ಪೊಲೀಸ್ ಮಹಾ ನಿರ್ದೇಶಕರ ಟ್ವೀಟ್ ವಿವಾದ

Published : Apr 19, 2019, 10:14 AM IST
ಪೊಲೀಸ್ ಮಹಾ ನಿರ್ದೇಶಕರ ಟ್ವೀಟ್ ವಿವಾದ

ಸಾರಾಂಶ

ಪೊಲೀಸ್ ಮಹಾನಿರ್ದೇಶಕರೋರ್ವರು ಮಾಡಿದ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಮತದಾನದ ಬಳಿಕ ಮಾಡಿದ ಟ್ವೀಟ್ ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಲೋಕಸಭಾ ಚುನಾ ಣೆಯಲ್ಲಿ ಗುರುವಾರ ಮತ ಚಲಾಯಿಸಿದ ಬಳಿಕ ರಾಜ್ಯ ಸಶಸ್ತ್ರ ಮೀಸಲು ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿ ರ್ದೇಶಕ ಭಾಸ್ಕರ್ ರಾವ್ ತಮ್ಮ ಫೋಟೋ ಸಹಿತ ಮಾಡಿರುವ ಟ್ವೀಟ್ ವಿವಾದಕ್ಕೀಡಾಗಿದೆ.

ಬೆಂಗಳೂರಿನ ಬಸವನಗುಡಿ ಮತಗಟ್ಟೆಯಲ್ಲಿ ಮತದಾನ ಮಾಡಿದ ಎಡಿಜಿಪಿ ಭಾಸ್ಕರ್ ರಾವ್ ಅವರು, ಶಾಯಿ ಹಾಕಿದ ಬೆರಳನ್ನು ತೋರಿಸುತ್ತ ಸೆಲ್ಫಿ ಫೋಟೋವನ್ನು ಟ್ವೀಟರ್‌ನ ತಮ್ಮ ಖಾತೆಯಲ್ಲಿ ಹಾಕಿದ್ದರು. ಅದರ ಜತೆಗೆ ‘ಮತದಾನ ಮಾಡಿ, ದೇಶ ಕಟ್ಟಿ. ಇಲ್ಲದಿದ್ದರೆ ಶೇ.20ರಷ್ಟು ಮತ ಪಡೆದ ‘ನಾಯಕರು’ ಅಲ್ಲೋಲ ಕಲ್ಲೋಲ ಮಾಡುತ್ತಾರೆ’ ಎಂದು ಎಡಿಜಿ ಪಿ ಬರೆದಿದ್ದರು. ಇದಕ್ಕೆ ಕೆಲವರು ಆಕ್ಷೇಪಿ ಸಿ, ಸರ್ಕಾರದ ಸೇವೆಯಲ್ಲಿದ್ದೂ ರಾವ್ ರಾಜಕೀಯ ಪಕ್ಷವೊಂದರ ಪರ ಮಾತನಾಡುತ್ತಿದ್ದಾರೆಂದು ನೆಟ್ಟಿಗರು ಟೀಕಿಸಿದ್ದಾರೆ. 

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ರಾವ್, ನಾನು ದುರುದ್ದೇಶಪೂರ್ವಕ ವಾಗಿ ಟ್ವೀಟ್ ಮಾಡಿಲ್ಲ. ಮತ ಪ್ರಮಾಣ ಕಡಿಮೆಯಾದ ರೆ ಅದನ್ನೇ ಜನಾದೇಶ ಎಂದು ಭಾವಿಸುತ್ತಾರೆ. ಹೀಗಾಗಿ ಮತದಾನ ದಲ್ಲಿ ಜನರು ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಿದ್ದೇನೆ ಎಂದರು. ನಾನು ನೆಲೆಸಿರುವ ಬಸವನ ಗುಡಿ ಕ್ಷೇತ್ರದಲ್ಲಿ ಶೇ. 49 ರಷ್ಟು ಮತದಾನವಾಗಿದೆ. ಅದರಲ್ಲಿ ಅತಿ ಹೆಚ್ಚು ಮತ ಪಡೆದವರು ಚುನಾಯಿತ ರಾಗುತ್ತಾರೆ. ಅಲ್ಪಮತ ಗಳಿಸಿದವರು ಇದೇ ಜನಾದೇಶ ಎಂದೂ ಬಿಂಬಿಸುತ್ತಾರೆ. ಇದು ಪ್ರಜಾಪ್ರಭುತ್ವ ಲಕ್ಷಣವಲ್ಲ ಎಂದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!