ಅವಳ ಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ; ಬನ್ನಿ ಭಾಗಿಯಾಗಿ

By Web DeskFirst Published Nov 2, 2018, 4:11 PM IST
Highlights

ಅವಳ ಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ 2018 ಕಿರುಚಿತ್ರೋತ್ಸವ ಮತ್ತು ಸ್ತ್ರೀ ನೋಟದ ಸಂಭ್ರಮಾಚರಣೆ ಎಂಬ ವಿಷಯದ ಮೇಲೆ ಚರ್ಚಾ ಕಾರ್ಯಕ್ರಮವನ್ನು ನ. 03 ರಂದು ಕುಮಾರ ಪಾರ್ಕ್ ಬಳಿಯಿರುವ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.  ಖ್ಯಾತ ಚಿತ್ರನಿರ್ಮಾಪಕಿ ಕವಿತಾ ಲಂಕೇಶ್  10:30 ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  

ಬೆಂಗಳೂರು (ನ. 02): ಅವಳ ಹೆಜ್ಜೆ ವತಿಯಿಂದ ಕನ್ನಡತಿ ಉತ್ಸವ 2018 ಕಿರುಚಿತ್ರೋತ್ಸವ ಮತ್ತು ಸ್ತ್ರೀ ನೋಟದ ಸಂಭ್ರಮಾಚರಣೆ ಎಂಬ ವಿಷಯದ ಮೇಲೆ ಚರ್ಚಾ ಕಾರ್ಯಕ್ರಮವನ್ನು ನಾಳೆ ಕುಮಾರ ಪಾರ್ಕ್ ಬಳಿಯಿರುವ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.  ಖ್ಯಾತ ಚಿತ್ರನಿರ್ಮಾಪಕಿ ಕವಿತಾ ಲಂಕೇಶ್  10:30 ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  

ಕಾರ್ಯಕ್ರಮದ ಪೂರ್ಣ ವಿವರ ಹೀಗಿದೆ: 

10:30  ಉದ್ಘಾಟನೆ ಮತ್ತು ಮುಖ್ಯ ಅತಿಥಿ ಭಾಷಣ - ಕವಿತಾ ಲಂಕೇಶ್
 
11:15  ದರೋಜಿ - ರಚನೆ ಹಾಗು ನಿರ್ದೇಶನ, ಸುಗಂಧಿ ಗದಾಧರ
11:40  ಅಪ್ರಾಪ್ತ - ರಚನೆ ಹಾಗು ನಿರ್ದೇಶನ, ಕ್ಷೇಮಾ ಬಿ ಕೆ

12:00  ಚರ್ಚೆ 1: ಜನಪ್ರಿಯ ಪ್ರಾದೇಶಿಕ ಮಾಧ್ಯಮ ಮತ್ತು ಸ್ತ್ರೀ (ಭಾಗವಹಿಸುವವರು: ಕವಿತಾ ಲಂಕೇಶ್, ಚಲನಚಿತ್ರ ನಿರ್ಮಾಪಕಿ, ಮಲ್ಲಿಕಾ ಪ್ರಸಾದ್, ಚಲನಚಿತ್ರ, ಟಿವಿ ಹಾಗು ರಂಗಕರ್ಮಿ, ಜೋಗಿ, ಲೇಖಕ, ನಿರ್ವಹಣೆ: ಶೃತಿ ಶಾರದಾ, ಲೇಖಕಿ ಹಾಗು ರೇಡಿಯೋ ಜಾಕಿ)
 
12:50   ಬೆಳ್ಳಿ ತಂಬಿಗೆ - ನಿರ್ಮಾಪಕ ತಂಡ: ಮಹಿಮಾ ಗೌಡ, ಅನುಶ್ರೀ ಭರದ್ವಾಜ, ಹರಿಪ್ರಿಯಾ ಕೆ ರಾವ್, ಶ್ರದ್ಧಾ ಸುಮನ್
1:00   ಜೀವನ ರೇಖೆ - ರಚನೆ ಹಾಗು ನಿರ್ದೇಶನ, ಸವಿತಾ ಇನಾಂದಾರ್
1:12   ನಿರ್ಮಾಪಕರೊಡನೆ ಪ್ರಶ್ನೋತ್ತರ
    
2:00   ಕಾಜಿ - ರಚನೆ ಹಾಗು ನಿರ್ದೇಶನ, ಐಶಾನಿ ಶೆಟ್ಟಿ
2:20   ದಾಳಿ - ನಿರ್ದೇಶನ, ಮೇದಿನಿ ಕೆಳಮನೆ  
2:45  ನಿರ್ಮಾಪಕರೊಡನೆ ಪ್ರಶ್ನೋತ್ತರ
 
3:00  ಚರ್ಚೆ 2: ಪರಿಕ್ರಮಣೆ: ಕಥೆಯಿಂದ ಪರದೆಯವರೆಗೆ  (ಭಾಗವಹಿಸುವವರು: ಅನನ್ಯಾ ಕಾಸರವಳ್ಳಿ, ಚಲನಚಿತ್ರ ನಿರ್ದೇಶಕಿ, ರೂಪಾ ರಾವ್, ಚಲನಚಿತ್ರ ನಿರ್ದೇಶಕಿ, ಸಂಜ್ಯೋತಿ ವಿ ಕೆ, ಲೇಖಕಿ ಹಾಗು ಚಲನಚಿತ್ರ ನಿರ್ದೇಶಕಿ, ಪದ್ಮಲತ ರವಿ, ಪತ್ರಕರ್ತೆ ಹಾಗು ಚಲನಚಿತ್ರ ನಿರ್ದೇಶಕಿ)

3. 50  ಅನಲ, ನಿರ್ದೇಶನ, ಸಂಜ್ಯೋತಿ ವಿ ಕೆ  
4.45   ಮುಕ್ತಾಯ ಸಮಾರಂಭ

click me!