
‘ವಾಸ್ತುಪ್ರಕಾರ’ ಹಾಗೂ ‘ರಾಕೆಟ್’ ಚಿತ್ರಗಳ ನಂತರ ‘ಕಾಜಿ’ ಕಿರುಚಿತ್ರ ನಿರ್ದೇಶಿಸಿ ಸುದ್ದಿಯಲ್ಲಿದ್ದ ಐಶಾನಿ ಶೆಟ್ಟಿ, ಈಗ ರವೀನ್ ನಿರ್ದೇಶನದ ‘ನಡುವೆ ಅಂತರವಿರಲಿ’ ಹೆಸರಿನ ಚಿತ್ರದ ಮೂಲಕ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಸಿನಿಮಾ ಶುರುವಾಗಿ ಎರಡೂವರೆ ವರ್ಷಗಳ ಆಗಿವೆ.
ಸದ್ಯಕ್ಕೀಗ ಅದು ರಿಲೀಸ್ ರೆಡಿ ಆಗಿದೆ. ಯೋಗರಾಜ್ ಭಟ್ಟರ ಶಿಷ್ಯ ರವೀನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಖ್ಯಾತ್ ಕುಮಾರ್ ನಾಯಕ ನಟ. ಈ ಚಿತ್ರ ಟೀನೇಜ್ ಲವ್‌ಸ್ಟೋರಿ. ಹಾಗಾಗಿ ಚಿತ್ರದ ಫೋಟೋ ಹಾಗೂ ಹಾಡಿನ ದೃಶ್ಯಗಳು ಬೋಲ್ಡ್ ಆಗಿವೆ ಎನ್ನುವುದು ನಿರ್ದೇಶಕರ ಮಾತು.
ಈ ಬಗ್ಗೆ ಇಶಾನಿ ಹೇಳಿದ್ದು:
* ನಾನು ಮಾಸ್ಟರ್ ಡಿಗ್ರಿ ಓದುತ್ತಿದ್ದ ದಿನಗಳಲ್ಲಿ ಒಪ್ಪಿಕೊಂಡ ಸಿನಿಮಾ ಇದು. ಎಜುಕೇಷನ್ ಮುಗಿಸಬೇಕು ಅಂದಾಗಲೂ, ಟೈಮ್ ಹೊಂದಿಸಿಕೊಂಡು ಸಿನಿಮಾ ಮಾಡ್ತೇವೆ. ಒಪ್ಪಿಕೊಳ್ಳಿ ಅಂತ ಹೇಳಿದ್ದಕ್ಕಾಗಿ ಆ ಸಿನಿಮಾ ಒಪ್ಪಿಕೊಳ್ಳಬೇಕಾಗಿಬಂತು. ಜತೆಗೆ ಕತೆ ಕೂಡ ಚೆನ್ನಾಗಿತ್ತು.
* ನಾನಿಲ್ಲಿ ಓರ್ವ ಮಧ್ಯಮ ವರ್ಗದ ಹುಡುಗಿ. ಪಿಯು ಕಾಲೇಜು ವಿದ್ಯಾರ್ಥಿನಿ. ಸಾಮಾನ್ಯವಾಗಿ ಆ ಹೊತ್ತಿನ ಕಾಲೇಜು ದಿನಗಳು ಹೇಗಿರುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಭವಿಷ್ಯದ ಜೀವನದ ಕಲ್ಪನೆಯೂ ಇರೋದಿಲ್ಲ,
ಬದಲಿಗೆ ಪ್ರೀತಿ-ಪ್ರೇಮ ಅಂತೆಲ್ಲ ತಿರುಗಾಡುವ ಹುಚ್ಚುಕೋಡಿ ಮನಸ್ಸು ಅದು.
* ಅಂಥದ್ದೇ ವಯಸ್ಸಿನ ವಯಸ್ಸಿನ ಹುಡುಗ-ಹುಡುಗಿಯ ನಡುವಿನ ಪ್ರೇಮ ಕತೆ. ಅಂಥದ್ದೊಂದು ಪ್ರೇಮಕತೆ ಹೇಗಿರುತ್ತೆ ಅನ್ನೋದನ್ನು ನೈಜವಾಗಿ ತೋರಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಹಾಡಿನ ಸನ್ನಿವೇಶಗಳಲ್ಲಿ ಸ್ವಲ್ಪ ಬೋಲ್ಡ್ ಆಗಿ ಕಾಣಿಸಿಕೊಳ್ಳ ಬೇಕಾಗಿ ಬಂತು. ಆದ್ರೆ, ಸಿನಿಮಾ ನೋಡಿದಾಗ ಅದು ಮುಜುಗರ ತರಿಸಲು ಸಾಧ್ಯವೇ ಇಲ್ಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.