
ಮುಂಬೈ (ಅ.31) ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇತರ ನಟ ನಟಿಯರಂತೆ ಬ್ರ್ಯಾಂಡ್ ಅಂಬಾಸಿಡರ್, ಒಂದಷ್ಟು ಮೊತ್ತ ಹೂಡಿಕೆ ಮಾಡಿ ತಮ್ಮ ಪಾಡಿಗೆ ಇರುವ ನಟಿಯಲ್ಲ. ಇದು ತಮನ್ನಾ ಹುಟ್ಟು ಹಾಕಿದ ಬ್ರ್ಯಾಂಡ್. ಇದೀಗ ಈ ಬ್ರ್ಯಾಂಡ್ ದೊಡ್ಡ ಕಂಪನಿಯಾಗಿ ಬೆಳೆದು ನಿಂತಿದೆ. ತಮನ್ನಾ ಫೈನ್ ಜ್ಯುವೆಲ್ಲರಿ ಉದ್ಯಮ ಆರಂಭಿಸಿರುವ ನಟಿ ಇದೀಗ ಯಶಸ್ವಿ ಮಹಿಳಾ ಉದ್ಯಮಿಯಾಗಿ ಗಮನಸೆಳೆದಿದ್ದಾರೆ. ತಮನ್ನಾ ಫೈನ್ ಜ್ಯುವೆಲ್ಲರಿಯಲ್ಲಿ ನಟಿ ತಮನ್ನಾ ಕ್ರಿಯೇಟೀವ್ ಡೈರೆಕ್ಟರ್ ಆಗಿದ್ದಾರೆ.
2024ರಲ್ಲಿ ಆರಂಭಿಸಿದ ಈ ತಮನ್ನಾ ಫೈನ್ ಜ್ಯುವೆಲ್ಲರಿ ಇದೀಗ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಹಲವು ನಟ ನಟಿಯರಂತೆ ಉದ್ಯಮಕ್ಕೆ ಕಾಲಿಡದೇ ಕೇವಲ ಹೂಡಿಕೆ ಮಾಡಿ ಲಾಭ ನಷ್ಟದ ಲೆಕ್ಕಾಚಾರ ಹಾಕುವ ನಟಿ ತಮನ್ನಾ ಅಲ್ಲ. ಇದು ತಮನ್ನಾ ಹುಟ್ಟು ಹಾಕಿದ ಬ್ರ್ಯಾಂಡ್ ಕಂಪನಿ. ಇಲ್ಲಿ ಜ್ಯುವೆಲ್ಲರಿ ಡಿಸೈನ್, ಮೇಕಿಂಗ್, ಚೆಕೆಂಗ್ ಸೇರಿದಂತೆ ಎಲ್ಲಾ ಕೆಲಸಗಳನ್ನು ತಮನ್ನಾ ಮಾಡುತ್ತಾರೆ. ರಿಟೇಲ್ ಶಾಪ್ಗೆ ತಲುಪವರೆಗೂ ತಮನ್ನಾ ಜವಾಬ್ದಾರಿ ನಿರ್ವಹಿಸುತ್ತಾರೆ.
ಸಾಮಾನ್ಯವಾಗಿ ಉದ್ಯಮ ರಂಗದಲ್ಲಿ ಕೇವಲ ಅಂಕಿ-ಅಂಶಗಳು ಮತ್ತು ಲಾಭ-ನಷ್ಟದ ಲೆಕ್ಕಾಚಾರಗಳಷ್ಟೇ ಇರುತ್ತವೆ ಎಂದು ಭಾವಿಸಲಾಗುತ್ತದೆ. ಆದರೆ ತಾವು ತಮ್ಮ ಜ್ಯುವೆಲ್ಲರಿ ವ್ಯಾಪಾರವನ್ನು ಸಂಪೂರ್ಣವಾಗಿ 'ಭಾವನಾತ್ಮಕವಾಗಿ' (Emotionally) ನಡೆಸುತ್ತಿರುವುದಾಗಿ ತಮನ್ನಾ ಹೇಳಿದ್ದಾರೆ. ಹಲವರು ಭಾವನಾತ್ಮಕವಾಗಿ ಉದ್ಯಮವನ್ನು ಹೇಗೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಬಹುದು. ಆದರೆ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯ ಕಾರ್ಯವೈಖರಿ ಬೇರೆಯಾಗಿರುತ್ತದೆ. ಒಬ್ಬ ಮಹಿಳೆಯಾಗಿ ನನ್ನ ಕೌಶಲ್ಯ ಮತ್ತು ಆಲೋಚನಾ ಶಕ್ತಿ ಭಿನ್ನವಾಗಿದೆ. ನನ್ನ ಗಮನವೆಲ್ಲವೂ ಅಂತಿಮ ಗುರಿ ಹಾಗೂ ಯಶಸ್ಸಿನ ಮೇಲಷ್ಟೇ (Eyes on the Prize) ಇದೆ ಎಂದು ನಟಿ ಹೇಳಿದ್ದಾರೆ.
ಬಹಳಷ್ಟು ಸೆಲೆಬ್ರಿಟಿಗಳು ತಮ್ಮದೇ ಬ್ರ್ಯಾಂಡ್ ಆರಂಭಿಸಿದರೂ ಅವು ಯಶಸ್ವಿಯಾಗದಿರಲು ಕಾರಣವನ್ನು ತಮನ್ನಾ ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ನಟ ನಟಿಯರು ಕಂಪನಿಯ ಮಾರ್ಕೆಟಿಂಗ್ ಅಥವಾ ರಾಯಭಾರಿಯಾಗಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಉತ್ಪನ್ನದ ತಯಾರಿಕೆ ಅಥವಾ ರಿಟೇಲ್ ರಚನೆಯ ಬಗ್ಗೆ ಆಳವಾದ ಜ್ಞಾನವಿರುವುದಿಲ್ಲ. ಆದರೆ ತಮ್ಮ ಜ್ಯುವೆಲ್ಲರಿ ಸಂಸ್ಥೆಯಲ್ಲಿ ತಾವೇ 'ಕ್ರಿಯೇಟಿವ್ ಡೈರೆಕ್ಟರ್' ಆಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ವಿನ್ಯಾಸ ಹಾಗೂ ಮಳಿಗೆಗೆ ತಲುಪುವ ಸಣ್ಣ ವಸ್ತುವನ್ನೂ ತಾವೇ ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ತಮನ್ನಾ ಸ್ವಂತ ಉದ್ಯಮಿ ಹುಟ್ಟು ಹಾಕಿ ಸುಮ್ಮನೆ ಕುಳಿತುಕೊಂಡಿಲ್ಲ. ಉದ್ಯಮ ಪ್ರತಿ ವಿಭಾಗ, ಪ್ರತಿ ಹಂತದ ಮಾಹಿತಿ ಇರಬೇಕು ಎಂದು ತಮ್ಮದೇ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದಾರೆ. ಸಂಸ್ಥೆಯಲ್ಲಿ ಯಾವುದೇ ಕೆಲಸ ಸಣ್ಣದಲ್ಲ ಅಥವಾ ದೊಡ್ಡದಲ್ಲ. ಸಿನಿಮಾದಲ್ಲಿ ನಿರ್ದೇಶಕ ಹೇಗೆ ಎಲ್ಲಾ ವಿಭಾಗಗಳನ್ನು ತಿಳಿದುಕೊಳ್ಳುತ್ತಾನೋ, ಹಾಗೆಯೇ ಉದ್ಯಮಿಯೂ ಪ್ರತಿಯೊಂದು ಹಂತದಲ್ಲೂ ಭಾಗಿಯಾದಾಗ ಮಾತ್ರ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯ ಎಂದಿದ್ದಾರೆ.
ತಮನ್ನಾ ಫೈನ್ ಜ್ಯುವೆಲ್ಲರಿ ಕಳೆದೆರಡು ವರ್ಷದಲ್ಲಿ ಹಂತ ಹಂತವಾಗಿ ಬೆಳೆದು ಬಂದಿದೆ. ಸದ್ಯ ಯಶಸ್ಸಿಯಾಗಿ ಸಾಗುತ್ತಿದೆ. ಆದರೆ ಈ ಉದ್ಯಮ ಶಾಖೆಗಳನ್ನು ವಿಸ್ತರಿಸುವತ್ತ ಮಾತ್ರ ಗುರಿ ಹೊಂದಿಲ್ಲ. ತಮನ್ನಾ ಫೈನ್ ಜ್ಯುವೆಲ್ಲರಿ ಶೇರು ಮಾರುಕಟ್ಟೆಯಲ್ಲಿ ಐಪಿಒ ಲಿಸ್ಟಿಂಗ್ ಮಾಡುವ ಯೋಜನೆ ಹೊಂದಿದೆ ಎಂದು ತಮನ್ನಾ ಹೇಳಿದ್ದಾರೆ. ಸದ್ಯ ಸಿನಿಮಾದಲ್ಲೂ ಯಶಸ್ವಿಯಾಗಿರುವ ತಮನ್ನಾ ಭವಿಷ್ಯದಲ್ಲ ಉದ್ಯಮದಲ್ಲಿ ಮುಂದುವರಿಯಲು ಎಲ್ಲಾ ಪ್ಲಾನ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.