
ನವದೆಹಲಿ[ಏ.17]: ಏ.13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದ ವಿಡಿಯೋ ಹಾಗೂ ಫೋಟೊಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೂರದರ್ಶನಕ್ಕೆ ನೀಡಿರುವ ಸಂದರ್ಶನದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
‘ಮಂಗಳೂರಿನಲ್ಲಿ ನಾನು ರೋಡ್ ಶೋ ಆಯೋಜಿಸಿರಲಿಲ್ಲ. ನಾನು ಕಾರಿನಲ್ಲಿ ಹೋಗುತ್ತಿರುವಾಗ ಜನರು ರಸ್ತೆಯ ಅಕ್ಕ ಪಕ್ಕ ನಿಂತಿದ್ದರು. ನಾನು ಕಾರಿನ ಬಾಗಿಲು ತೆರೆದು ಕೈಬೀಸಿದೆ. ಕಾರಿನಿಂದ ಹೊರಗೆ ನೋಡಿದರೆ ನನಗೆ ಅಚ್ಚರಿಯಾಗಿತ್ತು. ಮೈಲುಗಟ್ಟೆಲೆ ಜನರು ನೆರೆದಿದ್ದರು. ಅವರ ಅಭಿಮಾನಕ್ಕೆ ಮೆಚ್ಚಿ ನಾನು ಕಾರಿನಿಂದ ಹೊರಗೆ ನಿಂತಿದ್ದೆ. ರಾರಯಲಿಯ ಬಳಿಕ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿದ ದೃಶ್ಯವನ್ನು ನಾನು ಖುದ್ದಾಗಿ ಕಂಡು ಅಚ್ಚರಿಗೆ ಒಳಗಾದೆ. ಕಾರಿನಲ್ಲಿ ರಸ್ತೆಯ ಸುತ್ತುಮುತ್ತ 50 ಅಡಿ ಯಷ್ಟುದೂರದ ವರೆಗೆ ಮಾತ್ರ ಕಾಣುತ್ತಿತ್ತು. ಆದರೆ, ಅಲ್ಲಿ ನೆರೆದಿದ್ದ ಜನಸಾಗರ ಅಭೂತರ್ಪೂವಾಗಿತ್ತು. ಇಷ್ಟೊಂದು ಜನ ಸೇರಿರಬಹುದು ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ’ ಎಂದು ಹೇಳಿದ್ದಾರೆ.