ಧ್ರುವ್ ವಿಕ್ರಮ್ ಜೊತೆ ಬ್ರೇಕಪ್ ಆಯ್ತಾ? ಅನುಪಮಾ ಪರಮೇಶ್ವರನ್ ಹೊಸ ಪೋಸ್ಟ್ ವೈರಲ್

Published : Aug 02, 2026, 06:09 PM IST
Anupama Dhruv Vikram

ಸಾರಾಂಶ

Anupama Parameswaran Breakup: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಪಮಾ ಪರಮೇಶ್ವರನ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ.

ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಪಮಾ ಪರಮೇಶ್ವರನ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ. ಕಳೆದ ಕೆಲವು ತಿಂಗಳುಗಳಿಂದ ತಮಿಳು ನಟ ಧ್ರುವ್ ವಿಕ್ರಮ್ ಜೊತೆಗಿನ ಪ್ರೇಮದ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದರೆ, ಇದೀಗ ಇಬ್ಬರೂ ದೂರವಾಗಿದ್ದಾರೆ ಎಂಬ ಸುದ್ದಿ ಸಿನಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಈ ಬ್ರೇಕಪ್ ವದಂತಿಗಳ ನಡುವೆ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕೆಲವು ಪೋಸ್ಟ್‌ಗಳು ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿವೆ. "ನನ್ನ ಜೀವನದ ಪ್ರತಿಯೊಂದು ನಿರ್ಧಾರಕ್ಕೂ ಯಾರ ಅನುಮತಿಯೂ ಬೇಕಿಲ್ಲ. ನಾನು ಎಲ್ಲಿ ಬೇಕಾದರೂ ಹೋಗಬಹುದು, ನನಗೆ ಇಷ್ಟವಾದದ್ದನ್ನು ಹಂಚಿಕೊಳ್ಳಬಹುದು. ಈಗ ನಾನು ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ" ಎಂಬ ಅರ್ಥದ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದರು.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಅನುಪಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಧ್ರುವ್ ವಿಕ್ರಮ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ವಿಚಾರವೂ ಅಭಿಮಾನಿಗಳ ಗಮನ ಸೆಳೆಯಿತು. ಇದರಿಂದ ಬ್ರೇಕಪ್ ವದಂತಿಗಳಿಗೆ ಮತ್ತಷ್ಟು ಬಲ ಸಿಕ್ಕಿತು. ಆದರೆ, ಈ ಬಗ್ಗೆ ಅನುಪಮಾ ಅಥವಾ ಧ್ರುವ್ ವಿಕ್ರಮ್ ಇಬ್ಬರೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇದರ ನಡುವೆಯೇ, ಇತ್ತೀಚೆಗೆ ನಡೆದ 'ಕ್ರೇಜಿ ಕಲ್ಯಾಣಂ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅನುಪಮಾ ಹೇಳಿದ ಕೆಲವು ಮಾತುಗಳು ಕೂಡ ಸಾಕಷ್ಟು ಚರ್ಚೆಯಾಗುತ್ತಿವೆ.

"ಈಗ ನಾನು ತುಂಬಾ ಸಂತೋಷವಾಗಿದ್ದೇನೆ. ಮಾನಸಿಕವಾಗಿ ತುಂಬಾ ಶಾಂತವಾಗಿದ್ದೇನೆ. ಕಳೆದ ಒಂದು ವರ್ಷ ನನ್ನ ಜೀವನದಲ್ಲಿ ಸಾಕಷ್ಟು ಕಠಿಣ ಸಂದರ್ಭಗಳು ಬಂದವು. ಆದರೆ ಈಗ ಎಲ್ಲವನ್ನೂ ದಾಟಿ ನೆಮ್ಮದಿಯಲ್ಲಿದ್ದೇನೆ. ಈ ಶಾಂತಿ ಮೊದಲೇ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಅವರು ಹೇಳಿದ್ದಾರೆ. ಅವರ ಈ ಹೇಳಿಕೆಗಳನ್ನು ಕೆಲವರು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ ವ್ಯಾಖ್ಯಾನಿಸುತ್ತಿದ್ದರೆ, ಮತ್ತಷ್ಟು ಮಂದಿ ಇದು ಜೀವನದಲ್ಲಿ ಎದುರಾದ ಸವಾಲುಗಳ ಬಗ್ಗೆ ಹೇಳಿರುವ ಸಾಮಾನ್ಯ ಅಭಿಪ್ರಾಯ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಭರ್ಜರಿ ಕಮ್‌ಬ್ಯಾಕ್?

ವೈಯಕ್ತಿಕ ಜೀವನದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದರೂ, ಅನುಪಮಾ ಮಾತ್ರ ತಮ್ಮ ವೃತ್ತಿಜೀವನದತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಸದ್ಯ ಅವರು ನಟಿಸಿರುವ 'ಕ್ರೇಜಿ ಕಲ್ಯಾಣಂ' ಚಿತ್ರದ ಟೀಸರ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಯೂ ಹೆಚ್ಚಿಸಿದೆ. ಕಳೆದ ವರ್ಷ ಬಿಡುಗಡೆಯಾದ ಅವರ ತೆಲುಗು ಚಿತ್ರ 'ಪರದಾ' ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದೀಗ 'ಕ್ರೇಜಿ ಕಲ್ಯಾಣಂ' ಚಿತ್ರದ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಅನುಪಮಾ ಪರಮೇಶ್ವರನ್ ಇದ್ದಾರೆ. ಇದೀಗ ಧ್ರುವ್ ವಿಕ್ರಮ್ ಜೊತೆಗಿನ ಸಂಬಂಧದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಇಬ್ಬರೂ ಅಧಿಕೃತವಾಗಿ ಯಾವಾಗ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣದಲ್ಲಿ ರಣಬೀರ್, ಯಶ್‌ಗೆ ಕೋಟಿ ಕೋಟಿ ಸಂಭಾವನೆ: ಈ ನಟ ಮಾತ್ರ ಹಣವೇ ಪಡೆಯಲಿಲ್ಲ!
'ಉಪೇಂದ್ರ' ಚಿತ್ರದ ಶೂಟಿಂಗ್ ನೆನಪು ಬಿಚ್ಚಿಟ್ಟ ನಟಿ ಪ್ರೇಮಾ: ರಿಯಲ್ ಸ್ಟಾರ್ ಬಗ್ಗೆ ಹೀಗಾ ಹೇಳೋದು?