185 ಅಭ್ಯರ್ಥಿಗಳಿದ್ದರೂ ಮತಪತ್ರವಿಲ್ಲ, ಇವಿಎಂ ಬಳಕೆ: ಆಯೋಗದ ಅಚ್ಚರಿಯ ನಿರ್ಧಾರ

By Web DeskFirst Published Apr 1, 2019, 8:53 AM IST
Highlights

185 ಅಭ್ಯರ್ಥಿಗಳಿದ್ದರೂ ಇವಿಎಂ ಬಳಕೆ, ಚುನಾವಣೆಗೆ ಮತಪತ್ರವಿಲ್ಲ: ಆಯೋಗದ ಅಚ್ಚರಿಯ ನಿರ್ಧಾರ

ಹೈದರಾಬಾದ್[ಏ.01]: 185 ಅಭ್ಯರ್ಥಿಗಳು ಸ್ಪರ್ಧಿಸಿರುವ ನಿಜಾಮಾಬಾದ್ ಲೋಕಸಭಾ ಚುನಾವಣೆಗೆ ಮತಪತ್ರಗಳನ್ನು ಬಳಸಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಬೇಕು ಎಂದು ಚುನಾವಣಾ ಆಯೋಗ ಆದೇಶಿಸಿದೆ.

ಚುನಾವಣಾಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಿರುವ ಕೇಂದ್ರ ಚುನಾವಣಾ ಆಯೋಗ, 26,820 ಬ್ಯಾಲಟಿಂಗ್ ಯೂನಿಟ್‌ಗಳು, 2240 ಕಂಟ್ರೋಲ್ ಯೂನಿಟ್‌ಗಳು ಹಾಗೂ 1600 ವಿವಿಪ್ಯಾಟ್‌ಗಳನ್ನು ನೀಡಬೇಕು ಎಂದು ಆದೇಶಿಸಿದೆ. ‘1 ಇವಿಎಂನಲ್ಲಿ ಗರಿಷ್ಠ 64 ಅಭ್ಯರ್ಥಿಗಳು ಮಾತ್ರ ಸಾಲುವ ಕಾರಣ, 185 ಅಭ್ಯರ್ಥಿಗಳನ್ನು ಇವಿಎಂನಲ್ಲಿ ಅಳವಡಿಸಲು ಆಗುವುದಿಲ್ಲ. ಹೀಗಾಗಿ ಬ್ಯಾಲಟ್ ಪೇಪರ್ ಬಳಕೆ ನಡೆಯಬಹುದು’ ಎಂದು ಇತ್ತೀಚೆಗೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಈಗ ಇವಿಎಂ ಬಳಕೆಗೆ ಚುನಾವಣಾ ಆಯೋಗ ಆದೇಶಿಸಿರುವ ಕಾರಣ ಅದ್ಹೇಗೆ 185 ಅಭ್ಯರ್ಥಿಗಳನ್ನು ಇವಿಎಂನಲ್ಲಿ ಅಳವಡಿಲಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಕ್ಷೇತ್ರದಲ್ಲಿ ಟಿಆರ್‌ಎಸ್‌ನಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಲಕುಂಟ್ಲ ಕವಿತಾ ಹಾಗೂ ಕಾಂಗ್ರೆಸ್‌ನಿಂದ ಮಧು ಯಾಷ್ಕಿ ಗೌಡ್ ಸ್ಪರ್ಧಿಸಿದ್ದಾ

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

click me!