ಸತೀಶ್ ಜೊತೆಗಿನ ಸಂಬಂಧದ ಕುರಿತು ನಟಿ ಅನಿತಾ ಭಟ್ ಸುವರ್ಣನ್ಯೂಸ್'ಗೆ ಹೇಳಿದ್ದೇನು?

Published : Mar 27, 2017, 10:14 AM ISTUpdated : Apr 11, 2018, 12:51 PM IST
ಸತೀಶ್ ಜೊತೆಗಿನ ಸಂಬಂಧದ ಕುರಿತು ನಟಿ ಅನಿತಾ ಭಟ್ ಸುವರ್ಣನ್ಯೂಸ್'ಗೆ ಹೇಳಿದ್ದೇನು?

ಸಾರಾಂಶ

ಸತೀಶ್ ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರಿಂದ ತನ್ನ ಬಳಿ ಅವರು ಬರುತ್ತಿದ್ದರು ಎಂದು ನಟಿ ಅನಿತಾ ಭಟ್ ಹೇಳಿಕೊಂಡಿದ್ದಾರೆ.

ಬೆಂಗಳೂರು(ಮಾ. 27): "ನಮ್ಮದು ಯೂಸ್ ಅಂಡ್ ಥ್ರೋ ಸಂಬಂಧವಾಗಿರಲಿಲ್ಲ. ಟೈಮ್ ಪಾಸ್'ಗೆ ನನ್ನೊಂದಿಗೆ ಸಂಬಂಧ ಬೆಳೆಸುವಂಥ ವ್ಯಕ್ತಿ ಅವರಾಗಿರಲಿಲ್ಲ ಎಂಬುದು ಸತ್ಯ. ಪತ್ನಿಯಿಂದ ನೆಮ್ಮದಿ ಇರಲಿಲ್ಲವಾದ್ದರಿಂದ ಸತೀಶ್ ನನ್ನ ಬಳಿಗೆ ಬರುತ್ತಿದ್ದರು." - ಇದು ನಟಿ ಅನಿತಾ ಭಟ್ ಅವರು ಸುವರ್ಣನ್ಯೂಸ್ ವಾಹಿನಿಗೆ ಹೇಳಿಕೊಂಡ ಮಾತುಗಳು.

ಅನಿತಾ ಭಟ್ ಜೊತೆ ಮೂರ್ನಾಲ್ಕು ವರ್ಷದಿಂದ ಲಿವ್-ಇನ್ ರಿಲೇಶನ್'ಶಿಪ್ ಹೊಂದಿದ್ದ ಸತೀಶ್ ಈಗ್ಗೆ ಆರೇಳು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಸತೀಶ್ ವಿವಾಹಿತನಾಗಿರುವ ಸುದ್ದಿ ಅನಿತಾ ಭಟ್'ಗೆ ತಿಳಿದ ಬಳಿಕ ಅವರಿಬ್ಬರ ನಡುವೆ ಆಗಾಗ್ಗೆ ಜಗಳವಾಗಿದೆ. ಹೀಗಾಗಿ ಸತೀಶ್ ದೂರ ಹೋಗಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಸುವರ್ಣನ್ಯೂಸ್ ಜೊತೆ ಸ್ಪಷ್ಟನೆ ನೀಡಿರುವ ನಟಿ ಅನಿತಾ ಭಟ್, "ನಾನು ಬೇಡವೆಂದು ಸತೀಶ್ ಅವರೇ ಬಾಯಾರೇ ಹೇಳಿದರೆ ಸುಮ್ಮನಾಗ್ತೀನಿ. ಅವರು ಏನು ಹೇಳದೇ ಹೋಗಿರುವುದು ನನ್ನ ಆತಂಕಕ್ಕೆ ಕಾರಣವಾಗಿದೆ" ಎಂದು ತಿಳಿಸಿದ್ದಾರೆ.

ಸುದ್ದಿ ಮಾಡಬೇಕೆಂದಿದ್ದರೆ...
ಸತೀಶ್ ಬಿಟ್ಟುಹೋಗಿರುವ ವಿಚಾರವ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರುವುದರ ಬಗ್ಗೆ ಅನಿತಾ ಭಟ್ ಅಚ್ಚರಿ ವ್ಯಕ್ತಪಡಿಸಿದ್ದಾರೆ, "ನಾನು ಸುದ್ದಿ ಮಾಡಬೇಕೆಂದಿದ್ದರೆ ಆರೇಳು ತಿಂಗಳು ಕಾಯಬೇಕಿರಲಿಲ್ಲ. ಆಗಲೇ ಸುದ್ದಿ ಮಾಡುತ್ತಿದ್ದೆ. ಸತೀಶ್ ಮೇಲೆ ನನಗೆ ನಂಬಿಕೆ ಇದೆ. ಯಾವುದೋ ಒತ್ತಡಕ್ಕೊಳಗಾಗಿ ಅವರು ನನ್ನಿಂದ ದೂರವಾಗಿದ್ದಾರೆ" ಎಂದು ಅನಿತಾ ಭಟ್ ಹೇಳಿದ್ದಾರೆ.

ಸತೀಶ್ ಪತ್ನಿ ಬಗ್ಗೆ:
ಸತೀಶ್ ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರಿಂದ ತನ್ನ ಬಳಿ ಅವರು ಬರುತ್ತಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. "ಸತೀಶ್ ಪ್ರತೀ ದಿನ ಬೆಳಗ್ಗೆ ನನ್ನ ಮನೆಗೆ ಬಂದು ತಿಂಡಿ ತಿಂದು ಆಫೀಸಿಗೆ ಹೋಗುತ್ತಿದ್ದರು. ಸಂಜೆ ಆಫೀಸ್'ನಿಂದ ನೇರ ನನ್ನ ಮನೆಗೆ ಬಂದು ಊಟ ಮಾಡಿಕೊಂಡು ಮನೆಗೆ ಹೋಗುತ್ತಿದ್ದರು. ಎರಡು ವರ್ಷಗಳಿಂದಲೂ ಇದೇ ರೀತಿ ನಡೆಯುತ್ತಿತ್ತು. ಆತನ ಪತ್ನಿ ಅದು ಹೇಗೆ ಸುಮ್ಮನಿದ್ದರು? ಎಂಬುದು ನನ್ನ ಪ್ರಶ್ನೆ" ಎಂದು ಅನಿತಾ ಕೇಳಿದ್ದಾರೆ.

ನಿಜವಾದ ಪ್ರೀತಿ:
"ನನಗೆ ಸತೀಶ್ ಬಿಟ್ಟು ಬೇರೆ ದಿಕ್ಕಿಲ್ಲ ಅಂತೇನಲ್ಲ. ಅವರೇನೂ ಪರ್ಫೆಕ್ಟ್ ಮ್ಯಾನ್ ಅಂತ ಹೇಳ್ತಿಲ್ಲ. ಆದರೆ ನಮ್ಮಿಬ್ಬರ ಮಧ್ಯೆ ನಿಜವಾದ ಪ್ರೀತಿ ಇದೆ. ನನ್ನ ಕೆರಿಯರ್, ಸಿನಿಮಾಗಿಂದ ಅವರಿಗೇ ಪ್ರಯಾರಿಟಿ ಕೊಟ್ಟಿದ್ದೇನೆ. ಇದು ಅವರ ಮೇಲೆ ನನಗಿರುವ ಪ್ರೀತಿಗೆ ಸಾಕ್ಷಿಯಾಗಿದೆ" ಎಂದು ಅನಿತಾ ಭಟ್ ಅಭಿಪ್ರಾಯಪಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?
Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?