ಫಲಿತಾಂಶಕ್ಕಿನ್ನೂ 13 ದಿನ, ಆದ್ರೆ ಪ್ರಜ್ವಲ್ ರೇವಣ್ಣ ಈಗಾಗಲೇ ಹಾಸನ ಸಂಸದ!

By Web DeskFirst Published May 7, 2019, 3:34 PM IST
Highlights

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲು  ಇನ್ನು ದಿನಗಳು ಬಾಕಿ ಇವೆ. ಆದರೆ ಈಗಾಗಲೇ ಪ್ರಜ್ವಲ್ ರೇವಣ್ಣ ಹಾಸನದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ! ಅರೆರೆ ಚುನಾವಣಾ ಆಯೋಗದ ಘೋಷಣೆಗೂ ಮುನ್ನವೇ ಫಲಿತಾಂಶ ಪ್ರಕಟ ಮಾಡಿದ್ದು ಯಾರು ಎಂದು ಅಚ್ಚರಿ ಆಗುತ್ತಿದ್ದೆಯಾ?

ಬೆಂಗಳೂರು[ಮೇ. 07] ಸೋಶಿಯಲ್ ಮೀಡಿಯಾದಲ್ಲಿ ಯಾವ ಕ್ಷಣಕ್ಕೆ ಯಾವುದು ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆರ್ ಸಿಬಿ ಪಂದ್ಯದಲ್ಲಿ ಕ್ಯಾಮರಾಮೆನ್ ತೋರಿಸಿದ ಚೆಲುವೆ ಒಂದೇ ದಿನದಲ್ಲಿ ಲಕ್ಷಾಂತರ ಫಾಲೋವರ್ ಗಳನ್ನು ಪಡೆದುಕೊಂಡುಬಿಟ್ಟಳು.

ವಿವಾಹ ಆಮಂತ್ರಣ ಪತ್ರಿಕೆಯೊಂದು ಇದೀಗ ಫುಲ್ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಪ್ರಜ್ವಲ್ ರೇವಣ್ಣ! ಜೂನ್ ತಿಂಗಳಿನಲ್ಲಿ ನಡೆಯಲಿರುವ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಆಗಮನ ಬಯಸುವವರ ದೊಡ್ಡ ಪಟ್ಟಿಯೇ ಇದೆ. ಅದರಲ್ಲಿ ಶ್ರೀಮತಿ ಅನಿತಾ ಮತ್ತು ಶ್ರೀ ಎಚ್.ಡಿ.ಕುಮಾರಸ್ವಾಮಿ, ಮಾನ್ಯ ಮುಖ್ಯಮಂತ್ರಿಗಳು, ಶ್ರೀಮತಿ  ಭವಾನಿ ಮತ್ತು ಶ್ರೀ ಎಚ್.ಡಿ.ರೇವಣ್ಣ , ಲೋಕೋಪಯೋಗಿ ಸಚಿವರು  ಸಾಲಿನಲ್ಲಿ ಪ್ರಜ್ವಲ್ ರೇವಣ್ಣ , ಮಾನ್ಯ ಲೋಕಸಭಾ ಸದಸ್ಯರು  ಎಂದು ಬರೆಯಲಾಗಿದೆ.

ಯಾರಾಗಲಿದ್ದಾರೆ ಕರ್ನಾಟಕ ಬಿಜೆಪಿ ನೂತನ ನಾವಿಕ

ಓವರ್ ಕಾನ್ಫಿಡೆನ್ಸ್ ಗೆ ಒಂದು ಅತ್ಯುತ್ತಮ ಉದಾಹರಣೆ ಅಂದರೆ ಇದು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಲವರು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಫಲಿತಾಂಶ ಘೋಷಣೆಗೂ ಮುನ್ನವೇ ಪ್ರಜ್ವಲ್ ರೇವಣ್ಣ ಹಾಸನದ ಎಂಪಿಯಾಗಿದ್ದಾರೆ.

click me!