ಉಡುಪಿಗೆ ಬಂದಿಳಿದ ದೋಸ್ತಿ ಅಭ್ಯರ್ಥಿ, ಗಮನ ಸೆಳೆದ ಡಿಫರೆಂಟ್ ಶಾಲು!

Published : Mar 22, 2019, 11:21 PM IST
ಉಡುಪಿಗೆ ಬಂದಿಳಿದ ದೋಸ್ತಿ ಅಭ್ಯರ್ಥಿ, ಗಮನ ಸೆಳೆದ ಡಿಫರೆಂಟ್ ಶಾಲು!

ಸಾರಾಂಶ

ದೋಸ್ತಿಗಳು ಒಂದು ಕಡೆ ಸೀಟು ಹಂಚಿಕೆ ಮಾಡಿಕೊಂಡಿವೆ. ಆದರೆ ಇಲ್ಲಿಯವರೆಗೆ ಚಿಹ್ನೆಗಳು  ಬೇರೆ ಬೇರೆಯಾಗಿದ್ದವು. ಆದರೆ ಈಗ ಅಧಿಕೃತವಾಗಿ ಉಡುಪಿಯ ಪ್ರಮೋದ್ ಮಧ್ವರಾಜ್ ಎರಡು ಚಿಹ್ನೆಯನ್ನು ಒಟ್ಟು ಮಾಡಿದ್ದಾರೆ.

ಉಡುಪಿ [ಮಾ. 22]  ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಉಡುಪಿಗೆ ಆಗಮಿಸಿದ್ದಾರೆ. ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಮಧ್ವರಾಜ್ ಕಾಂಗ್ರೆಸ್- ಜೆಡಿಎಸ್ ಚಿಹ್ನೆಯ ಶಾಲು ಧರಿಸಿದ್ದು  ಆಗಮಿಸಿದ್ದು ವಿಶೇಷವಾಗಿತ್ತು.

ಒಂದೇ ಶಾಲಿನಲ್ಲಿ ಎರಡು ಪಕ್ಷದ ಚಿಹ್ನೆ ಮುದ್ರಿಸಿಕೊಂಡಿರುವರುವ ಪ್ರಮೋದ್ ಮಧ್ವರಾಜ್ ಗಮನ ಸೆಳೇದರು. ಇಂತಹ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ
ಈ ಶಾಲನ್ನು 18 ರ ವರೆಗೆ ತೊಟ್ಟಿರುತ್ತೇನೆ ಎಂದು ಹೇಳಿದರು.

ದೇವೇಗೌಡ ಸ್ಪರ್ಧಿಸೋ ಕ್ಷೇತ್ರ ಫೈನಲ್, ನಾಮಪತ್ರ ಸಲ್ಲಿಸಲು ಮುಹೂರ್ತವೂ ಫಿಕ್ಸ್

ಉಡುಪಿಯಲ್ಲಿ ಕಾಂಗ್ರೆಸ್-  ಜೆಡಿಎಸ್ ಹಾಲು ಜೇನಿನಂತೆ ಬೆರೆಯಲಿದೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮೈತ್ರಿ ಧರ್ಮದಂತೆ ಜೆಡಿಎಸ್ ಅಭ್ಯರ್ಥಿ ಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸ್ತೇನೆ. ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ಅವಕಾಶ ಸಿಕ್ಕಿದೆ. ಮನೆಗೆ ಹೋಗುವ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ಮಾರ್ಚ್‌ 25 ಕ್ಕೆ ನಾಮಪತ್ರ ಸಲ್ಲಿಸುತ್ತೇನೆ
ಎರಡು ದಿನದಲ್ಲಿ ಎರಡು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!