
ಮಲಯಾಳಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ನಟಿ ಐಶ್ವರ್ಯ ಲಕ್ಷ್ಮಿ. ನಂತರ ಹಲವು ಸಿನಿಮಾಗಳಲ್ಲಿ ಹೀರೋಯಿನ್ ಆದ್ರು. ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನೂ ಆಕ್ಟೀವ್ ಇಲ್ಲದಿದ್ರೂ, ಐಶ್ವರ್ಯ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಆಗಾಗ ಸುದ್ದಿಯಾಗ್ತಾರೆ. ಇತ್ತೀಚೆಗೆ ಅವರ ಫ್ಯಾಷನ್ ಸ್ಟೇಟ್‌ಮೆಂಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿ, ಟ್ರೋಲ್‌ಗೂ ಕಾರಣವಾಗಿದ್ದವು.
ಈಗ ಮತ್ತೊಮ್ಮೆ ಐಶ್ವರ್ಯ ಲಕ್ಷ್ಮಿ ಅವರ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಆದ್ರೆ ಈ ಸಲ ಟ್ರೋಲ್ ಅಷ್ಟೇ ಅಲ್ಲ, ಜನರಿಂದ ಭಾರೀ ಟೀಕೆಯೂ ವ್ಯಕ್ತವಾಗ್ತಿದೆ. ಇತ್ತೀಚೆಗೆ ಐಶ್ವರ್ಯ ಲಕ್ಷ್ಮಿ ತಿರುವನಂತಪುರದಲ್ಲಿ ನಡೆದ ಒಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದರು. ಬಿಳಿ ಬಣ್ಣದ ಗೌನ್ ರೀತಿಯ ಡ್ರೆಸ್ ಹಾಕಿದ್ದರು. ಜೊತೆಗೆ ಸಿಂಪಲ್ ಆಗಿ ಆಭರಣ ಧರಿಸಿದ್ದರು. ಆದರೆ, ಆ ಡ್ರೆಸ್‌ನ ಕುತ್ತಿಗೆಯ ಭಾಗವೇ (ನೆಕ್‌ಲೈನ್) ಕೆಲವರ ಕಣ್ಣು ಕೆಂಪಾಗಿಸಿದೆ.
ಕಾರ್ಯಕ್ರಮದ ವಿಡಿಯೋಗಳು ಹೊರಬಂದ ಬೆನ್ನಲ್ಲೇ, ಕಾಮೆಂಟ್‌ಗಳ ಸುರಿಮಳೆಯೇ ಆಗಿದೆ. 'ಸಿನಿಮಾಗಳಲ್ಲಿ ಚಾನ್ಸ್ ಕಡಿಮೆ ಆಯ್ತು. ಅದಕ್ಕೇ ಈ ತರಹ ಬಟ್ಟೆ ಹಾಕಿಕೊಂಡು ಬಂದಿದ್ದಾರೆ. ನಾಚಿಕೆ ಆಗಲ್ವಾ... ಲಜ್ಜೆಗೆಟ್ಟವರು' ಅಂತ ಹಲವರು ಕಾಮೆಂಟ್ ಮಾಡಿ ಕ್ಲಾಸ್ ತಗೊಂಡಿದ್ದಾರೆ. 'ಇವರನ್ನು ನೋಡಿಯೇ ಬೇರೆ ಹೆಣ್ಣುಮಕ್ಕಳು ಇಂಥಾ ಡ್ರೆಸ್ ಕಾಪಿ ಹೊಡೆಯೋದು', 'ಹೆಂಗಸರೆಲ್ಲಾ ಯಾಕೆ ಹೀಗೆ?'.
'ಹೀಗೆಲ್ಲಾ ತೋರಿಸಿದ್ರೆ ಮಾತ್ರನಾ ಅವಕಾಶ ಸಿಗೋದು?', 'ಅಯ್ಯೋ, ಇವಳಾ... ಕಷ್ಟ', 'ತಿಳಿವಳಿಕೆ ಇರೋ ಹುಡುಗೀರು ತಮ್ಮ ಪ್ರೈವೇಟ್ ಪಾರ್ಟ್ಸ್ ಹೀಗೆ ತೋರಿಸೋದು ಯಾಕೆ? ಡ್ರೆಸ್ಸನ್ನು ಡೀಸೆಂಟ್ ಆಗಿ ಹಾಕಿದ್ರೂ ಸುಂದರವಾಗಿ ಕಾಣ್ತಾರೆ. ಇದು ಸ್ವಲ್ಪ ಜಾಸ್ತಿ ಆಯ್ತು', 'ಹೀಗೆಲ್ಲಾ ತೋರಿಸದಿದ್ರೆ ಉದ್ಘಾಟನೆ ಮಾಡೋಕೆ ಆಗಲ್ವಾ? ಕಷ್ಟ', 'ನಾಚಿಕೆ, ಸ್ವಾಭಿಮಾನ ಅನ್ನೋ ಪದಗಳೆಲ್ಲಾ ಇವರಿಗೆ ಗೊತ್ತಿದ್ಯಾ? ಡೀಸೆಂಟ್ ಆಗಿ ಬಟ್ಟೆ ಹಾಕೋರು ಯಾರೂ ಸಿಗಲಿಲ್ವಾ?' ಹೀಗೆ ಟೀಕೆಗಳ ಸರಮಾಲೆಯೇ ಹರಿದುಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.