ನಮ್ಗೆ ಒಳ್ಳೆ ಸಿನಿಮಾ ನೋಡೋದು ಗೊತ್ತು: ಪ್ರೇಮ್ ವಿರುದ್ಧ ಆಕ್ರೋಶ

Published : Oct 22, 2018, 11:11 AM IST
ನಮ್ಗೆ ಒಳ್ಳೆ ಸಿನಿಮಾ ನೋಡೋದು ಗೊತ್ತು: ಪ್ರೇಮ್ ವಿರುದ್ಧ ಆಕ್ರೋಶ

ಸಾರಾಂಶ

ಭಾರೀ ಬಜೆಟ್ ಸಿನಿಮಾವೆಂದು ಸ್ಯಾಂಡಲ್‌ವುಡ್ ದಿಗ್ಗಜರಾದ ಡಾ.ಶಿವರಾಜ್‌ಕುಮಾರ್ ಹಾಗೂ ಕಿಚ್ಚಾ ಸುದೀಪ್ ಅಭಿನಯದ 'ದಿ ವಿಲನ್' ಬಿಡುಗಡೆಯಾದಾಗಿನಿಂದಲೂ ಚಲನಚಿತ್ರ ರಸಿಕರ ಆಕ್ರೋಶ ಭುಗಿಲೆದ್ದಿದೆ. ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾ ಬಗ್ಗೆ ಟ್ರೋಲ್ ಮಾಡುತ್ತಿರುವ ಕನ್ನಡಿಗರು, ಪ್ರೇಮ್‌ಗೆ ಬಹಿರಂಗ ಪತ್ರ ಬರೆದಿದ್ದು ಹೀಗೆ...

ಬೆಂಗಳೂರು (ಅಕ್ಟೋಬರ್ 22): ಪ್ರೇಮ್ ನಿರ್ದೇಶನದ, ಡಾ.ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಬಿಡುಗಡೆಯಾದಾಗಿನಿಂದಲೂ ಈ ಚಿತ್ರದ ವಿರುದ್ಧ ಚಿತ್ರ ಪ್ರೇಮಿಗಳು ಒಂದಲ್ಲ ಒಂದು ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯಂತೂ ಪ್ರೇಮ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. 2006ರಿಂದಲೂ ಪ್ರೇಮ್ ಅಪ್‌ಡೇಟ್ ಆಗಿಲ್ಲವೆಂದು ಕನ್ನಡ ಚಿತ್ರ ಪ್ರೇಮಿಗಳು ಅಣಕುಸುತ್ತಿದ್ದಾರೆ. ಅದರಲ್ಲಿಯೂ ಶಿವರಾಜ್‌ಕುಮಾರು ಮೇಲೆ ಕಿಚ್ಚ ಸುದೀಪ್ ಕೈ ಮಾಡಿರುವುದರ ವಿರುದ್ಧ, ಶಿವರಾಜ್‌ಕುಮಾರ್ ಅಭಿಮಾನಿಗಳು ಅತೀವ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರೇಮ್ ವಿರುದ್ಧದ ವಾಗ್ದಾಳಿ ಮುಂದುವರಿಯುತ್ತಿದೆ.

ದಿ ವಿಲನ್ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಣ್ಣನ ಅಭಿಮಾನಿಯೆಂದು ಹೇಳಿಕೊಂಡು ರಾಜು ಮೈಸೂರು ಎಂಬುವವರು ಪ್ರೇಮ್‌ಗೆ ಓಪನ್ ಲೆಟರ್ ಬರೆದಿದ್ದು, 'ಒಳ್ಳೊಳ್ಳೆ ನಿರ್ದೇಶಕರ ಚಿತ್ರ ನೋಡಿ ಬೆಳೆದ ನಮಗೆ ಸಿನಿಮಾ ನೋಡುವುದನ್ನು ಹೇಳಿಕೊಡುವ ಅಗತ್ಯವಿಲ್ಲ,' ಎಂದು ಪತ್ರದಲ್ಲಿ ತಿಳಿಸಿದ್ದು, ಪತ್ರದ ಪೂರ್ಣ ಪಾಠ ಹೀಗಿದೆ...

"
ನಿರ್ದೇಶಕ ಪ್ರೇಮ್ ರವರಿಗೇ,

ಸಾರ್ ನನ್ನ ಹೆಸರು ರಾಜು ಅಂತ ಮೈಸೂರಿನಿಂದ. ನನ್ನದೊಂದು ಮನವಿ.

  ಸಿನೆಮಾವನ್ನು ಸಿನಿಮಾತರ ನೋಡೋದು ಅಂದ್ರೆ ಹೇಗೆ ಸಾರ್?
ನೀವು 'ದಿ ವಿಲನ್' ಚಿತ್ರನಾ ಸಿನಿಮಾತರ ತೆಗೆದಿದ್ದೀರಾ? ಚಿತ್ರದ ಕಡೇ ದೃಶ್ಯದಲ್ಲಿ ಶಿವಣ್ಣನಿಗೇ ಸುದೀಪ್ ಯಾರು ಅಂಥಾ ಗೂತ್ತಿದ್ದರಿಂದ ಸುದೀಪ್ ಶಿವಣ್ಣನಿಗೇ ಹೂಡೆದರೂ, ಶಿವಣ್ಣ ತಿರುಗಿಸಿ ಹೂಡೆಯೋಲ್ಲಾ ಸರೀ !!  

ನಂತರ  ಸುದೀಪ್‌ಗೇ ಶಿವಣ್ಣ ಯಾರು ಅಂಥ ತಿಳಿಯುತ್ತದೆಯಲ್ಲವೇ? ತನ್ನನ್ನ ತಾಯಿ ಬಳಿ ಸೇರಿಸುವುದಕ್ಕಾಗಿ ಇಷ್ಟೆಲ್ಲಾ ಕಷ್ಟಪಟ್ಟಿದ್ದು ಅಂಥಾ ತಿಳಿದ ಮೇಲೂ ಸುದೀಪ್ ಕ್ಷಮೆಯಾಚಿಸುವುದಿಲ್ಲಾ ಏಕೆ ? ಪ್ರೇಮ್ ಸಾರ್  ಉತ್ತರಿಸಿ.

ಸುದೀಪ್‌ಗೇ ಶಿವಣ್ಣ ಅಣ್ಣನ ಸಮಾನ ಅಂಥಾ ತಿಳಿದ ಮೇಲೂ ತಾನು ಕೈ ಮಾಡಿದ್ದಕ್ಕೆ ಪಶ್ಚಾತ್ತಾಪನೇ ಪಡಲ್ಲಾ ಸಾರ್, ಕ್ಷಮೆನೂ ಕೇಳಲ್ಲಾ,  ಇದು ನಿಮ್ಮ ನಿರೂಪಣೆ ? ಇದು ಸಿನಿಮಾ ? ಸಿನಿಮಾನಾ ಸಿನಿಮಾತರ ನೀವು ತೆಗೆದಿದ್ದೀರಾ ಸಾರ್? ಕನ್ನಡಿಗರು ಪುಟ್ಟಣ್ಣಕಣಗಾಲ್, ಸಿಗದ್ಧಲಿಂಗಯ್ಯ , ದೂರೆ ಭಗವಾನ್ ಹಾಗೂ ಈ ತಲೆಮಾರಿನ ಉಪೇಂದ್ರ, ಸೂರಿ, ಯೋಗರಾಜ್ ಭಟ್‌ರಂತಹ ನಿರ್ದೇಶಕರ ಸಿನಿಮಾಗಳನ್ನ ನೋಡಿ ಬೆಳೆದವರು. ನಮಗೇ ನಿಮ್ಮಂತ ಯಕಶ್ಚಿತ್ ನಿರ್ದೇಶಕನಿಂದ ಸಿನಿಮಾ ನೋಡುವ ಪಾಠದ ಅವಶ್ಯಕತೆ ಇಲ್ಲ. 

"
 ಜೊತೆಗೇ ನಿಮ್ಮ ಮೇಲೇ ನಮಗೇ ದ್ವೇಷವೂ ಇಲ್ಲ, ಸುದೀಪ್ ಮೇಲೆ ಬೇಸರವೂ ಇಲ್ಲ. ಕನ್ನಡದ ಮೇರು ನಟರಾದ ನಮ್ಮೆಲ್ಲರ ಪ್ರೀತಿಯಾ ಶಿವಣ್ಣನನ್ನು ಅವರ ಇನೋಸೆನ್ಸಿಯನ್ನು, ವಿಶ್ವಾಸವನ್ನು ನಿಮ್ಮಂತ ಅಯೋಗ್ಯ / ಅಪ್ರಯೋಜಕ ನಿರ್ದೇಶಕನೂಬ್ಬ ಈ ರೀತಿ ದುರುಪಯೋಗ ಪಡಿಸಿಕೂಳ್ಳುತ್ತಿರುವುದು ಶಿವಣ್ಣನ ಅಸಂಖ್ಯಾತ ಅಭಿಮಾನಿಗಳಿಗೆ ನೋವುಂಟಾಗಿದೆ. 

ತಿಳಿಯಿತೆ ಪ್ರೇಮ್ ಸಾರ್, 

 ನೆನ್ ಮೊನ್ನೆ ಬಂದವ್‌ರೆಲ್ಲ ಸಿನಿಮಾ ನೋಡೋದ್ ಕಲಿಸ್ತಾರೋ ?? 
 ನಮಗೆ ಒಳ್ಳೆ ಸಿನಿಮಾಗಳನ್ನ ನೋಡೋದು ಗೂತ್ತು ಕಣಣ್ಣಾ !!!  

 
- ವಂದನೆಗಳು.  
- ಶಿವಣ್ಣನ ಅಭಿಮಾನಿ. 

-ರಾಜು ಮೈಸೂರು
9886441799 
ಪ್ರೇಮ್‌ಗೆ ತಲುಪುವ ತನಕ ಈ ಮೆಸೇಜ್ ಓಡ್‌ತಾ ಇರ್ಲೀ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!