
ಮುಂಬೈ(ಸೆ.17) ಈಗಾಗಲೇ ಸಾಕಷ್ಟು ನಟಿಯರು ಚಿತ್ರರಂಗದಲ್ಲಿಯ ಕಾಸ್ಟಿಂಗ್ ಕೌಚ್ ಹಾಗೂ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಎಲ್ಲರೆದುರೆ ಹೇಳಿಕೊಂಡಿದ್ದಾರೆ. ಈಗ ಯುವ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ತಾವು ಎದುರಿಸಿದ್ದ ಕರಾಳ ಅನುಭವ ಹೇಳಿದ್ದಾರೆ.
ಕೇವಲ ನಟಿಯರಿಗೆ ಮಾತ್ರವಲ್ಲ, ನಟರಿಗೂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಸಂದರ್ಭ ಎದುರಾಗಬಹುದು ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದೆ. ಹಾಗಾದರೆ ಆಯಷ್ಮಾನ್ ಹೇಳಿದ್ದೇನು? ಇಲ್ಲಿದೆ ಉತ್ತರ.
ಆಯುಷ್ಮಾನ್ ಖುರಾನಾ, ಆಡಿಷನ್ಗೆ ತೆರಳಿದ್ದರಂತೆ. ಈ ವೇಳೆ ನಿರ್ದೇಶಕನೊಬ್ಬ ಇವರ ಜತೆ ಅಶ್ಲೀಲತೆಯಿಂದ ಮಾತಾಡಿಸಿದ್ದಲ್ಲದೇ, ಇವರ ಪ್ರೈವೆಟ್ ಪಾರ್ಟ್ನ್ನು ತೋರಿಸುವಂತೆ ಕೇಳಿಕೊಂಡಿದ್ದರಂತೆ. ಇದರಿಂದ ತೀವ್ರ ಮುಜುಗರಕ್ಕೆಗುರಿಯಾದ ನಾನು ಅಲ್ಲಿಂದ ಹಿಂದಕ್ಕೆ ಬಂದೆ ಎಂದು ಬಾಲಿವುಡ್ ನಟ ಹೇಳಿದ್ದಾರೆ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಆತಂಕಕಾರಿ ಮಾಹಿತಿಯನ್ನು ಖುರಾನಾ ಹೊರಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.