ಸೋಲಿಲ್ಲದ ಸರದಾರ ಖರ್ಗೆಗೆ ಸೋಲುಣಿಸಿದ ಉಮೇಶ್ ಜಾಧವ್

By Web Desk  |  First Published May 23, 2019, 2:55 PM IST

ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಶಾಕ್ ಕೊಟ್ಟಿದ್ದಾರೆ.


ಬೆಂಗಳೂರು, (ಮೇ. 23): ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರಿ ಆಘಾತ ಉಂಟಾಗಿದೆ.

ವಿರೋಧ ಪಕ್ಷದ ನಾಯಕನ ಖರ್ಗೆ ಅವರನ್ನು ಬಿಜೆಪಿಯ ಉಮೇಶ್ ಜಾಧವ್ ಅವರು ಸುಮಾರು 1 ಲಕ್ಷ ಅಧಿಕ ಮತಗಳಿಂದ ಸೋಲಿಸಿದ್ದಾರೆ.

Tap to resize

Latest Videos

ಕಾಂಗ್ರೆಸ್‌ನ ಹಿರಿಯ ನಾಯಕ ಖರ್ಗೆ ಅವರು ಬರೊಬ್ಬರಿ 9 ವಿಧಾನಸಭೆ ಹಾಗೂ ಎರಡು ಬಾರಿ ಲೋಕಸಭೆಗೆ ಪ್ರವೇಶ ಮಾಡಿದ್ದರು. ಆದ್ರೆ, 3ನೇ ಬಾರಿ ಲೋಕಸಭಾ ಪ್ರವೇಶ ಮಾಡಲು ಕನಸು ಕಾಣುತ್ತಿದ್ದ ಸೋಲಿಲ್ಲದ ಸರದಾರನಿಗೆ ಉಮೇಶ್ ಜಾಧವ್ ಶಾಕ್ ನೀಡಿದ್ದಾರೆ.

ವಿಶೇಷ ಅಂದ್ರೆ ಉಮೇಶ್ ಜಾಧವ್ ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಕಲಬುರಗಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.

ಒಮ್ಮೆಯೂ ಸೋಲಕಾಣದ ಮಲ್ಲಿಕಾರ್ಜುನ ಖರ್ಗೆ, ವಿರೋಧಪಕ್ಷದ ನಾಯಕನಾಗಿದ್ದರು. ಉತ್ತರ ಕರ್ನಾಟಕದ ಭಾಗಗಳಲ್ಲಿ ವ್ಯಾಪಕ ಪ್ರಭಾವಳಿ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉಮೇಶ್ ಜಾಧವ್ ಸುಲಭದ ತುತ್ತಾಗಲಿದ್ದಾರೆ ಎಂದು ಭಾವಿಸಲಾಗಿತ್ತು.  ಆದರೆ, ಮೋದಿ ಅಲೆ ಜಾಧವ್ ಅವರ ಕೈ ಹಿಡಿದಿದೆ. 

2014ರ ಫಲಿತಾಂಶ
ಡಾ. ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್) 5,07,193
ರೇವು ನಾಯಕ ಬೆಳಮಗಿ (ಬಿಜೆಪಿ) 4,32,460

click me!