ಶೂಟಿಂಗ್ ಇಲ್ಲದಿದ್ದರೆ ದರ್ಶನ್ ಅಪ್ಪಟ ರೈತ : ದನದ ಕೊಟ್ಟಿಗೆಯಲ್ಲಿ ತಾವೇ ಸಗಣಿ ಎತ್ತುತ್ತಾರೆ!

Published : Mar 10, 2017, 05:51 PM ISTUpdated : Apr 11, 2018, 12:36 PM IST
ಶೂಟಿಂಗ್ ಇಲ್ಲದಿದ್ದರೆ ದರ್ಶನ್ ಅಪ್ಪಟ ರೈತ : ದನದ ಕೊಟ್ಟಿಗೆಯಲ್ಲಿ ತಾವೇ ಸಗಣಿ ಎತ್ತುತ್ತಾರೆ!

ಸಾರಾಂಶ

ತೆರೆ ಮೇಲೆ ಹತ್ತಾರು ಮಂದಿಗೆ ಮಣ್ಣು ಮುಕ್ಕಿಸುವ ಈ ನಟ, ಪಂಚೆ ಕಟ್ಟಿಕೊಂಡು ಹಾಲು ಕರೆಯುತ್ತಾರೆ. ಹಸುಗಳಿಗೆ ಮೇವು ಹಾಕುತ್ತಾರೆ. ತಲೆಗೆ ಟವಲ್ ಸುತ್ತಿಕೊಂಡು ಕೈಲ್ಲೊಂದು ಸನಿಕೆ, ಗುದ್ದಲಿ ಹಿಡಿದು ಗದ್ದೆಗೆ ಇಳಿದರೆ ಅಪ್ಪಟ ರೈತ. ಹೀಗೆ ಒಬ್ಬ ಸ್ಟಾರ್ ನಟ ಸಾಮಾನ್ಯ ರೈತನ ಮಗನಂತೆ ದುಡಿಯುವುದು ಎಲ್ಲಿ ಗೊತ್ತಾ? ಮೈಸೂರಿನಿಂದ ಕೆಲವೇ ಕಿ.ಮೀ.ಗಳ ದೂರದಲ್ಲಿರುವ ಟಿ.ನರಸೀಪುರದಲ್ಲಿರುವ ಅವರದ್ದೇ ಫಾರಂ ಹೌಸ್‌ನಲ್ಲಿ.

ಅವರು ಪಂಚ್ ಡೈಲಾಗ್‌ಗಳನ್ನು ಪವರ್ ಫುಲ್ಲಾಗಿ ಹೇಳುವ ಚಾಲೆಂಜಿಂಗ್ ಸ್ಟಾರ್. ಡೈಲಾಗ್ ಹೇಳು ಲಕ್ಷಾಂತರ ಮಂದಿಯನ್ನು ಕುಣಿಯುವಂತೆ ಮಾಡುವ ಮಾಸ್ ಮಹರಾಜ. ಅದೆಷ್ಟೋ ಹುಡುಗಿಯರ ಕನಸಿನ ಕುವರ. ಎಲ್ಲರೂ ಕತ್ತೆತ್ತಿ ನೋಡಬೇಕಾದ ಆರಡಿ ತರುಣ. ಹೊರಜಗತ್ತಿಗೆ ಬಾಕ್ಸ್ ಆಫೀಸ್ ಸುಲ್ತಾನ. ಆದರೆ ಶೂಟಿಂಗ್ ಇಲ್ಲದೇ ಇದ್ದಾಗೆಲ್ಲಾ ಅಪ್ಪಟ ರೈತ. ಲುಂಗಿ ಕಟ್ಟಿಕೊಂಡು ಹಸುಗಳಿಗೆ ಮೇವು ಹಾಕುವ ಭಾವುಕ ಜೀವಿ. ಸಾಕಿದ ಪ್ರಾಣಿಗಳಿಗೆ ಚೂರು ಹುಷಾರು ತಪ್ಪಿದರೂ ಬೇಜಾರಾಗುವ ಭಾವುಕ ಜೀವಿ. ಈ ಸೂಪರ್‌ಸ್ಟಾರ್‌ನ ಆಪ್ತ ಜಗತ್ತು ಹೇಗಿದೆ ಗೊತ್ತಾ?

ತೆರೆ ಮೇಲೆ ಹತ್ತಾರು ಮಂದಿಗೆ ಮಣ್ಣು ಮುಕ್ಕಿಸುವ ಈ ನಟ, ಪಂಚೆ ಕಟ್ಟಿಕೊಂಡು ಹಾಲು ಕರೆಯುತ್ತಾರೆ. ಹಸುಗಳಿಗೆ ಮೇವು ಹಾಕುತ್ತಾರೆ. ತಲೆಗೆ ಟವಲ್ ಸುತ್ತಿಕೊಂಡು ಕೈಲ್ಲೊಂದು ಸನಿಕೆ, ಗುದ್ದಲಿ ಹಿಡಿದು ಗದ್ದೆಗೆ ಇಳಿದರೆ ಅಪ್ಪಟ ರೈತ. ಹೀಗೆ ಒಬ್ಬ ಸ್ಟಾರ್ ನಟ ಸಾಮಾನ್ಯ ರೈತನ ಮಗನಂತೆ ದುಡಿಯುವುದು ಎಲ್ಲಿ ಗೊತ್ತಾ? ಮೈಸೂರಿನಿಂದ ಕೆಲವೇ ಕಿ.ಮೀ.ಗಳ ದೂರದಲ್ಲಿರುವ ಟಿ.ನರಸೀಪುರದಲ್ಲಿರುವ ಅವರದ್ದೇ ಫಾರಂ ಹೌಸ್‌ನಲ್ಲಿ.

ಸಾಮಾನ್ಯವಾಗಿ ಸ್ಟಾರ್ ನಟರ ಫಾರಂ ಹೌಸ್‌ಗಳೆಂದರೆ ಅವು ಒಂದು ರೀತಿಯಲ್ಲಿ ಸಿನಿಮಾ ಸ್ಟುಡಿಯೋಗಳಂತೆ ಕಂಗೊಳಿಸುತ್ತಿರುತ್ತವೆ. ಆದರೆ, ದರ್ಶನ್ ಅವರ ಈ ಹೌಸ್ ಎಲ್ಲದಕ್ಕಿಂತ ಭಿನ್ನ. ಹಸು, ಎತ್ತು, ಕುದುರೆ, ಮೇಕೆ, ಕುರಿ, ಹಂದಿ, ವಿವಿಧ ರೀತಿಯ ಪಕ್ಷಗಳು, ನಾಯಿ, ಕೋತಿ... ಹೀಗೆ ಪ್ರಾಣಿ ಜಗತ್ತೇ ಅಲ್ಲಿದೆ. ಜತೆಗೆ ಈ ಪ್ರಾಣಿಗಳಿಗೆ ಬೇಕಾದ ಮೇವು ನೀಡುವ ಹಸಿರು ತೋಟವೂ ಉಂಟು. ಜೋಳದ ಜತೆಗೆ ನೂರಾರು ತೆಂಗಿನ ಮರಗಳು, ಮಾವಿನ ಗಿಡಗಳು, ಬಾಳೆ ತೋಟ, ಅಲ್ಲಲ್ಲಿ ತರಕಾರಿಯನ್ನೂ ಬೆಳೆಯುವ ಕೈ ತೋಟ. ದರ್ಶನ್ ಅವರು ನಿಜ ಜೀವನದಲ್ಲಿ ಹೇಗಿರುತ್ತಾರೆಂಬ ಕುತೂಹಲ ಇದ್ದರೆ ಒಮ್ಮೆ ಅವರಿದ್ದಾಗ ಈ ತೋಟಕ್ಕೆ ಭೇಟಿ ಕೊಟ್ಟರೆ ಸಾಕು.

ಕುದುರೆಗೆ ಹುಷಾರು ತಪ್ಪಿದಾಗ ಭಾವುಕರಾಗುತ್ತಾರೆ

ದನದ ಕೊಟ್ಟಿಗೆಯಲ್ಲಿ ತಾವೇ ಸಗಣಿ ಎತ್ತುತ್ತಾರೆ. ತಾವೇ ಮುಂದೆ ನಿಂತು ಹಾಲು ಕರೆಯುತ್ತಾರೆ. ಟ್ರ್ಯಾಕ್ಟರ್ ಹತ್ತಿ ಭೂಮಿ ಉಳುತ್ತಾರೆ. ಎಲ್ಲೇ ಚಿತ್ರೀಕರಣದಲ್ಲಿದ್ದರೂ ಯಾವುದಾದರೂ ಪ್ರಾಣಿಗೆ ಹುಷಾರಿಲ್ಲ ಅಂದರೆ ಕೆಲವೇ ಗಂಟೆಗಳಲ್ಲಿ ಫಾರಂ ಹೌಸ್ ತಲುಪುತ್ತಾರೆ. ಒಮ್ಮೆ ತಮ್ಮ ಮುದ್ದಿನ ಕುದುರೆ ಹುಷಾರು ತಪ್ಪಿದಾಗ ದರ್ಶನ್ ಭಾವುಕರಾಗಿದ್ದನ್ನು ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಕುದುರೆಗಳಿಗೆ ಹಾಲು ಕುಡಿಸಲು ಹಸು ಸಾಕುತ್ತಾರೆ

ದರ್ಶನ್ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವುದು ಈ ಪ್ರಾಣಿಗಳನ್ನು. 8 ಏಮು ಪಕ್ಷಿಗಳು, 5 ಟರ್ಕಿ ಕೋಳಿಗಳು, ಹತ್ತಾರು ಕೋತಿಗಳು, 5 ಕುದುರೆ, 30 ಹಸು, 4 ಎತ್ತು, 30 ಕುರಿಗಳು, 10 ಬಾತುಕೋಳಿಗಳು, 8 ನಾಯಿಗಳು ಅವರ ಫಾರಂ ಹೌಸ್‌ನಲ್ಲಿವೆ. ಬೆಂಗಳೂರಿನಲ್ಲಿ ಮನೆಯಲ್ಲಿ ವಿವಿಧ ಜಾತಿಯ, ಹೊರ ದೇಶಗಳಿಂದ ತರಿಸಿದ ನೂರಾರು ಪಕ್ಷಿಗಳನ್ನು ಸಾಕುತ್ತಿದ್ದಾರೆ. ಅವರ ಮನೆ ಒಂದು ರೀತಿಯಲ್ಲಿ ಪಕ್ಷಿ ಕಾಶಿಯಂತೆ ಕಾಣುತ್ತದೆ. ಕುದುರೆಗಳಿಗೆ ಹಾಲು ಕುಡಿಸುವುದಕ್ಕಾಗಿಯೇ ಹಸುಗಳನ್ನು ಸಾಕುತ್ತಿದ್ದಾರೆ. ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಈ ಫಾರಂ ಹೌಸ್ ಅನ್ನು ಬಳಸುತ್ತಿಲ್ಲ ಎಂಬುದು ವಿಶೇಷ. ಚಾಲೆಂಜಿಂಗ್ ಸ್ಟಾರ್‌ನ ಮತ್ತೊಂದು ಮುಖಕ್ಕೆ ಸಾಕ್ಷಿಯಂತೆ ಈ ಅವರ ಫಾರಂ ಹೌಸ್‌ನ ಪ್ರಾಣಿ ಜಗತ್ತು ಬದುಕು ಕಟ್ಟಿಕೊಂಡಿದೆ.

(ಕನ್ನಡಪ್ರಭ ವಾರ್ತೆ)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಚಳಿಗಾಲದ ಟೈಮಲ್ಲೇ ಹಾಟ್‌ಬ್ಯೂಟಿ ಆದ ರಾಧಾಮಿಸ್‌!
ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಸೀರಿಯಲ್‌ ತಾರೆಯರು!