿದ್ದಿರುವುದನ್ನು ಗಮನಿಸಿದ ಅಕ್ಷತಾ, 'ನಾನು ರಾಕೇಶ್ ನಂಬಿ ತಪ್ಪು ಮಾಡಿದೆ. ನನ್ನನ್ನು ಬಿಟ್ಟು ಬೆರೆಯವರನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅದರಲ್ಲೂ ನಿವೇದಿತಾ ಗೌಡಳನ್ನು ಸಪೋರ್ಟ್ ಮಾಡಿದ್ದಾನೆ,' ಎಂದು ಜಗಳ ಆರಂಭಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?