ನಿಖಿಲ್ ಸೋಲಿನ ನಂತ್ರ ರಾಜಕೀಯ ಸನ್ಯಾಸ ತಗೋತಾರಾ ಪುಟ್ಟರಾಜು?

By Web DeskFirst Published May 23, 2019, 2:57 PM IST
Highlights

ಈ ರಾಜಕಾರಣವೇ ಹಾಗೆ. ಒಮ್ಮೆ ಪ್ರಚಾರದ ವೇಳೆ ನೀಡಿದ್ದ ಹೇಳಿಕೆಗಳು ಈಗ ನೀಡಿದ್ದವರ ಕಾಲ ಬುಡವನ್ನು ಸುತ್ತಿಕೊಳ್ಳುತ್ತಿವೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವುದು ಪಕ್ಕಾ ಆಗುತ್ತಿದ್ದಂತೆಯೇ ಇದೀಗ ಸಚಿವ ಸಿ.ಎಸ್. ಪುಟ್ಟರಾಜು ಹೇಳಿಕೆ ಸಹಜವಾಗಿಯೇ  ಟೀಕೆಗೆ ಗುರಿಯಾಗಿದೆ.

ಬೆಂಗಳೂರು(ಮೇ. 23) ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಒಂದು ವೇಳೆ ಸೋತರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ’ ಎಂದು ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿಕೆ ನೀಡಿದ್ದರು.

ರಣರಣ ಮಂಡ್ಯದ ಪ್ರಚಾರದ ಭರಾಟೆ ವೇಳೆಯಲ್ಲಿ ನೀಡಿದ್ದ ಈ ಹೇಳಿಕೆ ಸುದ್ದಿ ಮಾಡಿತ್ತು. ಹಾಗಾದರೆ ಈಗ ನಿಖಿಲ್ ಸೋಲಿನ ಗಾದಿಯಲ್ಲಿ ಇದ್ದಾರೆ.. ಈಗ ಪುಟ್ಟರಾಜು ಏನು ಮಾಡುತ್ತಾರೆ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.

ಸೋಲಿಲ್ಲದ ಸರದಾರ ಖರ್ಗೆಗೆ ಸೋಲುಣಿಸಿದ ಉಮೇಶ್ ಜಾಧವ್

ಲೋಕಸಭಾ ಚುನಾವಣಾ ಫಲಿತಾಂಶ ಒಂದೊಂದಾಗಿ ಹೊರಬೀಳುತ್ತಿದ್ದು ರಾಜ್ಯದಲ್ಲಿ ಬಿಜೆಪಿಗೆ ಅಭೂರಪೂರ್ವ ಗೆಲುವು ಸಿಕ್ಕುತ್ತಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ನಿಖಿಲ್ ಸೋಲಿನ ಹಾದಿಯಲ್ಲಿದ್ದಾರೆ.

click me!