ಹೇಗಿದೆ ’6 ಟು 6’ ಚಿತ್ರ?

Published : Apr 21, 2018, 05:53 PM ISTUpdated : Apr 21, 2018, 05:54 PM IST
ಹೇಗಿದೆ  ’6 ಟು 6’ ಚಿತ್ರ?

ಸಾರಾಂಶ

ಈ ಸಿನಿಮಾದ ಎಲ್ಲಾ ದೃಶ್ಯಗಳು ನೋಡುತ್ತಾ ಹೋದಂತೆ ಚೆನ್ನಾಗಿದೆ  ಎನಿಸುತ್ತೆ. ಆದರೆ ಒಂದಕ್ಕೊಂದು ಬೆಸೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತೇನೋ? ಎಲ್ಲವೂ ಬಿಡಿ ಬಿಡಿಯಾಗಿದೆ. ಯಾರೂ ಮುಖ್ಯರಲ್ಲ. ಯಾವುದೂ ಮುಖ್ಯವಲ್ಲ ಎನಿಸುತ್ತದೆ. ಆದರೆ ಮಾತಲ್ಲೇ ಚಿತ್ರವನ್ನು ಕಟ್ಟಿದ್ದಾರೆ. ಮೌನವಾಗಿಯೇ  ಇರುವ ನಾಯಕಿಯ ಮೌನವನ್ನು ಮುರಿಯಲು ನಾಯಕ ಚಾಟರ್‌ಬಾಕ್ಸ್  ಆಗುತ್ತಾನೆ. ವಿಭಿನ್ನ ಎನ್ನುವ ಡೈಲಾಗ್‌ಗಳನ್ನು ನಾಯಕ ಮಾತಿಲ್ಲಿ ತಂದಿದ್ದಾರೆ.

ಬೆಂಗಳೂರು: ಈ ಸಿನಿಮಾದ ಎಲ್ಲಾ ದೃಶ್ಯಗಳು ನೋಡುತ್ತಾ ಹೋದಂತೆ ಚೆನ್ನಾಗಿದೆ  ಎನಿಸುತ್ತೆ. ಆದರೆ ಒಂದಕ್ಕೊಂದು ಬೆಸೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತೇನೋ? ಎಲ್ಲವೂ ಬಿಡಿ ಬಿಡಿಯಾಗಿದೆ. ಯಾರೂ ಮುಖ್ಯರಲ್ಲ. ಯಾವುದೂ ಮುಖ್ಯವಲ್ಲ ಎನಿಸುತ್ತದೆ. ಆದರೆ ಮಾತಲ್ಲೇ ಚಿತ್ರವನ್ನು ಕಟ್ಟಿದ್ದಾರೆ. ಮೌನವಾಗಿಯೇ  ಇರುವ ನಾಯಕಿಯ ಮೌನವನ್ನು ಮುರಿಯಲು ನಾಯಕ ಚಾಟರ್‌ಬಾಕ್ಸ್  ಆಗುತ್ತಾನೆ. ವಿಭಿನ್ನ ಎನ್ನುವ ಡೈಲಾಗ್‌ಗಳನ್ನು ನಾಯಕ ಮಾತಿಲ್ಲಿ ತಂದಿದ್ದಾರೆ.

ಶಂಖನಾದ ಅರವಿಂದ್ ನಿರ್ಮಾಪಕರಾಗಿದ್ದು ತಮ್ಮ ಅನುಭವವನ್ನೂ ಇಲ್ಲಿ  ತಂದಿದ್ದಿರಬಹುದು. ತಾರಖ್ ಪೊನ್ನಪ್ಪ ಹೊಸ ಹುರುಪಲ್ಲೇ ಅಭಿನಯಿಸಿದ್ದಾರೆ. ವಾಯ್ಸ್‌ನಲ್ಲಿ ಗಟ್ಸ್ ಇದೆ. ಹೀರೋ ಆಗಲು ಇದೊಂದು ಮೊದಲ ಹೆಜ್ಜೆಯಾಗಬಹುದು. ನಾಯಕಿ ಸ್ವರೂಪಿಣಿ ಕೂಡ ಮೊದಲ ಎಂಟ್ರಿಯಾಗಿದ್ದು ಮೌನವಾಗಿ ನಟಿಸಿದ್ದಾರೆ. ಪರೋಪಕಾರಿಯಾದ ನಾಯಕ ನಟ ಹಳ್ಳಿಯಿಂದ ಸಿಟಿಗೆ ಬಸ್‌ನಲ್ಲಿ ಪಯಾಣಿಸುತ್ತಾನೆ. ಮತ್ತೆ ವಾಪಸ್ ಬರುತ್ತಾನಾ? ಅಲ್ಲಿ ಏನೇನಾಗುತ್ತದೆ? ಆಗ ಈ ಹಳ್ಳಿಯಲ್ಲೀ ಏನಾಗುತ್ತದೆ. ಚಾನೆಲ್‌ನ ವಿಸ್ಮಯ ತಂಡದವರಿಗೂ ಈ ಹಳ್ಳಿಯ ಕತೆಗೂ, ಸಿಟಿಯತ್ತ ಹೋದ ನಾಯಕನಿಗೂ, ವಿಲನ್‌ಗಳ ಎಂಟ್ರಿಗೂ, ಸ್ವಾಮಿಯ ಎಂಟ್ರಿಗೂ ಹೇಗೆಲ್ಲಾ ಸಂಬಂಧವಿದೆ. ಅವೆಲ್ಲವೂ ಒಂದಕ್ಕೊಂದು ಹೇಗೆ ಬೆಸೆಯುತ್ತವೆ ಎನ್ನುವುದೇ ಇಲ್ಲಿನ ಚಿತ್ರದ ಚಿತ್ರಕತೆ.

ಸುರೇಶ್ ಹೆಬ್ಳೀಕರ್, ಮೈಸೂರು ರಮಾನಂದ್, ಸದಾಶಿವ ಬ್ರಹ್ಮಾವರ್ ಹಾಗೂ ಶಂಖನಾದ ಅರವಿಂದ್ ಅವರಷ್ಟೇ ಹಳಬರು. ಕೆ ಕಲ್ಯಾಣ್ ಅವರ ಹಾಡುಗಳನ್ನು ರಚಿಸಿದ್ದು ಅದಕ್ಕೆ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ. ನಿಜಕ್ಕೂ ಇದನ್ನು ಒಂದು ಪ್ರೇಮ ಕತೆಯ ಇನ್ನೊಂದು ಮುಖ ಎನ್ನಬಹುದು. ಪ್ರೀತಿಗಾಗಿ ಏನೆಲ್ಲಾ ಮಾಡುವ ನಾಯಕ  ನಾಯಕಿಗಾಗಿ ಎಂತಹ ತ್ಯಾಗ ಮಾಡುತ್ತಾನೆ ಎನ್ನುವುದೇ ಚಿತ್ರದ ಅಂತಿಮ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?