ಬಿಜೆಪಿ ಗೆಲುವಿಗೆ ಪರದೆ ಹಿಂದೆ ನಿಂತ ವಿಪಕ್ಷ ನಾಯಕನ್ಯಾರು? ಅನಂತ ಸತ್ಯ!

Published : May 05, 2019, 06:00 PM ISTUpdated : May 05, 2019, 06:20 PM IST
ಬಿಜೆಪಿ ಗೆಲುವಿಗೆ ಪರದೆ ಹಿಂದೆ ನಿಂತ ವಿಪಕ್ಷ ನಾಯಕನ್ಯಾರು?  ಅನಂತ ಸತ್ಯ!

ಸಾರಾಂಶ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿರುವ ಅನಂತ್  ಕುಮಾರ್ ಹೆಗಡೆ ತಮ್ಮ ಗೆಲುವಿಗೆ ಅಸಲಿ ಕಾರಣ ಯಾರಾಗುತ್ತಾರೆ ಎಂದು ಹೇಳಿದ್ದಾರೆ.

ಕಾರವಾರ[ಮಾ. 05]  ಸುದೀರ್ಘ ರಾಜಕೀಯ ಚದುರಂಗದ ಪರಿಣಾಮವಾಗಿ ಕಾಂಗ್ರೆಸ್ ಉತ್ತರಕನ್ನಡ ಲೋಕಸಭಾ ಕ್ಷೇತ್ರವನ್ನ ಜೆಡಿಎಸ್‌ಗೆ ಬಿಟ್ಟಿದೆ. ನಮಗೆ ಚುನಾವಣೆ ಗೆಲ್ಲಲು ಸುಲಭ ಆಗಿದ್ದು ಇದರಿಂದಾಗಿಯೇ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆ.

ಕುಮಟಾದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಸಚಿವ ಅನಂತಕುಮಾರ ಹೆಗಡೆ ಚುನಾವಣೆಯಲ್ಲಿ ಪರದೆಯ ಹಿಂದೆ ಪರೋಕ್ಷವಾಗಿ ರಾಜಕಾರಣದಲ್ಲಿ ಸಹಕರಿಸಿದವರಿಗೂ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ನನ್ನ ಹೇಳಿಕೆ ಅರ್ಥ ಆಗದವರಿಂದ ವಿವಾದ ಸೃಷ್ಟಿ

ಆರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅನಂತಕುಮಾರ ಹೆಗಡೆ ತನ್ನ ಗೆಲುವಿಗೆ ಪರೋಕ್ಷವಾಗಿ ಬೇರೆ ಪಕ್ಷದ ಮುಖಂಡರೂ ಸಾಥ್ ನೀಡಿರುವ ಅರ್ಥದಲ್ಲಿ ಹೇಳಿದ್ದಾರೆ.

ಪರದೆಯ ಹಿಂದೆ ಇರುವವರ ಬಗ್ಗೆ ನಿಮಗ್ಯಾರಿಗೂ ಗೊತ್ತಿಲ್ಲ. ಗೊತ್ತಿರುವುದು ನನಗೆ ಮಾತ್ರ ಎಂದು ಅನಂತಕುಮಾರ ಹೆಗಡೆ ಹೇಳಿರುವುದು ರಾಜಕೀಯ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!