ಕರ್ನಾಟಕದ ಮುಖ್ಯಮಂತ್ರಿ ಆಗ್ತಾರಾ ಬಿ ಎಲ್ ಸಂತೋಷ್?

By Web DeskFirst Published Apr 9, 2019, 1:10 PM IST
Highlights

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಟಿಕೆಟ್ ಕೊಡಿಸುವಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಪ್ರಮುಖ ಪಾತ್ರ ವಹಿಸಿದವರು. ಇವರಿಗೆ ಪತ್ರಕರ್ತರನ್ನು ಕಂಡರೆ ಅಷ್ಟಕ್ಕಷ್ಟೇ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪತ್ರಕರ್ತರನ್ನು ಜೊತೆ ಗ್ರೌಂಡ್ ರಿಪೋರ್ಟ್ ತೆಗೆದುಕೊಳ್ಳುತ್ತಿದ್ದಾರೆ. 

ಬೆಂಗಳೂರು (ಏ. 09):  ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಬಂದು 12 ವರ್ಷಗಳಾದರೂ ಯಾವತ್ತೂ ಪತ್ರಕರ್ತರನ್ನು ಕಂಡರೆ ದೂರ ಇರುತ್ತಿದ್ದ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಕಳೆದ ವಾರ ಪತ್ರಕರ್ತರನ್ನು ತಾವೇ ಕರೆದು ಬರೋಬ್ಬರಿ ಒಂದೂವರೆ ಗಂಟೆ ಲೋಕಾಭಿರಾಮ ಮಾತನಾಡಿದರು.

ಯಡಿಯೂರಪ್ಪನವರಿಂದ ಹಿಡಿದು ತೇಜಸ್ವಿ ಸೂರ್ಯವರೆಗೆ ಎಲ್ಲ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಸಂತೋಷ್‌, ‘ನೀವು ಮುಂದೆ ಮುಖ್ಯಮಂತ್ರಿ ಆಗುತ್ತೀರಾ’ ಎಂದು ಕೇಳಿದಾಗ, ‘ಇಲ್ಲ, ಮೋದಿ ನಂತರ ಪ್ರಚಾರಕರು ಯಾರೂ ಸಕ್ರಿಯ ರಾಜಕಾರಣಕ್ಕೆ ಬಂದಿಲ್ಲ. ಸಂಘದಿಂದ ಅದಕ್ಕೆ ಅನುಮತಿ ಇಲ್ಲ’ ಎಂದು ಹೇಳಿಕೊಂಡರು. ಏನೇ ಇರಲಿ ರಾಜ್ಯದ ಬಿಜೆಪಿ ಭವಿಷ್ಯದ ದೃಷ್ಟಿಯಿಂದ ಸಂತೋಷ್‌ ಅವರ ಪಾಲಿಟಿಕ್ಸನ್ನು ತುಂಬಾ ಗಮನವಿಟ್ಟು ನೋಡಲಾಗುತ್ತಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ತೇಜಸ್ವಿನಿ ಅನಂತ್ ಕುಮಾರ್ ಗೆ ಟಿಕೆಟ್‌ ಪಕ್ಕಾ ಎನ್ನಲಾಗಿದೆ. ಆದರೆ ಕೊನೆ ಕ್ಷಣದ ಬದಲಾವಣೆಯಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಡಲಾಯಿತು. ತೇಜಸ್ವಿ ಟಿಕೆಟ್ ಕೊಡಿಸುವಲ್ಲಿ ಬಿ ಎಲ್ ಸಂತೋಷ್ ಪ್ರಮುಖ ಪಾತ್ರ ವಹಿಸಿದ್ದರು. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!