
ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ಬಾಸ್ ಕಳೆದ ವರ್ಷ ಸಕತ್ ಸುದ್ದಿ ಮಾಡಿತ್ತು. ಇದಕ್ಕೆ ಕಾರಣ, ಇದರ ಸ್ಪರ್ಧಿ ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದೇನೆ ಎಂದಿದ್ದಕ್ಕೆ. ಬಿಗ್ಬಾಸ್ಮನೆಯಲ್ಲಿ ಇರುವಾಗಲೇ ತಾನು ಗರ್ಭಿಣಿಯಾಗಿರುವುದಾಗಿ ಇವರು ಹೇಳಿದರು. ಅಷ್ಟಕ್ಕೂ ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್ ಸುದ್ದಿಯಲ್ಲಿದ್ದರು. ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್ ಆಗಿತ್ತು. ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎಂದು ಸುದ್ದಿ ಮಾಡಿದ್ದರು. ತಾವು ಬಹುಶಃ ಗರ್ಭಿಣಿ ಇರಬಹುದು ಎಂದಿದ್ದ ಆಕೆ, ಹುಳಿ ತಿನ್ನಬೇಕೆಂದು ಅನಿಸುತ್ತಿದೆ, ತಮಗೆ ಪಿರಿಯಡ್ಸ್ ಮಿಸ್ ಆಗಿದೆ ಎಂದಿದ್ದರು. ಕೊನೆಗೆ ಅದು ಬಿಗ್ಬಾಸ್ನ ಗಿಮಿಕ್ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೇಳಿಕೇಳಿ ಬಿಗ್ಬಾಸ್ ಅದು. ಟಿಆರ್ಪಿ ಸ್ವಲ್ಪ ಕುಸಿಯುತ್ತಿದೆ ಎಂದಾಕ್ಷಣ ಪ್ರಚಾರಕ್ಕಾಗಿ ಯಾವ ಹಂತಕ್ಕೂ ಹೋಗಲು ರೆಡಿ, ಅದಕ್ಕಾಗಿಯೇ ಅಂಥ ಸ್ಪರ್ಧಿಗಳನ್ನೇ ಅಲ್ಲಿ ಆಯ್ಕೆ ಮಾಡಲಾಗುತ್ತದೆ.
ಇಂತಿಪ್ಪ ಅಂಕಿತಾ, ಈಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಲಾಫ್ಟರ್ ಕಿಚನ್ ರಿಯಾಲಿಟಿ ಷೋನಲ್ಲಿ ಈ ವಿಷಯವನ್ನು ಆಕೆ ರಿವೀಲ್ ಮಾಡಿದ್ದಾರೆ. ಕುತೂಹಲದ ವಿಷಯ ಏನೆಂದ್ರೆ, ತಮ್ಮ ಪತಿಗೂ ಮುನ್ನವೇ ಅವರು ಈ ವಿಷಯವನ್ನು ಈ ಷೋನ ಆ್ಯಂಕರ್ಗೆ ತಿಳಿಸಿದ್ದಾರೆ! ಇದಾಗಲೇ ಅಂಕಿತಾ ಮತ್ತು ಪತಿ ವಿಕ್ಕಿ ಜೈನ್ ಡಿವೋರ್ಸ್ ಆಗುತ್ತಾರೆ ಎಂದು ಗುಲ್ಲೆಬ್ಬಿತ್ತು. ಕೊನೆಗೆ ಅದು ಕೂಡ ಪ್ರಚಾರದ ಗಿಮಿಕ್ ಎಂದೇ ಹೇಳಲಾಗಿತ್ತು. ಇದೀಗ ಕಿಚನ್ ಷೋನವರೂ ಬಿಗ್ಬಾಸ್ನ ಪ್ರೆಗ್ನೆನ್ಸಿ ವಿಷ್ಯದಿಂದ ಪ್ರೇರೇಪಿತರಾಗಿ ಟಿಆರ್ಪಿಗೋಸ್ಕರ ಈಕೆ ಕೈಯಲ್ಲಿ ಹೀಗೆ ಹೇಳಿಸಿರಬಹುದು ಎಂದೇ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಗರ್ಭಿಣಿ ಎನ್ನುವ ವಿಷಯವನ್ನು ಹೇಗೆ ಹಾಸ್ಯಕ್ಕಾಗಿ, ಟಿಆರ್ಪಿಗಾಗಿ ಬಳಸಲಾಗುತ್ತಿದೆ ಎನ್ನುವುದು ಮಾತ್ರ ಅಸಹ್ಯಕರ ಎನ್ನುತ್ತಿದ್ದಾರೆ ನೆಟ್ಟಿಗರು.
ಈಕೆ ಮತ್ತು ಪತಿಯ ವಿಚಿತ್ರ ನಡವಳಿಕೆ, ಪ್ರಚಾರ ಪ್ರಿಯತೆ ಇಷ್ಟಕ್ಕೇ ನಿಂತಿಲ್ಲ. ಇಬ್ಬರೂ ಬಿಗ್ಬಾಸ್ನಲ್ಲಿ ಇದ್ದ ಸಂದರ್ಭದಲ್ಲಿ ಸದ್ದು ಮಾಡುತ್ತಲೇ ಇದ್ದವರು. ಒಂದು ಹಂತದಲ್ಲಿ ವಿಕ್ಕಿ ಅವರು ಪತ್ನಿಯ ಕುತ್ತಿಗೆ ಹಿಡಿದಿದ್ದರೆ, ಪತಿ ಅಂಕಿತಾ ತಮ್ಮ ಎರಡೂ ಚಪ್ಪಲಿಗಳನ್ನು ಪತಿಯತ್ತ ಬೀಸಿದ್ದರು. ಅಷ್ಟಕ್ಕೂ ಆಗಿದ್ದೇನೆಂದರೆ, ಬಿಗ್ಬಾಸ್ನ ಇತರ ಸ್ಪರ್ಧಿಗಳಾಗಿರುವ ಇಶಾ ಮಾಳವಿಯಾ, ಖಾಂಜಾದಿ, ಅನುರಾಗ್ ದೋವಲ್, ವಿಕ್ಕಿ ಜೈನ್ ಮತ್ತು ಮುನಾವರ್ ಫರುಕಿ ನಡುವೆ ಆಹಾರದ ಬಗ್ಗೆ ತೀವ್ರ ವಾಗ್ವಾದ ಮತ್ತು ಜಗಳ ನಡೆದಿತ್ತು. ವಿಕ್ಕಿ ಜೈನ್ ಅವರ ರೂಮ್‌ಮೇಟ್‌ಗಳು ಬೇಯಿಸಿದ ಆಹಾರವನ್ನು ಬೇಯಿಸಿದ ಆಹಾರವನ್ನು ಖಾಂಜಾದಿಯವರು ತಿನ್ನುವಂತೆ ವಿಕ್ಕಿ ಮನವೊಲಿಸಿದರು, ಇದರೊಂದಿಗೆ ಅಂಕಿತಾ ಲೋಖಂಡೆ ತಾಳ್ಮೆ ಕಳೆದುಕೊಂಡು ಪತಿ ವಿಕ್ಕಿ ಜೈನ್ ಮೇಲೆ ಹಲ್ಲೆ ನಡೆಸಿದ್ದರು.
ಇದೇ ವಿಷಯದಲ್ಲಿ ಇಶಾ ಮತ್ತು ಖಾಂಜಾದಿ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಆಹಾರವನ್ನು ಯಾರು ಯಾರು ತಿಂದರು ಎಂಬ ಬಗ್ಗೆ ಚರ್ಚೆ ನಡೆದಾಗ ಸ್ಪರ್ಧಿ ಇಶಾ ಮಾಳವಿಯಾ ಮತ್ತು ವಿಕ್ಕಿ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಅಂಕಿತಾ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಅಂಕಿತಾ ಪತಿ ವಿಕ್ಕಿ ಜೈನ್ ಅಂಕಿತಾಳ ಕತ್ತು ಹಿಡಿದು ಎಳೆದಿದ್ದರು, ಆಗ ಅಂಕಿತಾ ಅವರನ್ನು ತಳ್ಳಿದ್ದರು. ಆಗ ವಿಕ್ಕಿ ಆಕೆಯನ್ನು ಹಿಂದಿನಿಂದ ಹಿಡಿದಿದ್ದರು. ಈ ಸಂದರ್ಭದಲ್ಲಿ ಅಂಕಿತಾ ವಿಕ್ಕಿಯನ್ನು ಹೊಡೆಯಲು ಪ್ರಾರಂಭಿಸಿದಾಗ ಅವರು ಓಡಿ ಹೋದರು. ಸುಮ್ಮನಿರದ ಅಂಕಿತಾ, ತಮ್ಮ ಎರಡೂ ಚಪ್ಪಲಿಗಳನ್ನು ತೆಗೆದು ವಿಕ್ಕಿಗೆ ಹೊಡೆದರು. ಇದು ಕೂಡ ಸ್ಕ್ರಿಪ್ಟೆಡ್ ಎನ್ನುವುದು ಜಾಣ ವೀಕ್ಷಕರಿಗೆ ತಿಳಿಯದೇ ಇರುವ ವಿಷಯವೇನೂ ಆಗಿರಲಿಲ್ಲ. ಈಗಲೂ ಹಾಗೆಯೇ ಇರಬಹುದು ಎನ್ನುವುದು ನೆಟ್ಟಿಗರ ಅಭಿಮತ. ಮೂರೂ ಬಿಟ್ಟವರು…. ಎಂದು ಅದಕ್ಕೇ ಹೇಳುವುದು ಎಂದೂ ಕೆಲವರು ಕಮೆಂಟ್ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.