ಸಂಪುಟ ಸಚಿವರನ್ನು ಭೇಟಿಯಾದ ಪ್ರಧಾನಿ: ರಾತ್ರಿ NDA ಡಿನ್ನರ್ ಪಾರ್ಟಿ!

By Web DeskFirst Published May 21, 2019, 6:24 PM IST
Highlights

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ ಎರಡು ದಿನ ಬಾಕಿ| ಸಂಪುಟ ಸಚಿವರೊಂದಿಗೆ ಪ್ರಧಾನಿ ಮೋದಿ ಮಾತುಕತೆ| ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದ ಸಂಪುಟ ಸಭೆ| ಇಂದು ರಾತ್ರಿ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಎನ್ ಡಿಎ ಡಿನ್ನರ್ ಪಾರ್ಟಿ| ಸರ್ಕಾರ ರಚನೆಯ ಸಾಧ್ಯತೆ ಕುರಿತು ಚರ್ಚೆ ಸಂಭವ|

ನವದೆಹಲಿ(ಮೇ.21): ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೂ ಎರಡು ದಿನ ಬಾಕಿ ಇರುವಂತೆಯೇ, ಪ್ರಧಾನಿ ಮೋದಿ ಇಂದು ತಮ್ಮ ಸಂಪುಟ ಸಚಿವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಪ್ರಧಾನಿ ಮೋದಿ ಅವರನ್ನು ಅವರ ಸಹೋದ್ಯೋಗಿಗಳು ಸನ್ಮಾಸಿದರು. ಈ ಬಾರಿಯೂ ಎನ್ ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆ ವರದಿ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.

Visuals from Union Council of Minsters meeting at BJP office in Delhi. PM Narendra Modi also present pic.twitter.com/5F53KzWpVM

— ANI (@ANI)

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ರಾತ್ರಿ ಎನ್ ಡಿಎ ಮಿತ್ರಪಕ್ಷಗಳಿಗೆ ಡಿನ್ನರ್ ಪಾರ್ಟಿಗೆ ಆಹ್ವಾನ ನೀಡಿದ್ದು, ಸರ್ಕಾರ ರಚನೆಯ ಸಾಧ್ಯತೆಗಳ ಕುರಿತು ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

click me!