ಇವಿಎಂ ಹೊತ್ತೊಯ್ದ 500 ಮುಸುಕುಧಾರಿಗಳು: ಆತಂಕದಲ್ಲಿ ಆಯೋಗ!

By Web DeskFirst Published May 21, 2019, 5:58 PM IST
Highlights

ಮತಯಂತ್ರ ಹೊತ್ತೊಯ್ದ 500 ಜನ ಮುಸುಕುಧಾರಿಗಳು| ಚುನಾವಣಾಧಿಕಾರಿಗಳ ಮೇಲೆ ದಾಳಿ ಮಾಡಿ ಇವಿಎಂ ಕದ್ದರು| ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯಲ್ಲಿ ಘಟನೆ| ಬಿಜೆಪಿ ಮೈತ್ರಿಕೂಟದ ನ್ಯಾಶನಲ್ ಪೀಪಲ್ಸ್ ಪಾರ್ಟಿ ಕಾರ್ಯಕರ್ತರ ಮೇಲೆ ಅನುಮಾನ|

ಕುರುಂಗ್ ಕುಮೆ(ಮೇ.21): ಒಬ್ಬರಲ್ಲ, ಇಬ್ಬರಲ್ಲ, ಐವರಲ್ಲ. ಬರೋಬ್ಬರಿ 500 ಜನ ಮುಸುಕುಧಾರಿಗಳು ಆಯೋಗದ ಕಚೇರಿಗೆ ನುಗ್ಗಿ ಇವಿಎಂ ಮತಯಂತ್ರಗಳನ್ನು ಹೊತ್ತೊಯ್ದ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಕುರುಂಗ್ ಕುಮೆ ಜಿಲ್ಲೆಯಲ್ಲಿ ಇವಿಎಂ ಮತಯಂತ್ರ ಇಡಲಾಗಿದ್ದ ಕಚೇರಿಗೆ ನುಗ್ಗಿದ ಸುಮಾರು 500 ಜನ ಮುಸುಕುಧಾರಿಗಳು, ಚುನಾವಣಾಧಿಕಾರಿಗಳನ್ನು ಬೆದರಿಸಿ ಇವಿಎಂ ಮತಯಂತ್ರಗಳನ್ನು ಹೊತ್ತೊಯ್ದರು.

ನಂಪೆ ಜಿಲ್ಲೆಯಲ್ಲಿ ಮರು ಮತದಾನ ನಡೆಯುತ್ತಿದ್ದು, ಇದಕ್ಕಾಗಿ ಚುನಾವಣಾಧಿಕಾರಿಗಳು ಇವಿಎಂ ಮತಯಂತ್ರಗಳನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ಬಿಜೆಪಿ ಮೈತ್ರಿಕೂಟದ ನ್ಯಾಶನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ) ಕಾರ್ಯಕರ್ತರೇ ದಾಳಿಗೆ ಕಾರಣ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

click me!