
ಆ್ಯಂಕರ್ ಸುಮಾ ಮತ್ತು ರಾಜೀವ್ ಕನಕಾಲ ಟಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ರಾಜೀವ್ ಕನಕಾಲ ಅವರಿಗಿಂತ ಸುಮಾ ಅವರಿಗೆ ಹೆಚ್ಚು ಅಭಿಮಾನಿಗಳಿದ್ದಾರೆ. ಹಲವು ಕಡೆ ರಾಜೀವ್ ಅವರನ್ನು 'ಸುಮಾ ಅವರ ಪತಿ' ಎಂದೇ ಜನರು ಗುರುತಿಸುತ್ತಾರೆ. ಆದರೆ ಈ ರೀತಿ ಕರೆಯುವುದು ತಮಗೆ ಇಷ್ಟವಿಲ್ಲ ಎಂದು ರಾಜೀವ್ ಕನಕಾಲ ಹೇಳಿಕೊಂಡಿದ್ದಾರೆ.
ಸುಮಾ ತೆಲುಗು ಚಿತ್ರರಂಗಕ್ಕೆ ಬರುವ ಮುನ್ನವೇ ರಾಜೀವ್ ಕನಕಾಲ ಕುಟುಂಬಕ್ಕೆ ಟಾಲಿವುಡ್‌ನಲ್ಲಿ ಒಳ್ಳೆಯ ಹೆಸರಿತ್ತು. ರಾಜೀವ್ ಜೊತೆ ಮದುವೆಯಾದ ನಂತರ ಸುಮಾ ಅವರಿಗೂ ಉತ್ತಮ ಮನ್ನಣೆ ಸಿಕ್ಕಿತು. ಆದರೆ, ನಿರೂಪಕಿಯಾಗಿ ಸುಮಾ ಗಳಿಸಿದ ಯಶಸ್ಸು, ಹೆಸರು ಮತ್ತು ಆಸ್ತಿಯನ್ನು ಕಳೆದ 20 ವರ್ಷಗಳಲ್ಲಿ ರಾಜೀವ್ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪತ್ನಿಯ ಹೆಸರಿನಿಂದ ಗುರುತಿಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲ.
ತನ್ನನ್ನು 'ಸುಮಾ ಗಂಡ' ಎಂದು ಗುರುತಿಸುವುದು ಇಷ್ಟವಿಲ್ಲ ಎಂದು ರಾಜೀವ್ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, 'ಶೂಟಿಂಗ್‌ನಲ್ಲಿದ್ದಾಗ ವೃದ್ಧೆಯೊಬ್ಬರು ಬಂದು ನನ್ನನ್ನು ಮಾತನಾಡಿಸಿದರು. ಆದರೆ ಅವರ ಪತಿಗೆ ನಾನು ಯಾರೆಂದು ಗೊತ್ತಾಗಲಿಲ್ಲ. ಆಗ ಆ ಮಹಿಳೆ 'ಇವರು ಸುಮಾ ಅವರ ಗಂಡ' ಎಂದರು. ನನಗೆ ಸಿಕ್ಕಾಪಟ್ಟೆ ಕೋಪ ಬಂತು.
ಅಲ್ಲೇ ಇದ್ದ ರಾಜಾ ರವೀಂದ್ರ ಬಳಿ, ಈ ವರ್ಷ ಈ ಹೆಸರು ಬದಲಾಯಿಸಿಕೊಳ್ಳುತ್ತೇನೆ ಎಂದೆ. ಅದಕ್ಕೆ ರಾಜಾ ರವೀಂದ್ರ, 'ಸುಮಾ ಗಂಡ ಅಂದ್ರೂ ಪರವಾಗಿಲ್ಲ, ಸುಮಾ ಬಿಟ್ಟುಹೋದ ಗಂಡ ಅನ್ನಿಸಿಕೊಳ್ಳಬೇಡ' ಎಂದು ತಮಾಷೆ ಮಾಡಿದರು' ಎಂದು ರಾಜೀವ್ ವಿವರಿಸಿದ್ದಾರೆ. ಕೆಲ ತಿಂಗಳ ಹಿಂದೆ ಸುಮಾ ಮತ್ತು ರಾಜೀವ್ ದೂರವಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ರಾಜೀವ್ ಸ್ಪಷ್ಟನೆ ನೀಡಿದ್ದಾರೆ.
'ತಾಯಿ ನಿಧನದ ನಂತರ, ತಂದೆ ದೇವದಾಸ್ ಕನಕಾಲ ಅವರು ಮಣಿಕಾಂಡದಲ್ಲಿರುವ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಆಗ ನಾನು, ಸುಮಾ ಮತ್ತು ಮಕ್ಕಳು ಬೇರೆಡೆ ವಾಸವಿದ್ದೆವು. ತಂದೆಗೆ ಜೊತೆಯಾಗಿರಲು ನಾನು ಕೆಲವು ಕಾಲ ಮಣಿಕಾಂಡ ಮನೆಯಲ್ಲಿದ್ದೆ. ಆಗ ನಾನು ಮತ್ತು ಸುಮಾ ಪ್ರತ್ಯೇಕವಾಗಿರಬೇಕಾಯಿತು. ಇದನ್ನೇ ಕೆಲವರು ನಾವು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಬರೆದರು. ಆದರೆ ನಮಗೆಂದೂ ವಿಚ್ಛೇದನದ ಆಲೋಚನೆ ಬಂದಿಲ್ಲ' ಎಂದು ರಾಜೀವ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.