ಆರ್.ವಿ.ದೇಶಪಾಂಡೆಗೆ ಹೊಸ ಜವಾಬ್ದಾರಿ ನೀಡಿದ ಸಿಎಂ

Published : Apr 19, 2019, 09:37 AM IST
ಆರ್.ವಿ.ದೇಶಪಾಂಡೆಗೆ ಹೊಸ ಜವಾಬ್ದಾರಿ ನೀಡಿದ ಸಿಎಂ

ಸಾರಾಂಶ

ಲೋಕಸಭಾ ಚುನಾವಣೆಯ ಒಂದು ಹಂತದ ಮತದಾನ ಪ್ರಕ್ರಿಯೆ ರಾಜ್ಯದಲ್ಲಿ ಪೂರ್ಣಗೊಂಡಿದೆ. ಇದೀಗ 2ನೇ ಹಂತದ ಚುನಾವಣೆಗೆ ಇನ್ನೆರಡು ದಿನ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಸಚಿವ ದೇಶಪಾಂಡೆ ಅವರಿಗೆ ಹೊಸ ಜವಾಬ್ದಾರಿ ನೀಡಿದ್ದಾರೆ. 

ಕಾರವಾರ: ಉತ್ತರಕನ್ನಡ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗೆಲುವಿಗೆ ಸಚಿವ ದೇಶಪಾಂಡೆ ಅವರೇ ಜವಾಬ್ದಾರರು ಎಂದು ಹೇಳುವ ಮೂಲಕ ದೇಶಪಾಂಡೆಯವರನ್ನು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸುವ ತಂತ್ರವನ್ನು ಮುಖ್ಯಮಂತ್ರಿ ಕುಮಾ ರಸ್ವಾಮಿ ಅನುಸರಿಸಿದ್ದಾರೆ. 

ಕುಮಟಾದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಪಾಂಡೆ ಅವರ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತಿದೆ. ಅವರು ಪ್ರಚಾರ ನಡೆಸುತ್ತಿದ್ದಾರೆ. ಆನಂದ್ ಗೆಲ್ಲಲಿದ್ದಾರೆ. ಆ ಗೆಲುವಿನಲ್ಲಿ ದೇಶಪಾಂಡೆ ಮಹತ್ತರ ಪಾತ್ರ ವಹಿಸಲಿದ್ದಾರೆ ಎಂದರು. 

ಎರಡು ದಿನಗಳ ಹಿಂದೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರೂ ಹೀಗೆ ಹೇಳಿದ್ದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!